ಪ್ರಿಯತಮೆಯ ಮನೆಯವರಿಂದ ಪೈಶಾಚಿಕ ಕಿರುಕುಳಕ್ಕೆ ಒಳಗಾಗಿ ಎರಡು ಕಣ್ಣುಗಳನ್ನು ಕಳೆದುಕೊಂಡಿದ್ದ ನತದೃಷ್ಟ ಪ್ರಿಯಕರ ರಘುವಿನ ಪಾತ್ರಕ್ಕೆ ನಿರ್ದೇಶಕ ಎಸ್. ನಾರಾಯಣ್ ಅವರ ಪುತ್ರ ಪಂಕಜ್ ಸಿದ್ಧರಾಗಿದ್ದಾರೆ. ಈ ನಿಮಿತ್ತ ನಾರಾಯಣ ನೇತ್ರಾಲಯಕ್ಕೆ ಭೇಟಿ ನೀಡಿ ಚಿಕಿತ್ಸೆ ಪಡೆಯುತ್ತಿರುವ ರಘುವಿನೊಂದೆ ಮಾತುಕತೆ ನಡೆಸಿದ್ದಾರೆ.
ರಘುವಿನ ಪಾತ್ರ ನಿರ್ವಹಿಸುವುದು ಒಂದು ಸವಾಲಿನ ವಿಷಯವಾಗಿದ್ದು, ಅದಕ್ಕಾಗಿ ಕಠಿಣ ಸಿದ್ದತೆ ನಡೆಸುವುದಾಗಿ ಪಂಕಜ್ ತಿಳಿಸಿದರು. ಆದ್ದರಿಂದ ನೇರವಾಗಿ ಅವರನ್ನು ಸಂದರ್ಶಿಸಿರುವುದಾಗಿ ತಿಳಿಸಿದ್ದಾರೆ.
ಮಾರಣಾಂತಿಕ ಹಲ್ಲೆಗೊಳಗಾಗಿ ಕಣ್ಣುಕಳೆದುಕೊಂಡಿರುವ ರಘು ಮತ್ತು ಪ್ರೀತಿಸಿ ಧರ್ಮಸ್ಥಳದಲ್ಲಿ ಮದುವೆಯಾಗಿ ಹದಿನೈದು ದಿನ ಸಂಸಾರ ಮಾಡಿ ಕೊನೆಗೆ ಬೇರೊಬ್ಬನೊಂದಿಗೆ ವಿವಾಹವಾಗಿರುವ ಆರೋಪ ಹೊತ್ತಿರುವ ಅನುಷಾ ಅವರ ಪಾತ್ರಕ್ಕೆ ಹೋಲಿಕೆಯಾಗುವಂತಾ ನಾಯಕ-ನಾಯಕಿ ಚಿತ್ರಕ್ಕೆ ಬೇಕಾಗಿದ್ದು, ರಘುವಿನ ಪಾತ್ರಕ್ಕೆ ನಿರ್ಮಾಪಕ, ನಿರ್ದೇಶಕ ಎಸ್. ನಾರಾಯಣ್ ತನ್ನ ಮಗನನ್ನೇ ಆಯ್ಕೆ ಮಾಡಿಕೊಂಡಿರುವುದು ವಿಶೇಷ.
ಆದ್ದರಿಂದ ಚಿತ್ರದ ಕಥೆಗೆ ಮತ್ತು ಪಂಕಜ್ಗೆ ಹೋಲಿಕೆಯಾಗುವಂತಾ ನಾಯಕಿಯ ಆಯ್ಕೆ ಹಾಗೂ ಪ್ರಕರಣದಲ್ಲಿ ಪ್ರಮುಖ ಪಾತ್ರ ವಹಿಸಿದ ರಘುವಿನ ಕಣ್ಣು ಕಿತ್ತ ಪಾಪಿಗಳ ಪಾತ್ರಕ್ಕೆ ಸೂಕ್ತ ವ್ಯಕ್ತಿಗಳನ್ನು ಆಯ್ಕೆ ಇನ್ನಷ್ಟೇ ನಡೆಯಬೇಕಿದೆ.