ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಹದಿನಾಲ್ಕು ವರ್ಷಗಳ ನಂತರ ಸ್ಯಾಂಡಲ್ ವುಡ್‌ಗೆ ಸಿಮ್ರಾನ್! (Upendra | Simran | God father | Shreya)
PR
ಅಂದೊಂದು ದಿನ ಶಿವಣ್ಣನ 'ಸಿಂಹದ ಮರಿ' ಚಿತ್ರದಲ್ಲಿ ಕಾಣಿಸಿಕೊಂಡಿದ್ದ ಅದ್ಭುತ ನಟಿ ಸಿಮ್ರಾನ್ ಮತ್ತೊಮ್ಮೆ ಕನ್ನಡದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ರಿಯಲ್ ಸ್ಟಾರ್ ಉಪೇಂದ್ರ ಅವರು ತ್ರಿಪಾತ್ರದಲ್ಲಿ ನಟಿಸುತ್ತಿರುವ 'ಗಾಡ್ ಫಾದರ್' ಚಿತ್ರದಲ್ಲಿ ಉಪೇಂದ್ರ ಅವರ ಪ್ರಮುಖ ಪಾತ್ರವೊಂದಕ್ಕೆ ಸಿಮ್ರಾನ್ ಜೋಡಿಯಾಗಲಿದ್ದಾರೆ.

ಮಾದಕ, ಮೋಹಕ, ಮೈನವಿರೇಳಿಸುವಂತಾ (ಸಾಹಸ) ಪಾತ್ರಕ್ಕೂ ಸೈ ಎನಿಸುವ ಸಿಮ್ರಾನ್, ಹದಿನಾಲ್ಕು ವರ್ಷಗಳ ನಂತರ ಕನ್ನಡ ಚಿತ್ರರಂಗಕ್ಕೆ ರೀಎಂಟ್ರಿ ಕೊಟ್ಟಿದ್ದಾರೆ. ತನ್ನ ಮದುವೆಯ ನಂತರ ಪ್ರಮುಖ ನಟಿಯ ಪಾತ್ರದಿಂದ ಸಹನಟಿಯ ಪಾತ್ರಕ್ಕೆ ವಾಲಿದ್ದ ಸಿಮ್ರಾನ್, ಇದೀಗ 'ಗಾಡ್ ಫಾದರ್' ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುವುದರೊಂದಿಗೆ ತಮ್ಮ ಅಭಿಮಾನಿಗಳಿಗೆ ಮುದನೀಡಲಿದ್ದಾರೆ.

ಈಗಾಗಲೇ ತಮಿಳು ಮತ್ತು ತೆಲುಗು ಚಿತ್ರರಂಗದಲ್ಲಿ ಅಪಾರ ಅಭಿಮಾನಿಗಳನ್ನು ಹೊಂದಿರುವ ಇವರು ಕನ್ನಡ ಚಿತ್ರರಸಿಕರ ಮೇಲೆ ಮತ್ತಷ್ಟು ಪ್ರಭಾವ ಬೀರಲಿದ್ದಾರೆ. ಈ ಚಿತ್ರದಲ್ಲಿ ಮತ್ತೊಬ್ಬರು ಶ್ರೇಷ್ಠ ನಟಿ ಶ್ರೇಯಾ ಕೂಡ ನಟಿಸಲಿದ್ದಾರೆ.

ತಮಿಳಿನ 'ವರಲಾರು' ಚಿತ್ರದ ರಿಮೇಕ್ ಚಿತ್ರ ಇದಾಗಿದ್ದು, ಮೂಲ ಚಿತ್ರವನ್ನು ಕೆ.ಎಸ್. ರವಿಕುಮಾರ್ ನಿರ್ದೇಶಿಸಿದ್ದರು. ಅಜಿತ್ ಕುಮಾರ್ ನಟಿಸಿದ್ದ ಈ ಚಿತ್ರ ಯಶಸ್ವಿ ಪ್ರದರ್ಶನ ಕಂಡಿತ್ತು. ಕನ್ನಡಕ್ಕೆ ಈ ಚಿತ್ರವನ್ನು ಕೆ. ಮಂಜು ಅವರು ತಂದಿದ್ದಾರೆ. ಪಿ.ಸಿ.ಶ್ರೀರಾಂ ಅವರ ನಿರ್ದೇಶನವಿರುವ 'ಗಾಡ್ ಫಾದರ್'ಗೆ ಏಪ್ರಿಲ್ 25ರಂದು ಮುಹೂರ್ತ.
ಇವನ್ನೂ ಓದಿ