ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಕಣ್ಣು ಕಳೆದುಕೊಂಡ ಪ್ರೇಮಿಯನ್ನು ಭೇಟಿ ಮಾಡಿದ ನಾರಾಯಣ್! (Raghu | Anusha | Pankaj | S. Narayan)
PR
ಪ್ರೀತಿಯ ಮೋಸದ ಬಲೆಗೆ ಸಿಲುಕಿ ಹುಡುಗಿಯ ಅಣ್ಣ ಮತ್ತು ತಂದೆಯ ಪೈಶಾಚಿಕ ಕೃತ್ಯದಿಂದ ಇತ್ತೀಚೆಗೆ ಕಣ್ಣು ಕಳೆದುಕೊಂಡ ಭಗ್ನಪ್ರೇಮಿ ರಘುನನ್ನು ನಿರ್ದೇಶಕ, ನಿರ್ಮಾಪಕ ಎಸ್. ನಾರಾಯಣ್ ಭೇಟಿ ಮಾಡಿದ್ದಾರೆ.

ಬೆಂಗಳೂರಿನ ಇಸ್ಕಾನ್ ದೇವಾಲಯದ ಬಳಿಯಿರುವ ನಾರಾಯಣ ನೇತ್ರಾಲಯದಲ್ಲಿ ರಘು ಚಿಕಿತ್ಸೆ ಪಡೆಯುತ್ತಿದ್ದು, ಮಂಗಳವಾರ ಆಸ್ಪತ್ರೆಗೆ ಭೇಟಿ ನೀಡಿದ ನಾರಾಯಣ್ ರಘು ಅವರಿಗೆ 'ಹಳೆಯದನ್ನೆಲ್ಲ ಮರೆತು ಬಿಡು' ಎಂದು ಸಂತೈಸಿದರು.

ರಾಜ್ಯದೆಲ್ಲೆಡೆ ಭಾರೀ ಸುದ್ದಿಮಾಡಿದ್ದ ರಘು-ಅನುಷಾ ಪ್ರೇಮ ಪ್ರಕರಣವನ್ನು 'ನೆನಪಿದೆಯಾ ಓ ಗೆಳತಿ' ಎಂಬ ಹೆಸರಿನಲ್ಲಿ ಬೆಳ್ಳಿತೆರೆಗೆ ತರುತ್ತಿದ್ದಾರೆ ಎಸ್. ನಾರಾಯಣ್.

ಈ ನಿಟ್ಟಿನಲ್ಲಿ ರಘುನನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಚಿತ್ರದ ನಾಯಕ ಎಸ್.ನಾರಾಯಣ್ ಅವರ ಪುತ್ರ ಪಂಕಜ್. ಚಿತ್ರೀಕರಣ ಜುಲೈ ಮೊದಲವಾರದಿಂದ ಆರಂಭವಾಗುವ ಸಾಧ್ಯತೆ ಇದೆ.

ಕಣ್ಣು ಕಳೆದುಕೊಳ್ಳಲು ಪ್ರಮುಖ ಕಾರಣ ಎನ್ನಲಾದ ವಿವಾಹಿತೆಯ ಪಾತ್ರಕ್ಕೆ ಯಾರು ಸರಿಹೊಂದುತ್ತಾರೆ ಎಂದು ಕತೆ ಬರೆದ ನಂತರವಷ್ಟೆ ತೀರ್ಮಾನಿಸಲಾಗುವುದು ಎಂದಿದ್ದಾರೆ ನಾರಾಯಣ್.
ಇವನ್ನೂ ಓದಿ