ಕಳೆದ ಮೂರ್ನಾಲ್ಕು ವರ್ಷಗಳಿಂದ ಸ್ಯಾಂಡಲ್ವುಡ್ನಲ್ಲಿ ಹಲವಾರು ಚಿತ್ರಗಳಿಗೆ ಫೈನಾನ್ಸ್ ಮಾಡಿಕೊಂಡು ''5 ಈಡಿಯಟ್ಸ್ನಲ್ಲಿ ನಟನೆ ಕೂಡಾ ಮಾಡಿ ಸೈ ಎನಿಸಿಕೊಂಡಿದ್ದರು ಎಚ್. ಎಂ. ಕೃಷ್ಣಮೂರ್ತಿ ಅಲಿಯಾಸ್ ಜೇಡರಹಳ್ಳಿ ಕೃಷ್ಣಪ್ಪ.
ಇಷ್ಟು ದಿನ ಎಲೆ ಮರೆಯ ಕಾಯಿಯ ಹಾಗೆ ಇದ್ದದ್ದು ಸಾಕು ಎಂದು ಅವರೀಗ ತೆರೆಯ ಮೇಲೆ ನಾಯಕನಾಗಿ ಕಾಣಿಸಿಕೊಳ್ಳಲು ಪೂರ್ವ ತಯಾರಿ ನಡೆಸಿದ್ದಾರೆ. ಚಿತ್ರಕ್ಕೆ ಇದೇ ಭಾನುವಾರ ಮುಹೂರ್ತ ಸಮಾರಂಭ ಜರುಗಲಿದೆ.
ಇವರ ನಿಜ ಜೀವನದ ಕಥೆಯನ್ನು ಹಲವಾರು ಚಿತ್ರ ನಿರ್ದೇಶಕರು ಸಿನೆಮಾ ಮಾಡಬೇಕೆಂದು ಪ್ರಯತ್ನಿಸಿದರಾದರೂ ಯಾಕೋ ಅವರ ಕನಸು ಸಾಕಾರಗೊಳ್ಳಲೇ ಇಲ್ಲ.
ಇದೀಗ ಸ್ವತಃ ಜೆ.ಕೆ. ಅವರೇ ಕಥೆ, ಚಿತ್ರಕಥೆ, ಸಾಹಿತ್ಯ, ನಿರ್ಮಾಪಕ ಮುಂತಾದ ಹತ್ತು ಹಲವು ಹಣೆಪಟ್ಟಿಗಳೊಂದಿಗೆ ಬಣ್ಣ ಹಚ್ಚಿಕೊಳ್ಳಲಿದ್ದಾರೆ. ಪಿ.ಎಸ್.ಸತ್ಯಾ ಆಕ್ಷನ್ಷ್-ಕಟ್ ಹೇಳಲಿದ್ದಾರೆ. ಚಿತ್ರರಂಗದ ಅನೇಕ ಮಂದಿ ಪ್ರಮುಖರು ಭಾನುವಾರದ ಸಮಾರಂಭಕ್ಕೆ ಆಗಮಿಸಲಿದ್ದಾರೆಂಬುದನ್ನು ಚಿತ್ರದ ಆಹ್ವಾನ ಪತ್ರಿಕೆಯೇ ಸಾರಿ ಹೇಳುತ್ತಿದೆ.