ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಮಾತೃಭಾಷೆಗಾಗಿ ಉಚಿತವಾಗಿ ನಟಿಸಿದ ನೀತೂ! (Neethu | Ujwadu | Kasargod chinna | Kannada Cinema)
PR
ಚಿತ್ರ ನಿರ್ಮಾಪಕ ಶೂಟಿಂಗ್ ವೇಳೆ ಸೆಟ್‌ನಲ್ಲಿ ಕಿರಿ ಕಿರಿ ಮಾಡ್ತಾನೆ ಎಂದು ಪತ್ರಕರ್ತರ ಮುಂದೆ ನಿಂತು ಕಣ್ಣೀರು ಹಾಕಿದವರು ಅಥವಾ ನಿರ್ಮಾಪಕ ಸರಿಯಾಗಿ ಹಣ ಕೊಟ್ಟಿಲ್ಲ ಎಂದು ಕೋರ್ಟ್ ಮೆಟ್ಟಿಲೇರಿ ಚಿತ್ರದ ಅರ್ಧ ಹಕ್ಕುಗಳನ್ನು ಪಡೆದು ಮೆರೆದಾಡಿದವರು ಗಾಂಧಿನಗರದಲ್ಲಿ ಕಾಣ ಸಿಗಬಹುದು. ಆದರೆ ನಿರ್ಮಾಪಕ ನನ್ನ ಪಾಲಿನ ದೇವರು, ಇದು ನನ್ನ ಚಿತ್ರ ಎಂದು ಶ್ರಮಿಸುವವರು ಗಾಂಧಿನಗರದಲ್ಲಿ ಸಿಗುತ್ತಾರಾ ಎಂಬ ಪ್ರಶ್ನೆಗೆ ಇಲ್ಲಿದೆ ಅನುಪಮ ಆನ್ಸರ್ 'ಯೆಸ್'.

ಕಾಸರಗೋಡು ಚಿನ್ನಾ ನಿರ್ದೇಶನದ 'ಉಜ್ವಾಡು' ಕೊಂಕಣಿ ಚಿತ್ರದ ನಾಯಕಿ ನಟಿ ನೀತು ಚಿತ್ರದ ಸಂಭಾವನೆ ಯಾಕೆ ಪಡೆದಿಲ್ಲಾ ಎಂದು ಕೇಳಿದರೆ 'ಇದು ನನ್ನ ಮಾತೃ ಭಾಷೆಯ ಚಿತ್ರ. ಇಲ್ಲಿ ಸಂಭಾವನೆ ಬೇಕಾಗಿಲ್ಲ. ಚಿತ್ರ ನನ್ನದು ಎನ್ನುವ ಭಾವನೆ ಮುಖ್ಯ' ಎಂದು ಉತ್ತರಿಸುತ್ತಾರೆ.

ಚಿತ್ರೀಕರಣದ ಸಮಯದಲ್ಲಿ ನಡೆದ ಒಂದು ಸನ್ನಿವೇಶವನ್ನು ನಿರ್ದೇಶಕ ಕಾಸರಗೋಡು ಚಿನ್ನಾ ಪತ್ರಕರ್ತರಿಗೆ ವಿವರಿಸಿದರು. 'ಚಿತ್ರದ ಬಹುತೇಕ ಭಾಗ ಶೂಟ್ ಆಗಿತ್ತು. ನೀತು ಅವರ ಒಂದು ಕ್ಲೈಮ್ಯಾಕ್ಸ್ ಸೀನ್ ಬಾಕಿ ಉಳಿದಿತ್ತು. ಅಷ್ಟರಲ್ಲಿ ನನ್ನ ಮೊಬೈಲಿಗೆ 'ನೀತು ತಂದೆ ತೀರಿಕೊಂಡರು' ಎನ್ನುವ ಮೆಸೇಜ್ ಬಂತು. ನೇರವಾಗಿ ನೀತು ಬಳಿ ಹೇಳಲಾಗದ ಪರಿಸ್ಥಿತಿ. ಬೇರೊಬ್ಬರ ಮೂಲಕ ಹೇಳಿಸಿದೆ. ನೀತು ಅಲ್ಲಿಂದಲೇ ಹೊರಟು ನಿಂತರು. ಇನ್ನು ಕನಿಷ್ಠ ಹತ್ತು ದಿನ ನೀತು ಕೈಗೆ ಸಿಗೋಲ್ಲ ಎಂದುಕೊಂಡೆ. ಆದರೆ ತಂದೆಯ ಕ್ರಿಯಾವಿಧಿ ಮುಗಿಸಿಕೊಂಡು ಮರುದಿನವೇ ಶೂಟಿಂಗ್ ಸ್ಪಾಟ್‌ಗೆ ನೀತು ಹಾಜರಾಗಿದ್ದರು' ಎಂದರು ಚಿನ್ನಾ.

ತುಂಬಾ ಬೇಸರದ ಕಾಲದಲ್ಲೂ ಯಾಕೆ ಈ ರೀತಿಯ ಸೇವಾ ನಿಷ್ಠೆ ಎಂದು ಚಿನ್ನಾ ಕೇಳಿದ್ದಕ್ಕೆ ನೀತು ಉತ್ತರಿಸಿದ್ದಿಷ್ಟು: 'ನೋಡಿ ಸಾರ್.. ನಿರ್ಮಾಪಕರು ನಮ್ಮನ್ನು ನಂಬಿ ಚಿತ್ರಕ್ಕೆ ಬಹಳಷ್ಟು ಹಣ ಸುರಿದಿರುತ್ತಾರೆ. ನಮ್ಮಿಂದಾಗಿ ಅಂತಹ ನಿರ್ಮಾಪಕರಿಗೆ ತೊಂದರೆಯಾಗಕೂಡದು. ಬದುಕಿನಲ್ಲಿ ಯಾವತ್ತೂ ಏಳು ಬೀಳುಗಳು ಇರುತ್ತವೆ'.
ಇವನ್ನೂ ಓದಿ