ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಪೋಷಕ ಪಾತ್ರಕ್ಕೂ ಸೈ ಎಂದ ಪುನೀತ್ (Punith Rajkumar | Hudugaru | Veera Kannadiga | Kannada Cinema)
PR
'ಒಬ್ಬ ಕಲಾವಿದನಿಗೆ ಹೀರೋ ಪಾತ್ರವಾದರೇನು? ಪೋಷಕ ಪಾತ್ರವಾದರೇನು? ಅಭಿನಯ ಎಂಬುದು ಮುಖ್ಯವಾಗುತ್ತದೆ. ಆತ ತನ್ನನ್ನು ತಾನು ಹೇಗೆ ಪ್ರೆಸೆಂಟ್ ಮಾಡ್ತಾನೆ ಎಂಬುದು ಕೌಂಟ್ ಆಗುತ್ತೆ. ಹೀಗಿರುವಾಗ ಮೆಚ್ಚಿಕೊಳ್ಳುವಂಥ ಪೋಷಕ ಪಾತ್ರ ಸಿಕ್ಕರೆ ಖಂಡಿತಾ ಅಭಿನಯಿಸುತ್ತೇನೆ'. ಹೀಗೆ ಹೇಳಿದವರು ಬೇರೆ ಯಾರೂ ಅಲ್ಲ ಕನ್ನಡದ ಅತ್ಯಂತ ಬೇಡಿಕೆಯ ನಟ ಪುನೀತ್ ರಾಜ್ ಕುಮಾರ್.

'ಪೋಷಕ ಪಾತ್ರ ಎಂದಾಕ್ಷಣ ಮೂಗು ಮುರಿಯಲಾರೆ. ಕ್ಯಾರೆಕ್ಟರ್ ಚೆನ್ನಾಗಿದ್ದರೆ ಮೈ ಮುರಿದು ನಟಿಸುವೆ' ಎಂದರು ಪುನೀತ್. ಪೋಷಕ ಪಾತ್ರಗಳು ಪೋಷಣೆಯನ್ನೇ ಕಳೆದುಕೊಳ್ಳುತ್ತಿರುವ ಪ್ರಸಕ್ತ ಸನ್ನಿವೇಶದಲ್ಲಿ ಅತ್ಯಂತ ಬೇಡಿಕೆಯಲ್ಲಿರುವ ನಟನೊಬ್ಬ ಹೀಗೆ ಹೇಳಿದ್ದು ಖಂಡಿತಾ ಒಂದು ಆಶಾದಾಯಕ ಬೆಳವಣಿಗೆ.

ಇದನ್ನೆಲ್ಲಾ ಅವರು ಹೇಳಿದ್ದು 'ಹುಡುಗರು' ಚಿತ್ರದ ಪತ್ರಿಕಾಗೋಷ್ಠಿಯಲ್ಲಿ. ಈ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ದೊರೆತ ಹಿನ್ನೆಲೆಯಲ್ಲಿ ಚಿತ್ರದ ಇಡೀ ತಂಡ ಖುಷಿಯಾಗಿತ್ತು. ಹೀಗಾಗಿ ಅಲ್ಲಿ ನಡೆದ ಮಾತುಕತೆಗಳಲ್ಲೆಲ್ಲ ಖುಷಿಯೇ ಆವರಿಸಿತ್ತು.

ಪಾತ್ರ ಚೆನ್ನಾಗಿದ್ದರೆ, ಸಿನಿಮಾಕ್ಕೆ ಅದು ತೂಕ ತರುವಂತಿದ್ದರೆ, ಅರ್ಥಪೂರ್ಣವಾಗಿದ್ದರೆ ಪೋಷಕ ಪಾತ್ರ ಮಾಡಲೂ ನಾನು ರೆಡಿ ಎಂದು ಪುನರುಚ್ಛರಿಸಿದರು ಪುನೀತ್. ಕನ್ನಡದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವವರಲ್ಲಿ ಪುನೀತ್ ಮೊದಲಿಗರು. ಮಾತ್ರವಲ್ಲದೆ ಅವರ ಜನಪ್ರಿಯತೆಯ ರೇಟ್ ಕೂಡ ಇತರರಿಗಿಂತ ಜಾಸ್ತಿಯೇ ಇದೆ. ಹೀಗಿರುವಾಗ ಅವರು ಪೋಷಕ ಪಾತ್ರದ ಬಗ್ಗೆ ಒಲವು ತೋರಿಸಿ ಮಾತನಾಡಿದ್ದು ಸೋಜಿಗದ ಸಂಗತಿಯೇ ಆಗಿದೆ.
ಇವನ್ನೂ ಓದಿ