ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ರಂಗಾಯಣ ರಘು ಈಗ ಪುಢಾರಿ! (Rangayana raghu | Pudari | M.S. Narasimha moothy | Sanjay S. Doddakadanooru)
PR
ಸದ್ದಿಲ್ಲದೆ ಮುಹೂರ್ತ ನಡೆಸಿ ಚಿತ್ರೀಕರಣವನ್ನೂ ಮುಗಿಸಿ ಚಿತ್ರದ ಬಿಡುಗಡೆ ವೇಳೆ ಕೊಂಚ ಸದ್ದು ಮಾಡುವ ಹೊಸ ಪರಂಪರೆ ಗಾಂಧಿನಗರದಲ್ಲಿ ಆರಂಭಗೊಂಡಿದೆ. ಅಂತೆಯೇ ಹೊಸಬರ ಆಗಮನಕ್ಕೂ ಇದು ಸಲ್ಲುತ್ತೆ. ಇದೀಗ ಹೇಳ ಹೊರಟಿರುವ ವಿಷಯ 'ಪುಢಾರಿ'ಯದು. ಹೊಸ ಚಿತ್ರದ ಹೆಸರೇ 'ಪುಢಾರಿ'. ಈ ಚಿತ್ರದಲ್ಲಿ ನಿರ್ದೇಶಕರ ಹೊರತಾಗಿ ಉಳಿದವರೆಲ್ಲ ಹಳಬರೇ. ಸಂಪೂರ್ಣ ಹಾಸ್ಯಮಯ ಚಿತ್ರ 'ಪುಢಾರಿ'ಗೆ ನಾಯಕ ಅಂತಿಲ್ಲ. ಕಥೆಯೇ ಚಿತ್ರದ ಹೀರೋ ಅಂತೆ. ಆದರೂ ಪ್ರಮುಖ ಪಾತ್ರದಲ್ಲಿ ರಂಗಾಯಣ ರಘು ಇದ್ದಾರೆ.

ಹಾಗೆಂದು ಹೊಸಬ ನಿರ್ದೇಶಕ ಸಂಜಯ್ ಎಸ್. ದೊಡ್ಡಕಾಡನೂರು ಅವರಿಗೆ ಅನುಭವವೇ ಇಲ್ಲ ಅಂತಲ್ಲ. ಕನ್ನಡವಲ್ಲದೆ ತಮಿಳಿನಲ್ಲೂ ಸಹ ನಿರ್ದೇಶಕ, ಸಹಾಯಕ ನಿರ್ದೇಶಕ, ವಿತರಕ ಹಾಗೂ ಪಾಲುದಾರ ನಿರ್ಮಾಪಕರಾಗಿ ಸಿನಿಮಾದ ಹತ್ತು ಹಲವು ವಿಭಾಗಗಳಲ್ಲಿ ದುಡಿದ ಅನುಭವ ಸಂಜಯ್ ಅವರಿಗಿದೆ.

'ಪುಢಾರಿ' ಹೆಸರೇ ಹೇಳುವಂತೆ ರಾಜಕೀಯ ಸಂಬಂಧಿ ಸಿನಿಮಾವಂತೆ. ರಾಜ್ಯ ಹಾಗೂ ರಾಷ್ಟ್ತ್ರ ರಾಜಕೀಯದಲ್ಲಿ ನಡೆಯುತ್ತಿರುವ ಪ್ರಚಲಿತ ವಿದ್ಯಮಾನಗಳೇ ಚಿತ್ರದ ಕಥೆ. ಇಂದಿನ ಭ್ರಷ್ಟ ರಾಜಕೀಯ ಸ್ಥಿತಿ ಗತಿಗಳ ವಿಡಂಬನೆಯೇ ಚಿತ್ರಕಥೆ. ಎಂ.ಎಸ್. ನರಸಿಂಹಮೂರ್ತಿ ಅವರ ಸಂಭಾಷಣೆ ಇದಕ್ಕೆ ಹೇಳಿ ಮಾಡಿಸಿದಂತಿದೆ ಎಂದು ಚಿತ್ರದ ಬಗ್ಗೆ ಹೇಳಿಕೊಳ್ಳುತ್ತಾರೆ ನಿರ್ದೇಶಕ ಸಂಜಯ್.

ಈಗಾಗಲೇ 'ಪುಢಾರಿ'ಯ ಮುಕ್ಕಾಲು ಭಾಗ ಚಿತ್ರೀಕರಣ ಮುಗಿದಿದ್ದು ಮೂರು ಹಾಡುಗಳು ಹಾಗೂ ಕೆಲವು ಮಾತಿನ ಭಾಗದ ಚಿತ್ರೀಕರಣವಷ್ಟೇ ಬಾಕಿ ಇದೆ. ಇನ್ನು ಹತ್ತು ದಿನಗಳ ಶೂಟಿಂಗ್ ಶೆಡ್ಯೂಲ್ ಸದ್ಯದಲ್ಲೇ ಆರಂಭಗೊಳ್ಳಲಿದೆ. ಬೆಂಗಳೂರಿನ ಸುತ್ತುಮುತ್ತಲೇ ಚಿತ್ರೀಕರಣ ನಡೆಯಲಿರುವುದು 'ಪುಢಾರಿ'ಯ ವಿಶೇಷ. 'ನ್ಯಾಯ-ನೀತಿ-ಧರ್ಮ ಎಲ್ಲ ಬರೀ ಪುಸ್ತಕದ ಬದನೆಕಾಯಿ ಅಷ್ಟೇ' ಇದು ಚಿತ್ರದ ಉಪ ಶೀರ್ಷಿಕೆ.

ರಂಗಾಯಣ ರಘು ಜೊತೆಗೆ ನವೀನ್ ಕೃಷ್ಣ ಅವರಿಗೂ ಪ್ರಮುಖ ಪಾತ್ರವಿದೆಯಂತೆ. ಇವರಿಗೆ ತಾವರೆ ಜೋಡಿ. ರಾಜು ತಾಳಿಕೋಟೆ, ಕುರಿಗಳು ಪ್ರತಾಪ್, ಸುಚಿತ್ರಾ ಮತ್ತಿತರರು ಪೋಷಕ ಪಾತ್ರಧಾರಿಗಳು.

ರಾಜೇಶ್ ರಾಮನಾಥ್ ಸಂಗೀತ, ಗೌರಿ ವೆಂಕಟೇಶ್ ಛಾಯಾಗ್ರಹಣ ಚಿತ್ರಕ್ಕಿದೆ. ನಿರ್ದೇಶನದ ಜೊತೆಗೆ ಕಥೆ, ಚಿತ್ರಕಥೆಯೂ ಸಂಜಯ್ ಎಸ್. ದೊಡ್ಡ ಕಾಡನೂರು ಅವರದೇ. ಮಹಾಬಲ ಪಿಕ್ಚರ್ಸ್ ಲಾಂಛನದಡಿ ತಯಾರಾಗುತ್ತಿರುವ 'ಪುಢಾರಿ'ಯ ನಿರ್ಮಾತೃ ಬಿ.ಸತ್ಯನಾರಾಯಣ.
ಇವನ್ನೂ ಓದಿ