ಈ ಸುಡು ಬಿಸಿಲಿನಲ್ಲಿಯೂ ಕೂಲ್ ಕೂಲ್ ಎಂದು ಹೇಳುತ್ತಾ ಬಂದಿದ್ದಾರೆ ಗೋಲ್ಡನ್ ಸ್ಟಾರ್ ಗಣೇಶ್. ಗಣೇಶ್ ನಿರ್ದೇಶನದ 'ಕೂಲ್ ಚಿತ್ರವನ್ನು ಕೂಲಾಗಿ ಕುಳಿತು ನೋಡುವ ಭಾಗ್ಯ ಬಂದಾಗಿದೆ. 'ಕೂಲ್' ಚಿತ್ರ ಈ ವಾರ ಪ್ರೇಕ್ಷಕರ ಮುಂದೆ ಬರಲಿದೆ.
'ಕೂಲ್' ಗಾಗಿ ಬೆಂಗಳೂರು, ಮೈಸೂರು, ದುಬೈ, ಈಜಿಪ್ಟ್, ಜೋಡಾನ್ ಮುಂತಾದೆಡೆ ರತ್ನವೇಲು ತಮ್ಮ ಕ್ಯಾಮೆರಾ ತೆಗೆದುಕೊಂಡು ಸುತ್ತಾಡಿದ್ದಾರೆ. ನಟನಾಗಿ ಅಭಿಮಾನಿಗಳ ಮನ ಗೆದ್ದಿರುವ ಗಣೇಶ್ ಈಗ ನಿರ್ದೇಶಕ ಕೂಡಾ ಆಗಿದ್ದಾರೆ. 'ಕೂಲ್' ಅವರ ನಿರ್ದೇಶನದ ಚೊಚ್ಚಲ ಚಿತ್ರ. ಉತ್ತಮ ಕಥಾ ಹಂದರ ಹೊಂದಿರುವ ಈ ಚಿತ್ರ ನೋಡುಗರಿಗೆ ಮೆಚ್ಚುಗೆ ಆಗಲಿದೆ ಎನ್ನುತ್ತಾರೆ ಗಣೇಶ್.
ಚಿತ್ರಕ್ಕೆ ವಿ ಹರಿಕೃಷ್ಣ ಕೂಲಾಗಿ ಸಂಗೀತ ನಿರ್ದೇಶನ ಮಾಡಿದ್ದಾರೆ. ಗಣೇಶ್, ಸನಾ ಖಾನ್, ಸಾಧು ಕೋಕಿಲ, ದೀಪಾ ಶೆಟ್ಟಿ, ಶರಣ್, ಸಂಗೀತಾ ಶೆಟ್ಟಿ, ದತ್ತಣ್ಣ ಮುಂತಾದವರು ತಾರಾ ಬಳಗದಲ್ಲಿದ್ದು ಚಿತ್ರಕ್ಕಾಗಿ ಬಣ್ಣ ಹಚ್ಚಿದ್ದಾರೆ.