ಮುಖ್ಯ ಪುಟಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ವಿಷ್ಣುವರ್ಧನ್ ಹೆಸರಲ್ಲಿ ಕ್ರಿಕೆಟ್ ಮ್ಯಾಚ್ ಆರಂಭ (Vishnuvardhan | Bharathi Vishnuvardhan | Vishnuvardhan Cricket Cup | Aaptha Mithra)
ವಿಷ್ಣುವರ್ಧನ್ ಹೆಸರಲ್ಲಿ ಕ್ರಿಕೆಟ್ ಮ್ಯಾಚ್ ಆರಂಭ
PR
ಸಾಹಸ ಸಿಂಹ ವಿಷ್ಣುವರ್ಧನ್ ಅವರ ಮೇಲಿನ ಅಭಿಮಾನವನ್ನು ಕ್ರಿಕೆಟ್ ಆಡುವ ಮೂಲಕ ನೀವೂ ಸ್ಮರಿಸಿಕೊಳ್ಳಬಹುದು. ಆ ಮೂಲಕ ಯುವ ಜನತೆ ಒಟ್ಟಾಗಿ ತಮ್ಮನ್ನು ಕ್ರೀಡೆಯಲ್ಲಿ ತೊಡಗಿಸಿಕೊಳ್ಳಬಹುದು. ಈ ನಿಟ್ಟಿನಲ್ಲಿ ಕನ್ನಡದ ಮೇರುನಟ ದಿವಂಗತ ಡಾ. ವಿಷ್ಣುವರ್ಧನ್ ಅವರ ಸ್ಮರಣಾರ್ಥ ಟೆನ್ನಿಸ್ ಬಾಲ್ ಕ್ರಿಕೆಟ್ ಸರಣಿಯನ್ನು ಹಿರಿಯ ನಟಿ ಭಾರತಿ ವಿಷ್ಣುವರ್ಧನ್ ಆಯೋಜಿಸಿದ್ದಾರೆ. ಜುಲೈ ತಿಂಗಳಿನಿಂದ ಸರಣಿ ಆರಂಭವಾಗಲಿದೆ.
ಬೆಂಗಳೂರಿನ ಜಯನಗರ ರಾಷ್ಟ್ರೀಯ ಕಾಲೇಜು ಮೈದಾನದಲ್ಲಿ ಮುಂದಿನ ಜುಲೈ ತಿಂಗಳಿನಿಂದ ಸೆಪ್ಟಂಬರ್ ವರೆಗೆ ಪ್ರತೀ ಭಾನುವಾರ ವಿವಿಧ ಕ್ರಿಕೆಟ್ ತಂಡಗಳ ನಡುವೆ ಪೈಪೋಟಿ ನಡೆಯಲಿದೆ.
ಸೆಪ್ಟೆಂಬರ್ 18 ಡಾ.ವಿಷ್ಣುವರ್ಧನ್ ಅವರ ಜನುಮ ದಿನದಂದು ಫೈನಲ್ ಪಂದ್ಯ ನಡೆಯಲಿದೆ. ಅದೇ ದಿನ ವಿನ್ನರ್, ರನ್ನರ್ ತಂಡಗಳಿಗೆ ಕಪ್ ವಿತರಿಸಲಾಗುವುದು. ಹಾಗೂ ಉತ್ತಮ ಬ್ಯಾಟ್ಸ್‌ಮನ್, ಅಂಪೈರ್, ಫೀಲ್ಡರ್, ಬೌಲರ್‌ಗಳಿಗೂ ಇದೇ ವೇಳೆ ಪ್ರಶಸ್ತಿ ಪ್ರಧಾನ ಮಾಡಲಾಗುವುದು ಎಂದು ಹಿರಿಯ ನಟಿ ಭಾರತಿ ವಿಷ್ಣುವರ್ಧನ್ ತಿಳಿಸಿದ್ದಾರೆ.
ಆಸಕ್ತಿ ಇರುವ ಕ್ರಿಕೆಟ್ ತಂಡಗಳು ದೂರವಾಣಿ ಸಂಖ್ಯೆ 9900325990, 9845971004 ನ್ನು ಸಂಪರ್ಕಿಸಿ ತಂಡವನ್ನು ನೋಂದಾಯಿಸಿಕೊಳ್ಳಬಹುದು.