ಮುಖ್ಯ ಪುಟಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಚಿತ್ರದಲ್ಲಿ ವಿಷ್ಣುವರ್ಧನ್‌ರನ್ನು ತೋರಿಸಬಾರದು: ಭಾರತಿ ತಾಕೀತು (Vishnuwardhan | Dwarkish | Sudeep | Bharati | Kannada cinema | Sandalwood)
ಚಿತ್ರದಲ್ಲಿ ವಿಷ್ಣುವರ್ಧನ್‌ರನ್ನು ತೋರಿಸಬಾರದು: ಭಾರತಿ ತಾಕೀತು
PR
ನಟ, ನಿರ್ಮಾಪಕ ದ್ವಾರಕೀಶ್ ನಿರ್ಮಿಸುತ್ತಿರುವ ಚಿತ್ರಕ್ಕೆ ''ವಿಷ್ಣುವರ್ಧನ ಎಂಬ ಹೆಸರಿಡುವ ಸಂಬಂಧ ಎದ್ದಿದ್ದ ವಿವಾದ ಮತ್ತೆ ಬಿಗಡಾಯಿಸಿದ್ದು ''ಯಾವುದೇ ಕಾರಣಕ್ಕೂ ಚಿತ್ರದಲ್ಲಿ ವಿಷ್ಣುವರ್ಧನ್ ಅವರನ್ನು ತೋರಿಸಲು ಬಿಡುವುದಿಲ್ಲ ಎಂದು ಭಾರತಿ ವಿಷ್ಣುವರ್ಧನ್ ಗುಡುಗಿದ್ದಾರೆ.
''ಅವರು ರಾಜಾ ವಿಷ್ಣುವರ್ಧನ ಅಥವಾ ವೀರ ವಿಷ್ಣುವರ್ಧನ ಎಂದು ಏನು ಬೇಕಾದರೂ ಹೆಸರಿಟ್ಟುಕೊಳ್ಳಲಿ. ಆದರೆ ಚಿತ್ರದಲ್ಲಿ ವಿಷ್ಣುವರ್ಧನ್ ಅವರನ್ನು ಮಾತ್ರ ತೋರಿಸಬಾರದು ಅಷ್ಟೆ ಎಂಬುದು ಭಾರತಿ ವಿಷ್ಣುವರ್ಧನ್ ಅವರ ಅಚಲ ನಿಲುವಾಗಿದೆ.
ತಾವು ನಿರ್ಮಿಸುತ್ತಿರುವ ಚಿತ್ರಕ್ಕೆ ದಕ್ಷಿಣ ಭಾರತ ಚಲನ ಚಿತ್ರ ವಾಣಿಜ್ಯ ಮಂಡಳಿ ಎರಡು ಹೆಸರುಗಳನ್ನು ಸೂಚಿಸಿದ್ದು ಈ ಪೈಕಿ ಒಂದು ಹೆಸರನ್ನು ಅಂತಿಮಗೊಳಿಸುವುದಾಗಿ ದ್ವಾರಕೀಶ್ ಹೇಳಿಕೊಂಡಿದ್ದರು.
''ಅವರು ರಾಜಾ ವಿಷ್ಣುವರ್ಧನ ಅಥವಾ ವೀರ ವಿಷ್ಣುವರ್ಧನ ಎಂಬ ಹೆಸರನ್ನಿಟ್ಟು ಚಿತ್ರದಲ್ಲಿ ವಿಷ್ಣುವರ್ಧನ್ ಅವರನ್ನು ತೋರಿಸಲು ಮನಸ್ಸು ಮಾಡಿರಬಹುದು. ಆದರೆ ಅದು ಅವರಿಗೆ ಹೇಳಿಸಿದ ಸರಿಯಾದ ಮಾರ್ಗವಲ್ಲ ಎಂದಿದ್ದಾರೆ ಭಾರತಿ.
ಯಾವುದೂ ದುರುಪಯೋಗವಾಗಬಾರದು. ಆ ದೃಷ್ಟಿಯಿಂದಲೇ ತಾವು ಈ ಹಿಂದೆ ವಿಷ್ಣುವರ್ಧನ ಶೀರ್ಷಿಕೆ ಬಗ್ಗೆ ವಿರೋಧ ವ್ಯಕ್ತಪಡಿಸಿದ್ದಾಗಿ ಭಾರತಿ ತಿಳಿಸಿದರು. ಶೀರ್ಷಿಕೆ ನೀಡಿಕೆಗೆ ಸಂಬಂಧಿಸಿದಂತೆ ಈ ಹಿಂದೆ ವಾಣಿಜ್ಯ ಮಂಡಳಿಗೆ ಪತ್ರ ನೀಡಿದಂತೆಯೇ ಈಗಲೂ ಪತ್ರ ಬರೆದು ಚಿತ್ರದಲ್ಲಿ ವಿಷ್ಣು ಅವರನ್ನು ತೋರಿಸದಂತೆ ತಡೆಯೊಡ್ಡಬೇಕೆಂದು ಕೋರುವುದಾಗಿ ಭಾರತಿ ವಿಷ್ಣುವರ್ಧನ್ ತಿಳಿಸಿದರು.
ದ್ವಾರಕೀಶ್ ನಿರ್ಮಿಸಿ ಸುದೀಪ್ ಅಭಿನಯಿಸುತ್ತಿರುವ ಈ ಚಿತ್ರಕ್ಕೆ ಆರಂಭದಲ್ಲಿ ''ವಿಷ್ಣುವರ್ಧನ ಎಂದು ಹೆಸರಿಡಲಾಗಿತ್ತು. ಆದರೆ, ದ್ವಾರಕೀಶ್ ಅವರು ವಿಷ್ಣು ಅವರ ಕೊನೆಯ ದಿನಗಳಲ್ಲಿ ಅವರ ಜೊತೆ ಒಳ್ಳೆಯ ಸಂಬಂಧ ಹೊಂದಿರಲಿಲ್ಲ. ಹಾಗೂ ಇನ್ನಿತರ ಕಾರಣಗಳಿಗಾಗಿ ಅವರ ಚಿತ್ರಕ್ಕೆ ತಮ್ಮ ದಿವಂಗತ ಪತಿಯ ಹೆಸರಿಡುವುದು ಬೇಡ ಎಂದು ಭಾರತಿ ವಿಷ್ಣುವರ್ಧನ್ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಪತ್ರ ಬರೆದು ಕೋರಿದ್ದರು. ಈ ಹಿನ್ನೆಲೆಯಲ್ಲಿ ಚಿತ್ರಕ್ಕೆ ''ವಿಷ್ಣುವರ್ಧನ ಹೆಸರಿಡಲು ವಾಣಿಜ್ಯ ಮಂಡಳಿ ದ್ವಾರಕೀಶ್‌ಗೆ ಅನುಮತಿ ಕೊಟ್ಟಿರಲಿಲ್ಲ.
ಈ ಸಂಬಂಧ ತಾವು ಕಾನೂನು ಸಮರ ನಡೆಸುವುದಾಗಿ ಹೇಳಿಕೊಡಿದ್ದ ದ್ವಾರಕೀಶ್, ಆ ಬಳಿಕ ದಕ್ಷಿಣ ಭಾರತ ವಾಣಿಜ್ಯ ಮಂಡಳಿಗೆ ಈ ಸಂಬಂಧ ದೂರು ಸಲ್ಲಿಸಿದ್ದರು.