ಡಿ.ಕೆ. ರಾಮಕೃಷ್ಣ (ಪ್ರವೀಣ್ ಕುಮಾರ್) ನಿರ್ಮಿಸುತ್ತಿರುವ 'ಒನಕೆ ಓಬವ್ವ' ಚಿತ್ರದ ಶೂಟಿಂಗ್ ಬೆಂಗಳೂರಿನ ರಾಜಾಜಿನಗರದ ವಿನಾಯಕ ದೇಗುಲದಲ್ಲಿ ಆರಂಭವಾಯಿತು. ಇದು ಪ್ರವೀಣ್ ನಿರ್ಮಿಸುತ್ತಿರುವ ಹದಿನೆಂಟನೇ ಚಿತ್ರ. 'ಶಿಷ್ಯ' ಖ್ಯಾತಿಯ ದೀಪಕ್ ಈ ಚಿತ್ರದ ನಾಯಕ. ಲೇಡಿ ಬ್ರೂಸ್‌ಲೀ ಆಯೇಷಾ ಒನಕೆ ಓಬವ್ವನ ಪಾತ್ರಧಾರಿ.
ರವಿಶಂಕರ್, ರಾಜು ಭಯ್ಯಾ, ಸ್ವಸ್ತಿಕ್ ಶಂಕರ್, ಬುಲೆಟ್ ಪ್ರಕಾಶ್, ತಿಲಕ್ ಮಂತಾದವರು ಚಿತ್ರದ ತಾರಾ ಬಳಗದಲ್ಲಿದ್ದಾರೆ. ಈ ತಿಂಗಳು ಬೆಂಗಳೂರು ಹಾಗೂ ಚಿತ್ರದುರ್ಗದಲ್ಲಿ ಚಿತ್ರಕ್ಕೆ ಒಂದೇ ಹಂತದ ಚಿತ್ರೀಕರಣ ನಡೆಯಲಿದೆ. ಸಾಹಸ ಪ್ರಧಾನವಾದ ಈ ಚಿತ್ರಕ್ಕೆ ಚಿತ್ರಕಥೆ ಬರೆದು ನಿರ್ದೇಶನದ ಜವಾಬ್ದಾರಿ ಹೊತ್ತಿರುವವರು ಆನಂದ್ ಪಿ. ರಾಜು.
ರಾಜೇಶ್ ರಾಮನಾಥ್ ಸಂಗೀತವಿರುವ ಈ ಚಿತ್ರಕ್ಕೆ ಗೌರಿ ವೆಂಕಟೇಶ್ ಅವರ ಛಾಯಾಗ್ರಹಣವಿದೆ. ಥ್ರಿಲ್ಲರ್ ಮಂಜು, ರವಿ ವರ್ಮಾ ಹಾಗೂ ಕೌರವ ವೆಂಕಟೇಶ್ ಈ ಮೂರೂ ಮಂದಿಯ ಸಾಹಸ ನಿರ್ದೇಶನವಿರುವ 'ಒನಕೆ ಓಬವ್ವ' ಚಿತ್ರಕ್ಕೆ ಸಂಭಾಷಣೆಗಳನ್ನು ಬಿ.ಎ. ಮಧು ಬರೆದಿದ್ದಾರೆ.