ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಪೋರ್ಚುಗಲ್ ಬಾಯ್ ಫ್ರೆಂಡ್‌ಗೆ ರಮ್ಯಾನಲ್ಲಿ ಇಷ್ಟವಾದದ್ದು ಏನು? (Ramya | Sanju Weds Geetha | Dandam Dashagunam | IPL)
PR
ಸೌಂದರ್ಯದ ಸರ್ವಗುಣಗಳ ಗರಿಷ್ಠ ಅಂಶವನ್ನು ಹೊಂದಿರುವ ನಟಿ ರಮ್ಯಾ ಅವರ ಬಾಯ್ ಫ್ರೆಂಡ್‌ ರೆಫೆಲ್‌ಗೆ ಇಷ್ಟವಾದದ್ದು ಅವರ ಗುಣವಂತೆ. ರಮ್ಯಾ ಅವರಲ್ಲಿರುವ ಸೌಜನ್ಯ ಸ್ವಭಾವ ರೆಫೆಲ್‌ಗೆ ತುಂಬಾ ಇಡಿಸಿದೆಯಂತೆ. ಎಲೆಕ್ಟ್ರಾನಿಕ್ ವ್ಯವಹಾರದಲ್ಲಿ ಯುರೋಪಿನಲ್ಲೇ ಮುಂಚೂಣಿಯಲ್ಲಿರುವ ರೆಫೆಲ್ ಕೂಡ ಸಭ್ಯ, ಸಂಭಾವಿತರಂತೆ. ರೆಫೆಲ್ ಅವರ ಈ ಗುಣ ನಟಿ ರಮ್ಯಾ ಅವರಿಗೆ ತುಂಬಾ ಇಷ್ಟವಾಗಿ ಕಳೆದ ಡಿಸೆಂಬರ್‌ನಲ್ಲಿ ಪ್ರೀತಿ ಉಕ್ಕಿ ಈಗ ಇಬ್ಬರ ಮನೆಯವರೂ ಇವರ ಮದುವೆಗೆ ಸಮ್ಮತಿಸಿದ್ದಾರಂತೆ. ಹೀಗೆಂದು ಕನ್ನಡದ ಪ್ರಸಿದ್ಧ ದಿನ ಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ರಮ್ಯಾ ಉಚ್ಚರಿಸಿದ್ದಾರೆ.

'ಸಂಜು ವೆಡ್ಸ್ ಗೀತಾ' ಚಿತ್ರದ ಪತ್ರಿಕಾಗೋಷ್ಠಿಗೆ ತನ್ನ ಬಾಯ್ ಫ್ರೆಂಡ್ ಹಾಜರಾಗಿದ್ದರು ನೀವ್ಯಾರು ಗಮನಿಸಿಲ್ಲ ಅಷ್ಟೆ ಎಂಬ ಉತ್ತರವನ್ನೂ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ. ಐಪಿಎಲ್‌ನ ರಾಯಲ್ ಚಾಲಂಜರ್ಸ್ ಆಟ ನೋಡಲು ಪೋರ್ಚುಗಲ್‌ನಿಂದ ಬಾಯ್ ಫ್ರೆಂಡ್ ಬರುತ್ತಾನೆಂದು ಹೇಳಿ ತನ್ನ ಅಭಿಮಾನಿಗಳಿಗೆ ಆಸಕ್ತಿ ಹುಟ್ಟಿಸಿದ್ದ ರಮ್ಯಾ ನಂತರ ಏಕಾಂಗಿಯಾಗಿ ಕಾಣಿಸಿಕೊಂಡಿದ್ದರು.

ತನ್ನ ಬಾಯ್ ಫ್ರೆಂಡ್‌ನೊಂದಿಗೆ ವಿಶ್ವಪರ್ಯಟನೆಗೆ ಹೊರಟಿದ್ದ ರಮ್ಯಾ, ಲೋಕಸಂಚಾರಕ್ಕೆ ಹೊರಟ ರಮ್ಯಾ ಎಂಬ ವರದಿಗಳು ಬಂದಿದ್ದವು ಅವೆಲ್ಲ ಶುದ್ಧ ಸುಳ್ಳು. ನಾವಿಬ್ಬರೂ ಕೇವಲ ಯುರೋಪ್ ಒಕ್ಕೂಟ ರಾಜ್ಯಗಳನ್ನು ಸುತ್ತಿದ್ದೇವೆಯೇ ಹೊರತು ವಿಶ್ವವನ್ನಲ್ಲ. ಅದೊಂದು ಅದ್ಭುತ ಅನುಭವ. ಮರೆಯಲಸಾಧ್ಯ ಎಂದು ಹೇಳಿಕೊಂಡಿದ್ದಾರೆ. ಸಂಕೋಚ ಸ್ವಭಾವದ ರೆಫೆಲ್‌ಗೆ ಮಾದ್ಯಮದ ಮುಂದೆ ಬರಲು ಮುಜುಗರ, ಆ ಕಾರಣದಿಂದ ಸದ್ಯಕ್ಕೆ ಸ್ವಲ್ಪ ಸೀಕ್ರೇಟ್‌ ಆಗಿ ಇರಲಿ ಎಂಬಂತ ಉತ್ತರ ರಮ್ಯಾ ಅವರದು.

ಸದ್ಯಕ್ಕೆ ರಮ್ಯಾ ಮತ್ತು ರೆಫೆಲ್ ಭಾಷೆ ಕಲಿಯುತ್ತಿದ್ದಾರೆ. ಅಂದರೆ ರೆಫೆಲ್‌ಗೆ ಕನ್ನಡ ಮತ್ತು ಹಿಂದಿ ವಿಷಯಕ್ಕೆ ರಮ್ಯಾ ಟೀಚರ್. ರಮ್ಯಾನಿಗೆ ಪೋರ್ಚುಗಲ್ ಭಾಷೆಗೆ ರೆಫೆಲ್ ಮಾಸ್ಟರ್!
ಇವನ್ನೂ ಓದಿ