ಶಶಾಂಕ್ ನಿರ್ದೇಶನದ 'ಜರಾಸಂದ' ಚಿತ್ರದ ಒಂದು ಗೀತೆಯ ಚಿತ್ರೀಕರಣಕ್ಕಾಗಿ ಚಿತ್ರತಂಡ ಬ್ಯಾಂಕಾಕ್ಗೆ ಐದು ದಿನದ ಪ್ರವಾಸ ಕೈಗೊಂಡಿದೆ. ದುನಿಯಾ ವಿಜಯ್, ಪ್ರಣೀತಾ ಸುಭಾಶ್ ಜೋಡಿಯಲ್ಲಿ ಮೂಡಿಬರುತ್ತಿರುವ ಈ ಚಿತ್ರದ ಕೆಲವು ಗೀತೆಗಳು ಇನ್ನಷ್ಟೇ ನಡೆಯಲಿದೆ.
ಐದು ದಿನದ ಪ್ರವಾಸದ ನಂತರ ಬೀದರ್ನಲ್ಲಿ ಮತ್ತೊಂದು ಗೀತೆಯ ಚಿತ್ರೀಕರಣ ಆರಂಭವಾಗಲಿದೆ. ಜತೆಗೆ ಚಿತ್ರದ ಕ್ಲೈಮ್ಯಾಕ್ಸ್ ಸೇರಿದಂತೆ ಪ್ರಮುಖ ಸನ್ನಿವೇಶಗಳ ಚಿತ್ರೀಕರಣ ಸದ್ಯದಲ್ಲೇ ನಡೆಯಲಿದೆ.
ಅರ್ಜುನ್ ಸಂಗೀತ ನಿರ್ದೇಶನವಿರುವ 'ಜರಾಸಂದ'ನ ಸಂಪೂರ್ಣ ಚಿತ್ರೀಕರಣವನ್ನು ಬೇಗನೇ ಪೂರೈಸಿ, ನಂತರವಷ್ಟೇ ಓಂ ಪ್ರಕಾಶ್ ರಾವ್ ನಿರ್ದೇಶನದ 'ಭೀಮಾ ತೀರದಲ್ಲಿ' ಚಿತ್ರೀಕರಣಕ್ಕೆ ಹೋಗಲು ವಿಜಯ್ ನಿರ್ಧರಿಸಿದ್ದಾರೆ.