ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ರಸ್ತೆಯಲ್ಲೇ ನಟಿ ಮತ್ತು ಪೊಲೀಸ್ ಜಟಾಪಟಿ! (Maithriya | Police | IPC | Sandal wood)
PR
ಮದುವೆಗೆ ಹೊರಟಿದ್ದ ತರಾತುರಿಯಲ್ಲಿ ಕಿರುತೆರೆ ನಟಿ ಮೈತ್ರಿಯಾ ಬೆಂಗಳೂರಿನ ವೆಸ್ಟ್ ಆಫ್ ಕಾರ್ಡ್ ರಸ್ತೆಯಲ್ಲಿ ಸಿಗ್ನಲ್ ಜಂಪ್ ಮಾಡಿ ಸಂಚಾರಿ ನಿಯಮ ಉಲ್ಲಂಘಿಸಿ ಮುಂದೆ ಸಾಗಿದ್ದಾರೆ. ಎಲ್ಲರಿಗೂ ಒಂದೇ ಕಾನೂನು ಎಂಬಂತೆ ನಟಿಯನ್ನು ತಡೆದು ನಿಲ್ಲಿಸಿದ ಪೇದೆ ಕಾನೂನಿನ ಪ್ರಕಾರ ಕ್ರಮ ಕೈಗೊಳ್ಳಲು ಮುಂದಾದರು. ಇದರಿಂದ ಸಿಟ್ಟಿಗೆದ್ದ ನಟಿ ಮತ್ತು ಪೊಲೀಸ್ ನಡುವೆ ಮಾತಿನ ಜಟಾಪಟಿ ಶುರುವಾಗಿ ಕೊನೆಗೆ ರಸ್ತೆಯಲ್ಲೇ ಪೇದೆಯ ಮೇಲೆ ಹಲ್ಲೆಗೆ ಮುಂದಾಗಿದ್ದಾರೆ ಮೈತ್ರಿಯಾ.

ಕಾನೂನಿನ ಅರಿವಿಲ್ಲದ ನಟಿ ಮೈತ್ರಿಯಾ ಪ್ರಕರಣ ಪೊಲೀಸ್ ಮೆಟ್ಟಿಲೇರಿದಾಗಲೇ ಗೊತ್ತಾದದ್ದು ಭಾರತೀಯ ದಂಢ ಸಂಹಿತೆಯ ಪ್ರಕಾರ ಒಂದು ಹಲ್ಲೆಯ ಮೇಲೆ ನಾಲ್ಕೈದು ಸೆಕ್ಷನ್‌ನಡಿ ಕೇಸು ದಾಖಲಿಸಬಹುದೆಂದು. ಒಮ್ಮೆಲೆ ಜ್ಞಾನೋದಯವಾದಂತೆ ವರ್ತಿಸಿದ ನಟಿ ಪೊಲೀಸ್ ಪೇದೆಯೇ ನನ್ನ ಮೇಲೆ ಮೊದಲು ಕೈ ಮಾಡಿದ್ದು ಎಂದು ಹೇಳಿಕೆ ಕೊಟ್ಟರು. ಕೆಲ ಹೊತ್ತಿನ ನಂತರ ತನ್ನನ್ನು ಅವಾಚ್ಯ ಪದಗಳಿಂದ ನಿಂದಿಸಿದರಿಂದ ತಾಳ್ಮೆ ಕಳೆದುಕೊಂಡು ಪೇದೆ ಮೇಲೆ ಕೈ ಮಾಡಲು ಮುಂದಾದೆ ಎಂದರು. ನಂತರ ಸ್ಪಲ್ಪ ಸಾವರಿಸಿಕೊಂಡಂತೆ ಕಂಡ ನಟಿ ರಾಜಿ ಕಾರ್ಯಕ್ಕೆ ಯತ್ನಿಸುತ್ತಿರುವುದಾಗಿ ಹೇಳಿಕೆ ಕೊಟ್ಟರು. ಇವೆಲ್ಲಾ ನಡೆದಿದ್ದು ಶುಕ್ರವಾರ ಬೆಂಗಳೂರಿನ ಬಸವೇಶ್ವರ ನಗರ ಪೊಲೀಸ್ ಠಾಣೆಯಲ್ಲಿ.

ಮದುವೆಗೆ ಹೊರಟಿದ್ದ ನಟಿ ಸ್ಪಲ್ಪ ತಾಳ್ಮೆಯಿಂದ ವಾಹನ ಚಾಲಿಸಿ ಸಂಚಾರಿ ನಿಯಮ ಪಾಲಿಸಿದ್ದರೆ ಇಷ್ಟೊಂದು ರಾದ್ಧಾಂತವಾಗುತ್ತಿರಲಿಲ್ಲವೇನೊ. ಚಂಚಲ ಮನಸ್ಸಿನಿಂದ ಒಂದೊಂದು ಹೇಳಿಕೆಕೊಟ್ಟ ನಟಿಗೆ ಚಿತ್ರರಂಗದಲ್ಲಿ ಅವಕಾಶದ ಬಾಗಿಲು ತೆರೆಯಬಹುದಾ...
ಇವನ್ನೂ ಓದಿ