ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಒಂದು ಗೀತೆಯ ಚಿತ್ರೀಕರಣಕ್ಕೆ 70 ಲಕ್ಷ ! (Jarasanda | Vijay | Praneetha | Shashank)
PR
ನಿರ್ದೇಶಕ ಶಶಾಂಕ್ ಅವರು 'ಜರಾಸಂಧ' ಚಿತ್ರಕ್ಕಾಗಿ ಬರೆದಿರುವ 'ಅವರಿವರ ಸೇರದೆ' ಎಂದು ಆರಂಭವಾಗುವ ಗೀತೆಯೊಂದರ ಚಿತ್ರೀಕರಣ ಬಸವಕಲ್ಯಾಣ ಹಾಗೂ ಬೀದರ್‌ನಲ್ಲಿ ನಡೆದಿದೆ. ವಿಜಯ್ ಹಾಗೂ ಪ್ರಣೀತಾ ಈ ಪ್ರಣಯ ಗೀತೆಗೆ ಹೆಜ್ಜೆ ಹಾಕಿದರು. ಇಪ್ಪತ್ತಕ್ಕೂ ಹೆಚ್ಚು ವಿದೇಶಿ ನೃತ್ಯಗಾರರು ಈ ಗೀತೆಯಲ್ಲಿ ಭಾಗವಹಿಸಿದ್ದರು. ಎಪ್ಪತ್ತು ಲಕ್ಷ ರೂಪಾಯಿ ವೆಚ್ಚದಲ್ಲಿ ಈ ಗೀತೆಯನ್ನು ಅದ್ದೂರಿಯಾಗಿ ಚಿತ್ರಿಸಲಾಗಿದೆ ಎಂದು ನಿರ್ದೇಶಕ ಶಶಾಂಕ್ ತಿಳಿಸಿದರು.

'ಪದೇ ಪದೇ ಫೋನಿನಲ್ಲಿ' ಎಂಬ ಗೀತೆಯ ಚಿತ್ರೀಕರಣ ಬ್ಯಾಂಕಾಕ್‌ನಲ್ಲಿ ನಾಲ್ಕು ದಿನಗಳ ಕಾಲ ನಡೆದಿದೆ. ವಿಜಯ್, ಪ್ರಣೀತಾ ಮತ್ತು ಆಫ್ರಿಕನ್ ನೃತ್ಯಗಾರರು ಈ ಗೀತೆಯ ಚಿತ್ರೀಕರಣದಲ್ಲಿ ಅಭಿನಯಿಸಿದ್ದರು.

ಈ ಎರಡು ಗೀತೆಗಳಿಗೂ ಹರ್ಷ ನೃತ್ಯ ನಿರ್ದೇಶನ ಮಾಡಿದ್ದಾರೆ. ಶ್ರೀಮಂತ್ರಾಲಯ ಕಂಬೈನ್ಸ್ ಲಾಂಛನದಲ್ಲಿ ಬಿ. ಬಸವರಾಜ್ ಹಾಗೂ ಬಿ.ಕೆ. ಗಂಗಾಧರ್ ನಿರ್ಮಿಸುತ್ತಿರುವ 'ಜರಾಸಂಧ'ಕ್ಕೆ ಶಶಾಂಕ್ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿದ್ದಾರೆ.

ಶೇಖರ್ ಚಂದ್ರರ ಛಾಯಾಗ್ರಹಣ, ಅರ್ಜುನ್ ಅವರ ಸಂಗೀತ, ಶ್ರೀ ಅವರ ಸಂಕಲನ, ಹರ್ಷ ನೃತ್ಯ ನಿರ್ದೇಶನ, ಮೋಹನ್ ಬಿ. ಕೆರೆ ಕಲಾ ನಿರ್ದೇಶನ ಹಾಗೂ ಅನಿಲ್ ಅವರ ನಿರ್ಮಾಣ ನಿರ್ವಹಣೆ ಇರುವ ಈ ಚಿತ್ರದ ತಾರಾಬಳಗದಲ್ಲಿ ವಿಜಯ್, ಪ್ರಣೀತಾ ಜೊತೆ ದೇವರಾಜ್, ರೂಪಾದೇವಿ, ರಂಗಾಯಣ ರಘು, ಸ್ವಯಂವರ ಚಂದ್ರು, ಚೇತನ್ ಮುಂತಾದವರಿದ್ದಾರೆ.
ಇವನ್ನೂ ಓದಿ