ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ರಕ್ಷಿತಾ-ಪ್ರೇಮ್ ವಿವಾಹ ವಿಚ್ಚೇದನ ಸುಳ್ಳು ವರದಿ? (Rakshitha | Prem | Shivarajkumar | Jogaiah)
PR
ಎಲ್ಲಾ ಕಲಹಗಳಿಗೂ ಒಂದಲ್ಲಾ ಒಂದು ರೀತಿಯಲ್ಲಿ ಆರ್ಥಿಕ ವಿಷಯವೇ ಕಾರಣವಿರುತ್ತದೆ ಎಂಬಂತೆ ನಟಿ ರಕ್ಷಿತಾ ಮತ್ತು ನಿರ್ದೇಶಕ ಪ್ರೇಮ್ ದಾಂಪತ್ಯದಲ್ಲಿ ವಿರಸ ಉಂಟಾಗಲೂ ಹಣದ ವಿಚಾರವೇ ಮೂಲ ಕಾರಣ ಎಂದು ಪ್ರಸಿದ್ಧ ವಾರಪತ್ರಿಕೆಯೊಂದು ಇತ್ತೀಚೆಗೆ ಬರೆದಿತ್ತು.

ಈ ಹಣಕಾಸಿನ ವಿಚಾರದಿಂದ ಇವರಿಬ್ಬರೂ ಪ್ರೀತಿಯಿಂದ ಖರೀದಿಸಿದ್ದ ಮನೆಯನ್ನು ಮಾರಾಟ ಮಾಡಲು ಹೊರಟಿದ್ದಾರೆ, ಇತ್ಯಾದಿ-ಇತ್ಯಾದಿ ಕಾರಣಗಳಿಂದ ಸಂಸಾರದಲ್ಲಿ ಕಲಹ ಉಂಟಾಗಿ ವಿವಾಹ ವಿಚ್ಚೇದನದವರೆಗೂ ಹೋಗಿದೆ ಎಂಬಂತೆ ಪತ್ರಿಕೆ ಬರೆದಿತ್ತು.

ಹಾಗೂ ಹಣಕಾಸಿನ ತೊಂದರೆಗೆ ಹ್ಯಾಟ್ರಿಕ್ ಹೀರೋ ಶಿವಣ್ಣ ನಾಯಕನಾಗಿ ನಟಿಸುತ್ತಿರುವ 'ಜೋಗಯ್ಯ' ಚಿತ್ರಕ್ಕೆ ಮಾಡಿದ್ದ ಅದ್ದೂರಿ ವೆಚ್ಚವೇ ಕಾರಣ ಎಂದೂ ಪತ್ರಿಕೆ ಪ್ರಕಟಿಸಿತ್ತು. ಹೀಗೆ 'ಜೋಗಯ್ಯ' ಚಿತ್ರದ ನಿರ್ಮಾಪಕಿ ರಕ್ಷಿತಾ ಮತ್ತು ಪತಿ ನಿರ್ದೇಶಕ ಪ್ರೇಮ್ ನಡುವೆ ಸಾಂಸಾರಿಕ ವಿವಾದ ಏರ್ಪಟ್ಟಿದೆ ಎಂದೆಲ್ಲಾ ರಾಜ್ಯದಾದ್ಯಂತ ಸುದ್ದಿಯಾಗಿತ್ತು.

ಈ ವಿಚಾರಕ್ಕೆ ಸಂಬಂಧಿಸಿ ಪ್ರಸಿದ್ಧ ದೈನಿಕವೊಂದಕ್ಕೆ ಪ್ರತಿಕ್ರಿಯಿಸಿರುವ ನಟಿ ರಕ್ಷಿತಾ, ಇವೆಲ್ಲಾ ಬರೀ ಊಹಾಪೋಹಗಳಷ್ಟೆ. 'ಜೋಗಯ್ಯ' ಚಿತ್ರಕ್ಕೆ ಅದ್ದೂರಿ ವೆಚ್ಚ ಮಾಡಿರುವುದು ನಿಜ. ಆದರೆ ಆ ಕಾರಣದಿಂದ ನಮ್ಮ ಸಂಸಾರದಲ್ಲಿ ಯಾವುದೇ ಬಿರುಕು, ಭಿನ್ನಾಭಿಪ್ರಾಯಗಳು ಕಾಣಿಸಿಕೊಂಡಿಲ್ಲ. ನಾವು ದಂಪತಿಗಳು ಚೆನ್ನಾಗಿಯೇ ಇದ್ದೇವೆ.

ಈಗಾಗಲೇ 'ಜೋಗಯ್ಯ' ಚಿತ್ರದ ಸ್ಯಾಟಲೈಟ್ ಪ್ರಸಾರ ಹಕ್ಕು ಮೂರು ಕೋಟಿಗೆ ಮಾರಾಟವಾಗಿದೆ. ಸದ್ಯದಲ್ಲೇ ಚಿತ್ರದ ಹಾಡುಗಳು ಮಾರುಕಟ್ಟೆಗೆ ಅಪ್ಪಳಿಸಲಿದೆ ಮತ್ತು ಆಗಸ್ಟ್‌ನಲ್ಲಿ ಚಿತ್ರ ಬಿಡುಗಡೆಗೆ ಎಲ್ಲಾ ಸಿದ್ಧತೆಗಳೂ ನಡೆದಿದೆ. ಹಾಗೂ ಚಿತ್ರಕ್ಕೆ ಬೇಕಾಗುವಷ್ಟು ಹಣ ನಮ್ಮ ಬಳಿ ಇದೆ. ಒಂದು ವೇಳೆ ಹಾಗೇನಾದರೂ ಚಿತ್ರ ಪೂರ್ಣಗೊಳಿಸಲು ಆರ್ಥಿಕ ಸಂಕಷ್ಟ ಎದುರಾದರೆ ಶಿವಣ್ಣನ ಬಳಿ ಸಹಾಯ ಯಾಚಿಸುತ್ತೇನೆ ಹೊರತು ಮನೆ ಮಾರುವ ಗೋಜಿಗೆ ಹೋಗುವುದಿಲ್ಲ. ಇಂತಹ ವರದಿಗಳಲ್ಲಿ ಯಾವುದೇ ಹುರುಳಿಲ್ಲ ಎಂದು ಕಿಡಿಕಾರಿದ್ದಾರೆ.

ನಟಿ ರಕ್ಷಿತಾ 'ಜೋಗಯ್ಯ' ಚಿತ್ರಕ್ಕೆ ಯಾವುದೇ ಮುಲಾಜಿಲ್ಲದೆ ಹಣ ಸುರಿಯುತ್ತಿದ್ದಾರೆ ಎಂದೂ ಈ ಹಿಂದೆ ಭಾರೀ ಸುದ್ದಿಯಾಗಿತ್ತು.
ಇವನ್ನೂ ಓದಿ