ಕಣ್ಣು ಕಳೆದುಕೊಂಡು ಚಿಕಿತ್ಸೆ ಪಡೆಯುತ್ತಿರುವ ನತದೃಷ್ಟ ಪ್ರೇಮಿ ರಘುನನ್ನು ಭೇಟಿಮಾಡಿದ 'ನೆನಪಿರಲಿ' ಲವ್ಲೀ ಸ್ಟಾರ್ ಪ್ರೇಮ್, ರಘುವಿನ ಮಾನಸಿಕ ನೋವಿಗೆ ಸಮಾಧಾನ ಹೇಳಿ, ಕಣ್ಣು ಕಿತ್ತು ಪೈಶಾಚಿಕವಾಗಿ ಹಲ್ಲೆಮಾಡಿದ ಆ ಪಾತಕಿಗಳಿಗೆ ಕಾನೂನಿನಡಿಯಲ್ಲಿ ಕಠಿಣ ಶಿಕ್ಷೆಯಾಗಬೇಕು ಎಂದು ಗುಡುಗಿದರು.
ಪಾತಕಿಗಳು ರಘುವಿನ ಎರಡು ಕಣ್ಣುಗಳಿಗೆ ತೀವ್ರವಾಗಿ ಬೆರಳಿನಿಂದ ಚುಚ್ಚಿದ್ದು, ಚಿಕಿತ್ಸೆಯ ನಂತರ ಒಂದು ಕಣ್ಣು ಶೇ.15ರಷ್ಟು ಮಾತ್ರ ದೃಷ್ಠಿ ಹೊಂದಲಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಈ ರೀತಿಯ ಅಮಾನವೀಯ ಕೃತ್ಯಕ್ಕೆ ಒಳಗಾದ ರಘುವಿನ ಮನೆ ಪರಿಸ್ಥಿತಿ ಮತ್ತು ಆತನಿಗೆ ಎದುರಾರ ದುಸ್ಥಿತಿ ಅರಿತು ಮಾನವೀಯ ಮೌಲ್ಯದಿಂದ ಈ ಭೇಟಿ ನೀಡಿದ್ದಾರೆ. ಇದರಿಂದ ಪ್ರೇಮ್ ಅಭಿಮಾನಿಗಳಲ್ಲಿ ತಮ್ಮ ನೆಚ್ಚಿನ ನಾಯಕನ ಮೇಲೆ ಅಭಿಮಾನ ಹೆಚ್ಚಿದೆ.
ರಘುವಿನ ಕಣ್ಣು ಕಿತ್ತ ಪ್ರಕರಣವನ್ನು ಆಧರಿಸಿ ಚಲನ ಚಿತ್ರ ತೆಗೆಯುವ ಉದ್ದೇಶದಿಂದ ನಿರ್ಮಾಪಕ ಎಸ್. ನಾರಾಯಣ್ ಕುಟುಂಬ ಸಮೇತ ಭೇಟಿ ನೀಡಿ ರಘುವಿಗೆ ಧೈರ್ಯ ತುಂಬಿದರು.