ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಅಪ್ಪಾಜಿಯ ನೆನಪುಗಳನ್ನು ಪುಸ್ತಕವನ್ನಾಗಿಸಿದ ಪುನಿತ್! (Puneeth Rajkumar | Person Behind Personalities | Rajkumar | Hudugaru)
PR
ಅಪ್ಪಾಜಿಯ ಅಪರೂಪದ ಸುಮಾರು 1800 ಛಾಯಾಚಿತ್ರಗಳನ್ನು ಸಂಗ್ರಹಿಸಿ ಪುಸ್ತಕದ ರೂಪದಲ್ಲಿ ಹೊರತಂದಿದ್ದಾರೆ ಪವರ್ ಸ್ಟಾರ್ ಪುನಿತ್ ರಾಜ್ ಕುಮಾರ್. ಆದರೆ ಈ ಅಪರೂಪದ ಪುಸ್ತಕ 'ಪರ್ಸನ್ ಬಿಹೈಂಡ್ ಪರ್ಸನಾಲಿಟೀಸ್' ಮಾರುಕಟ್ಟೆಗೆ ಬರಲು ಈಗ ಬಿರುಸಿನ ಸಿದ್ಧತೆ ನಡೆಸುತ್ತಿದ್ದು ಜೂನ್ ವೇಳೆಗೆ ಮಾರುಕಟ್ಟೆ ಪ್ರವೇಶಿಸಲಿದೆ. ಬೆಲೆ-1250ರೂ. ಎಂದು ನಿಗದಿಸಲಾಗಿದೆ.

ಈ ಪುಸ್ತಕದಲ್ಲಿ ಸಂಗ್ರಹಿಸಲಾಗಿರುವ ಛಾಯಾಚಿತ್ರಗಳಲ್ಲಿ ಹೆಚ್ಚಿನವು ಸಾರ್ವಜನಿಕವಾಗಿ ಎಲ್ಲಿಯೂ ಗುರುತಿಸಿಕೊಂಡಿಲ್ಲ. ಹಾಗೂ ಈ ಪುಸ್ತಕದಲ್ಲಿ ಡಾ. ರಾಜ್ ಕುಮಾರ್ ಅವರಿಗೆ ಆಪ್ತರಾದ ಹಿರಿಯ ಕಲಾವಿದರು, ಪ್ರಖ್ಯಾತ ಕಲಾನಾಮರೂ ರಾಜ್ ಮೇಲಿನ ತಮ್ಮ ಅಭಿಪ್ರಾಯ, ಅನುಭವಗಳನ್ನು ಅಕ್ಷರಗಳಲ್ಲಿ ಮೂಡಿಸಿದ್ದಾರೆ.

ಡಾ. ರಾಜ್ ತಮ್ಮ ಬಾಲ್ಯದಿಂದ ಬೆಳೆದುಬಂದ ದಾರಿ, ಕುಟುಂಬಸ್ಥರೊಂದಿಗೆ ತೆಗೆದುಕೊಂಡ ಛಾಯಾ ಚಿತ್ರ, ತಮ್ಮ ಆಪ್ತ ಮಹನೀಯರೊಂದಿಗೆ ತೆಗೆದುಕೊಂಡ ಚಿತ್ರ ಎಲ್ಲವನ್ನೂ ಸರದಿಯಾಗಿ ಜೋಡಿಸಿ (ಒಂದರ್ಥದಲ್ಲಿ ರಾಜ್ ಜೀವನವನ್ನು ಛಾಯಾಚಿತ್ರದಲ್ಲೇ ತೋರಿಸುವ ಪುಸ್ತಕ) ಒಂದು ಪುಸ್ತಕವನ್ನಾಗಿ ರೂಪಿಸಲು ಪುನಿತ್ ಶ್ರಮಿಸಿದ್ದು ಬರೋಬ್ಬರಿ ಮೂರು ವರ್ಷ!

ಕುಂಬ್ಳೆ ಪ್ರಕಾಶನ ಹೊರತರುತ್ತಿರುವ ಈ ಪುಸ್ತಕದ ಒಂದು ಬದಿಯಲ್ಲಿ 'ಹುಡುಗರು' ಚಿತ್ರದ ಪೋಸ್ಟರ್ ಅಂಟಿಸಿ ಅಲಂಕರಿಸಲಾಗಿದೆ. ರಾಜ್ ಬಗ್ಗೆ ಹಲವಾರು ಪುಸ್ತಕಗಳನ್ನು ಪ್ರಸಿದ್ಧ ಲೇಖಕರು ಬರೆದಿದ್ದರೂ, ಇಲ್ಲಿ ಯಾವುದೇ ಲೇಖಕರ ಟಚ್ ಇಲ್ಲದೆ ಅವರವರ ಅನುಭವ ಅಭಿಪ್ರಾಯ ನೇರವಾಗಿ ಬಂದಿರುವುದು ಮತ್ತು ಕೇವಲ ಛಾಯಾಚಿತ್ರಗಳೇ ಎಲ್ಲಾ ಕಥೆಯನ್ನೂ ಹೇಳುವುದರಿಂದ ಪುಸ್ತಕಕ್ಕೆ ಬಹಳ ಬೇಡಿಕೆಯಿರುವ ನಿರೀಕ್ಷೆಯಿದೆ.
ಇವನ್ನೂ ಓದಿ