'ನಿಗೂಢ' ಚಿತ್ರದ ಚಿತ್ರೀಕರಣಕ್ಕಾಗಿ ಕೊಟ್ಟಿಗೆ ಹಾರಕ್ಕೆ ಹೋಗಿದ್ದೆ. ಅಲ್ಲಿ ಮೊಬೈಲ್ ನೆಟ್‌ವರ್ಕ್ ಸಿಗುತ್ತಿರಲಿಲ್ಲ. ಇದನ್ನೇ ತಪ್ಪಾಗಿ ಅರ್ಥೆಸಿಕೊಂಡು ಸಾಲಕೊಡದೆ ತಲೆಮರೆಸಿಕೊಂಡಿದ್ದಾನೆ ಎಂದು ನಿರ್ಮಾಪಕ ಮುರಳಿ ನನ್ನ ಮೇಲೆ ವಿನಾಕಾರಣ ವಂಚನೆ ಆರೋಪ ಮಾಡುತ್ತಿದ್ದಾರೆ ಎಂದು 'ಗನ್' ಚಿತ್ರದ ನಟ, ನಿರ್ದೇಶಕ ಹರೀಶ್ ರಾಜ್ ತಿಳಿಸಿದ್ದಾರೆ.
ಗುರುವಾರ ಮಧ್ಯಾಹ್ನ ಪೊಲೀಸರ ವಶಕ್ಕೆ ಒಳಗಾದ ನಟ ಹರೀಶ್ ರಾಜ್, ನಿರೀಕ್ಷಣಾ ಜಾಮೀನು ಪಡೆದಿದ್ದರಿಂದ ಬಂಧನಕ್ಕೊಳಗಾಗಿರಲಿಲ್ಲ.
'ನಿಗೂಢ' ಚಿತ್ರದ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದೆ ಅಲ್ಲಿ ಮೊಬೈಲ್ ಸಿಗ್ನಲ್ ಸಿಗುತ್ತಿರಲಿಲ್ಲ. ಅವತ್ತು ಬೆಳಿಗ್ಗೆ ಮನೆಗೆ ಬರುತ್ತಿದ್ದಂತೆಯೇ ಮುರಳಿ ಬಂದು ಗಲಾಟೆ ಮಾಡುವುದಕ್ಕೆ ಶುರು ಮಾಡಿದರು. ಕೊನೆಗೆ ನಾನೇ ಪೊಲೀಸರ ಬಳಿ ಹೋಗಿ ದೂರು ಕೊಟ್ಟಿರುತ್ತೇನೆ ಎಂದಿದ್ದಾರೆ ಹರೀಶ್ ರಾಜ್. ಮೇ 12ರಂದು ಹರೀಶ್ ರಾಜ್ ವಿರುದ್ಧ ವಂಚನೆ ಪ್ರಕರಣದಡಿ ದೂರು ದಾಖಲಾಗಿದ್ದು, ಅದಕ್ಕಿಂತಲೂ ಒಂದೆರೆಡು ವಾರಗಳ ಹಿಂದಿನಿಂದಿಲೂ ಫೋನ್ ಕರೆಗೆ ಹರೀಶ್ ರಾಜ್ ಸಿಗುತ್ತಿರಲಿಲ್ಲ ಎಂದು ಆರೋಪಿಸಿದ್ದಾರೆ ಮುರಳಿ.