ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಸಾರಾಯಿ ಸೀಸೆ ಹಿಡ್ಕೊಂಡು ಹ್ಯಾಟ್ರಿಕ್‌ಗೆ ಹೊರಟ ಲೂಸ್‌ಮಾದ! (Yogesh | Hudugru | Dhool | Devadas)
PR
ಸಾರಾಯಿ ಸೀಸೆಯಲಿ ನನ್ನ ದೇವಿ ಕಾಣುವಳೂ..... ಎನ್ನುತ್ತಾ ತನ್ನ ವಿರಹ ವೇದನೆಯನ್ನು ಹಾಡಿಕೊಳ್ಳುತ್ತಾ ಲೂಸ್ ಮಾದ ಯೋಗೇಶ್ ಹ್ಯಾಟ್ರಿಕ್ ಸಾಧನೆಗೆ ಅಣಿಯಾಗುತ್ತಿದ್ದಾರೆ. ಇತ್ತೀಚೆಗೆ ಬಿಡುಗಡೆಯಾದ 'ದೂಳ್' ಮತ್ತು 'ಹುಡುಗರು' ಚಿತ್ರ ಯಶಸ್ಸು ಕಾಣುವ ಎಲ್ಲಾ ಲಕ್ಷಣಗಳನ್ನೂ ಹೊಂದಿದೆ. ಜತೆಗೆ ಮುಂದಿನ ವಾರ ಬಿಡುಗಡೆಯಾಗಲಿರುವ 'ದೇವದಾಸ್' ಚಿತ್ರಕೂಡ ಯಶಸ್ಸು ಕಾಣುವ ಎಲ್ಲಾ ಲಕ್ಷಣಗಳನ್ನೂ ಹೊಂದಿದೆ.

'ದೇವದಾಸ' ಚಿತ್ರದಲ್ಲಿ ಭಗ್ನ ಪ್ರೇಮಿ ಸಾಫ್ಟ್‌ವೇರ್ ಇಂಜಿನಿಯರ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ಯೋಗೇಶ್‌ಗೆ ಈ ಪಾತ್ರ ಸರಿಯಾಗಿ ಹೊಂದಿಕೆಯಾಗುತ್ತಂತೆ. ಅಲ್ಲದೇ ಜನಪ್ರೀಯ 'ಸಾರಾಯಿ ಸೀಸೆಯಲಿ' ಗೀತೆಯ ರಿಮೇಕ್ ಗೀತೆ ಕೂಡ ಈ ಚಿತ್ರದಲ್ಲಿರುವುದರಿಂದ ಯೋಗೇಶ್ ಅಭಿಮಾನಿಗಳು ಚಿತ್ರ ಬಿಡುಗಡೆಗೆ ತುದಿಗಾಲಲ್ಲಿ ಕಾತುರರಾಗಿದ್ದಾರೆ.

ತಮಿಳಿನ ಧನುಷ್ ನಟಿಸಿದ್ದ 'ತಿರುವಿಳಯಾಡಲ್ ಆರಂಭಂ' ಹಿಟ್ ಚಿತ್ರದ ರಿಮೇಕ್ 'ದೂಳ್' ಚಿತ್ರದಲ್ಲಿ ಐಂದ್ರಿತಾ ರೇ ಜೋಡಿಯಾಗಿ ನಟಿಸಿರುವ ಯೋಗಿಯ ಅಭಿನಯ ಸೂಪರ್ ಎಂದಿದ್ದಾರೆ ಅವರ ಅಭಿಮಾನಿಗಳು. ಹಾಗೂ ಚಿತ್ರದ ಗೀತೆಗಳು ಈಗಾಗಲೇ ಯುವ ಮನಸ್ಸುಗಳನ್ನು ಲಗ್ಗೆಯಿಟ್ಟಿದೆ.

ಇನ್ನು ಹೊಸಮುಖಗಳೇ ನಟಿಸಿದ್ದ ತಮಿಳಿನ ಸೂಪರ್ ಹಿಟ್ ಚಿತ್ರ 'ನಾಡೋಡಿಗಳ್' ರಿಮೇಕ್ 'ಹುಡುಗರು' ಚಿತ್ರದಲ್ಲೂ ಯೋಗಿಯ ಅಭಿನಯ ಅಭಿಮಾನಿಗಳ ಮೆಚ್ಚುಗೆ ಪಡೆದಿದೆ. ಹಾಗಾಗಿ ಇವೆರಡೂ ಚಿತ್ರಗಳೊಂದಿಗೆ ಪ್ರಸ್ತುತ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಪ್ರೀತಿಯ ಹೆಸರಿನಲ್ಲಿ ಏಳುತ್ತಿರುವ ಕಲಹ, ಬಿನ್ನಾಭಿಪ್ರಾಯಗಳ ಕಥಾಹಂದರ ಹೊಂದಿರುವ 'ದೇವದಾಸ' ಯಶಸ್ಸಿನ ಬಗ್ಗೆ ಸಂಶಯವೇ ಇಲ್ಲಾ ಎಂದಿದ್ದಾರೆ ಗಾಂಧೀನಗರದ ಪಂಡಿತರು. ಏನಿಲ್ಲದಿದ್ದರೂ 'ಸಾರಾಯಿ ಸೀಸೆಯಲಿ.. ನನ್ನ ದೇವಿ ಕಾಣುವಳು' ಗೀತೆಗಾದರೂ ಚಿತ್ರ ಹಿಟ್ ಆಗಲೇಬೇಕು ಎನ್ನುತ್ತಿದ್ದಾರೆ.

ಅಲ್ಲಿಗೆ ಲೂಸ್‌ಮಾದ ಯೋಗೇಶ್‌ಗೆ ಶ್ರಮಕ್ಕೆ ಹ್ಯಾಟ್ರಿಕ್ ಗರಿ ಬಂದಂತಾಗುತ್ತದೆ. ಏನಂತೀರಿ..?
ಇವನ್ನೂ ಓದಿ