ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ದಿಢೀರ್ ಬಿಡುಗಡೆಗೆ ಸಿದ್ಧವಾದ 'ಶ್ರೀಮತಿ! (Upendra | Kannada cinema | Sreemati | Celina jaitly | Priyanka)
PR
ಉಪೇಂದ್ರ ಅಭಿಮಾನಿಗಳಿಗೆ ತ್ರಿಬಲ್ ಧಮಾಕಾ! ಉಪ್ಪಿಯ ಹೊಸ ಚಿತ್ರ ''ಶ್ರೀಮತಿ' ಬಿಡುಗಡೆಗೆ ಸಿದ್ಧವಾಗಿದೆ. ಬಾಲಿವುಡ್ ಬೆಡಗಿ, ಫೆಮಿನಾ ಮಿಸ್ ಇಂಡಿಯಾ ವಿಜೇತೆ ಸೆಲಿನಾ ಜೇಟ್ಲಿ ಈ ಚಿತ್ರದೊಂದಿಗೆ ಕನ್ನಡಕ್ಕೆ ಬಂದಿದ್ದಾರೆ. ಉಪೇಂದ್ರ ಅವರ ಪತ್ನಿ ಪ್ರಿಯಾಂಕಾ ಪತಿಯೊಂದಿಗೆ ಈ ಚಿತ್ರದಲ್ಲಿ ನಟಿಸಿದ್ದಾರೆ. ಪ್ರೇಕ್ಷಕರಿಗಂತೂ ರಸಗವಳ.

''ಶ್ರೀಮತಿ ಚಿತ್ರೀಕರಣ ಮುಗಿಸಿ ಬಹಳ ದಿನಗಳೇ ಆಗಿವೆ. ವಾಸ್ತವವಾಗಿ ''ಸೂಪರ್ ಗಿಂತಲೂ ಮುಂಚೆ ತಯಾರಾದ ಚಿತ್ರವಿದು. ಆದರೆ ನಿರ್ಮಾಪಕ ಶಂಕರ ಗೌಡರು ''ಕೆಂಪೇ ಗೌಡನ ಬಗ್ಗೆ ಹೆಚ್ಚು ಗಮನ ಕೊಟ್ಟರು. ಈಗ ಅವರು ''ಶ್ರೀಮತಿಯನ್ನು ತೆರೆಗೆ ತರಲು ಸಿದ್ಧತೆ ನಡೆಸಿದ್ದಾರೆ.

ಜೂನ್‌ನಲ್ಲಿ ''ಶ್ರೀಮತಿ ತೆರೆ ಕಾಣುವ ಸಾಧ್ಯತೆ ಇದೆ. ಹಿಂದಿಯಲ್ಲಿ ಯಶಸ್ಸು ಕಂಡಿದ್ದ ''ಐತ್ಬಾರ್ ಚಿತ್ರದ ರೀಮೇಕ್ ಇದು. ತೆಲುಗಿನ ಸಂಪತ್ ನಿರ್ದೇಶಿಸಿದ್ದಾರೆ.
ಇವನ್ನೂ ಓದಿ