ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಜಯಮಾಲ ಪುತ್ರಿ ಸೌಂದರ್ಯ 'ಗಾಡ್ ಫಾದರ್'ಗೆ ನಾಯಕಿ (God Father | Upendra | Soundarya | Jayamala)
PR

ಸೂಪರ್ ಸ್ಟಾರ್ ಉಪೇಂದ್ರ ಅವರು ತ್ರಿಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ 'ಗಾಡ್ ಫಾದರ್' ಚಿತ್ರಕ್ಕೆ ನಟಿ ಜಯಮಾಲಾ ಅವರ ಪುತ್ರಿ ಸೌಂದರ್ಯ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ತ್ರಿಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ಉಪೇಂದ್ರನ ಪ್ರಮುಖ ಪಾತ್ರಕ್ಕೆ ಸಿಮ್ರಾನ್ ಹಾಗೂ ಇನ್ನುಳಿದ ಎರಡು ಪಾತ್ರಗಳಿಗೆ ಶ್ರೇಯಾ ಮತ್ತು ಸೌಂದರ್ಯ ನಾಯಕಿಯಾಗಿ ಆಯ್ಕೆಯಾಗಿದ್ದಾರೆ.

ಕಥೆ ಇಷ್ಟವಾದರೆ ಮಾತ್ರ ಚಿತ್ರವನ್ನು ಒಪ್ಪಿಕೊಳ್ಳುವುದಾಗಿ ಈ ಹಿಂದೆ ಹೇಳಿಕೊಂಡಿದ್ದ ಸೌಂದರ್ಯ ಈ ಚಿತ್ರಕ್ಕೆ ಸೈ ಎಂದಿದ್ದಾರೆ. 'ಮಿಸ್ಟರ್ ಪ್ರೇಮಿಕುಡು' ಎಂಬ ತೆಲುಗು ಚಿತ್ರದಲ್ಲಿ ಕಾಣಿಸಿಕೊಂಡಿದ್ದ ಸೌಂದರ್ಯ ಅವರಿಗೆ ಪರಭಾಷೆಯಿಂದಲೂ ಬಹಳ ಬೇಡಿಕೆ ಇದೆ ಎಂದಿದ್ದಾರೆ ಅಮ್ಮ ಜಯಮಾಲ. ಆದರೆ ಚಿತ್ರದ ಕಥೆ ಮತ್ತು ಪಾತ್ರ ಒಪ್ಪುವಂತದ್ದಾಗಿದ್ದರೆ ಮಾತ್ರ ನಟಿಸಲು ಒಪ್ಪುವುದು ಸೌಂದರ್ಯಾ ಸಿದ್ಧಾಂತ.

ಬಹುನಿರೀಕ್ಷೆ ಹುಟ್ಟಿಸಿರುವ 'ಗಾಡ್ ಫಾದರ್' ಚಿತ್ರವನ್ನು ಅದ್ಧೂರಿಯಾಗಿ ಚಿತ್ರೀಕರಿಸಲು ನಿರ್ಧರಿಸಿರುವ ನಿರ್ಮಾಪಕ ಕೆ.ಮಂಜು ಎಲ್ಲಾ ರೀತಿಯ ಸಾಹಸಕ್ಕೂ ಸೈ ಎನ್ನುತ್ತಿದ್ದಾರೆ. ಚಿತ್ರಕ್ಕೆ ಏನೇನು ಸಿದ್ಧತೆ ಬೇಕೊ ಅವೆಲ್ಲವನ್ನು ತರಿಸಲು ಉತ್ಸುಕರಾಗಿರುವ ಅವರು ಈಗಾಗಲೇ ಅದ್ದೂರಿ ಮನೆಯ ಸೆಟ್ ನಿರ್ಮಿಸಿದ್ದಾರೆ.

ತಮಿಳಿನ 'ವರಲಾರು' (ಇತಿಹಾಸ) ಚಿತ್ರವನ್ನು ಕನ್ನಡದಲ್ಲಿ ಇನ್ನಷ್ಟು ಪರಿಣಾಮಕಾರಿಯಾಗಿ ತೆಗೆಯುವ ಎಲ್ಲಾ ನಿರೀಕ್ಷೆಯನ್ನೂ ಚಿತ್ರತಂಡ ಹೊಂದಿದೆ. 'ವರಲಾರು' ಚಿತ್ರದ ನಿರ್ದೇಶನ ಪಿ.ಸಿ. ಶ್ರೀರಾಂ.
ಇವನ್ನೂ ಓದಿ