ಮುಖ್ಯ ಪುಟಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ರಮ್ಯಾಗೆ ಕೈಕೊಟ್ಟ ಪೋರ್ಚುಗಲ್ ಬಾಯ್ ಫ್ರೆಂಡ್....? (Ramya | Royal Challengers Bangalore | Sanju weds Geetha | Dandam Dashagunam)
ರಮ್ಯಾಗೆ ಕೈಕೊಟ್ಟ ಪೋರ್ಚುಗಲ್ ಬಾಯ್ ಫ್ರೆಂಡ್....?
PR
ಪೊರ್ಚುಗಲ್‌ನಿಂದ ಐಪಿಎಲ್ ಕ್ರಿಕೆಟ್ ನೋಡೋಕೆ ಬರೋದು ಅಂದ್ರೆ ತಮಾಷೆ ಮಾತಾ. ಅದರಲ್ಲೂ ರಮ್ಯಾ ಅವರಿಗಾಗಿ ಅವರ ಬಾಯ್ ಫ್ರೆಂಡ್ ಕ್ರಿಕೆಟ್ ನೆಪವೊಡ್ಡಿ ಬಂದರೂ ಅದು ದೊಡ್ಡತನವೆ. ಹೇಗಾದರೂ ಬರಲಿ ತಮ್ಮ ನೆಚ್ಚಿನ ನಟಿಯನ್ನು ವರಿಸಲಿರುವವನು ಹೇಗಿದ್ದಾನೆಂದು ನೋಡಿಯೇ ಬಿಡುವ ಎಂದು ಜಾತಕ ಜಾಲಾಡಲು ಕಾತುರರಾಗಿದ್ದ ಅವರ ಅಭಿಮಾನಿಗಳಿಗೆ ಈಗ ನಿರಾಸೆಯಾಗಿದೆ.
ರಮ್ಯಾ ಅವರ ಬಾಯ್ ಫ್ರೆಂಡ್ ಐಪಿಎಲ್ ಕ್ರಿಕೆಟ್ ನೋಡಲು ಬರದೆ ಕೈಕೊಟ್ಟಿದ್ದಾರಂತೆ. ಐಪಿಎಲ್‌ನಲ್ಲಿ ರಮ್ಯಾ ಅವರು ಮಾತ್ರ ಏಕಾಂಗಿಯಾಗಿ ಕಾಣುತ್ತಿದ್ದರು. ಅವರ ಅಭಿಮಾನಿಗಳು ಕಾತುರ ತಾಳಲಾರದೆ ಕಾರಿನೊಳಗೆಲ್ಲ ಇನುಕಿ-ಇನುಕಿ ನೋಡತೊಡಗಿದರು. ಇಣುಕಿ ನೋಡುತ್ತಿದ್ದ ಅವರ ತುಂಟ ಅಭಿಮಾನಿಗಳ ವರ್ತನೆಗೆ ಮುಖವನ್ನು ಕೆಂಪಗೆ ಮಾಡಿಕೊಂಡು ಗುರಾಯಿಸುತ್ತಾ ಬಾಯ್ ಬಾಯ್ ಮಾಡುತ್ತಾ ಸಾಗಿದರು ರಮ್ಯಾ.
ಆದರೆ ರಮ್ಯಾ ಅವರ ಆಸುಪಾಸಿನಲ್ಲಿ ಎಲ್ಲಿಯೂ ಪೋರ್ಚುಗಲ್ ಬಾಯ್ ಫ್ರೆಂಡ್ ಕಾಣಿಸಲಿಲ್ಲ. ಬಹುಶಃ ಕೈಕೊಟ್ಟಿರಬಹುದಾ ಎಂದೆಲ್ಲಾ ಅಕ್ಕಪಕ್ಕದಲ್ಲಿದ್ದ ಜನರು ಆಡಿಕೊಳ್ಳುತ್ತಿದ್ದರೆ, ಇನ್ನೂ ಕೆಲವರು ಕಾರಿನಲ್ಲಿದ್ದ ಚಾಲಕ, ಮತ್ತು ಹಿಂಬದಿ ಸೀಟಿನಲ್ಲಿ ಕುಳಿತಿದ್ದವರನ್ನೆಲ್ಲ ರಮ್ಯಾ ಅವರ ಪ್ರಿಯಕರ ಎಂದು ಆಡಿಕೊಳ್ಳುತ್ತಿದ್ದರು.
ತನ್ನ ಪ್ರಿಯಕರ ಮಾದ್ಯಮದಿಂದ ದೂರ ಉಳಿಯುವ ಸಂಕೋಚ ಸ್ವಭಾವದವರು ಹಾಗೆಲ್ಲಾ ಬಹಿರಂಗವಾಗಿ ಮಾತನಾಡಲು ಬಯಸುವುದಿಲ್ಲ ಎಂದೆಲ್ಲಾ ರಮ್ಯಾ ಅವರು ಈ ಹಿಂದೆಯೇ ಹೇಳಿದ್ದರು. ಜತೆಗೆ ನನ್ನ ಪ್ರಿಯಕರ ಐಪಿಎಲ್ ಕ್ರಿಕೆಟ್‌ನ ಬೆಂಗಳೂರು ರಾಯಲ್ ಚಾಲೆಂಜರ್ಸ್ ತಂಡದ ಆಟ ನೋಡಲು ಬರುತ್ತಿದ್ದಾರೆ. ಆಗ ಅವರನ್ನು ನೀವು ನೋಡಿಕೊಳ್ಳಿ. ಅಲ್ಲಿಯವರೆಗೂ ನಾನೇನು ಹೇಳಲು ಬಯಸುವುದಿಲ್ಲ ಎಂದು ತನ್ನ ಅಭಿಮಾನಿಗಳಿಗೆ ಆಶ್ವಾಸನೆ ಕೊಟ್ಟಿದ್ದರು.