ಈಗಾಗಲೇ ಹಲವಾರು ಪಾತ್ರಗಳನ್ನು ಯಶಸ್ವಿಯಾಗಿ ನಿಭಾಯಿಸಿರುವ ಸೂಪರ್ ಸ್ಟಾರ್ ಉಪೇಂದ್ರ ಈಗ ಮೂರು ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರದ ಹೆಸರು ಇನ್ನೂ ಬಹಿರಂಗವಾಗಿಲ್ಲ. ಕೆ. ಮಂಜು ಅವರ ಈ ಚಿತ್ರಕ್ಕೆ ಶ್ರೇಯಾ ನಾಯಕಿ. ಮೇ 25ರಂದು ಮಹೂರ್ತ ಕಾಣಲಿದೆ.
ತಮಿಳಿನ ಯಶಸ್ವಿ ನಿರ್ದೇಶಕ ಕೆ.ಎಸ್.ರವಿಕುಮಾರ್ ನಿರ್ದೇಶಿಸಿದ್ದ ಅಜಿತ್ ನಟಿಸಿರುವ 'ವರಲಾರು' ಚಿತ್ರದ ರಿಮೇಕ್ ಇದಾಗಿದ್ದು, ಕನ್ನಡದಲ್ಲಿ ಈ ಚಿತ್ರವನ್ನು ಶ್ರೀರಾಮ್ ಅವರು ನಿರ್ದೇಶಿಸಲಿದ್ದಾರೆ.
ಹಿರಿಯ ಉದ್ಯಮಿ ತಂದೆ ಹಾಗೂ ಆತನ ಇಬ್ಬರು ಮಕ್ಕಳ ಪಾತ್ರದಲ್ಲಿ ಉಪೇಂದ್ರ ಅವರು ಈ ಚಿತ್ರದಲ್ಲಿ ನಟಿಸಲಿದ್ದಾರೆ.
ಈಗಾಗಲೇ ರಕ್ತಕಣ್ಣೀರು, ಅನಾತರು, ಬುದ್ಧಿವಂತ ಮುಂತಾದ ರಿಮೇಕ್ ಚಿತ್ರಗಳಲ್ಲಿ ನಟಿಸಿ ಯಶಸ್ವಿಯಾಗಿರುವ ಉಪೇಂದ್ರ ಎರಡನೇ ಬಾರಿಗೆ ತ್ರಿಪಾತ್ರದಲ್ಲಿ ಕಾಣಿಸಿಕೊಳ್ಳಲಿರುವುದು ಈ ಚಿತ್ರದ ವಿಶೇಷ. 'ಹಾಲಿವುಡ್' ಚಿತ್ರದಲ್ಲಿ ಉಪೇಂದ್ರ ಅವರು ಮೊದಲ ಬಾರಿಗೆ ತ್ರಿಪಾತ್ರದಲ್ಲಿ ಕಾಣಿಸಿಕೊಂಡಿದ್ದರು.