ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಉಪೇಂದ್ರ ಈಗ ಆರಕ್ಷಕ; ಹ್ಯಾಟ್ರಿಕ್ ನಿರೀಕ್ಷೆಯಲ್ಲಿ ವಾಸು (Upendra | Arakshaka | P.Vasu | Kannada Cinema)
PR
ಪಿ. ವಾಸು ಅವರು ನಿರ್ದೇಶಿಸುತ್ತಿರುವ ಹೊಸ ಚಿತ್ರದಲ್ಲಿ ಉಪೇಂದ್ರ ಅಭಿನಯಿಸುತ್ತಿದ್ದಾರೆಂಬುದು ಹಳೆಯ ಸುದ್ದಿ. ಆ ಚಿತ್ರಕ್ಕೆ ಮೈಸೂರಿನಲ್ಲಿ ಸತತವಾಗಿ ಚಿತ್ರೀಕರಣವೂ ನಡೆಯುತ್ತಿದೆ. ಆದರೆ ಇದುವರೆಗೂ ಈ ಚಿತ್ರಕ್ಕೆ ಅಧಿಕೃತವಾಗಿ ಹೆಸರಿಟ್ಟಿರಲಿಲ್ಲ. 'ಹೆಸರಿಡದ ಚಿತ್ರ', 'ಪ್ರೊಡಕ್ಷನ್ ನಂಬರ್ 2' ಎಂದೇ ಕರೆಯಲಾಗುತ್ತಿದ್ದ ಈ ಚಿತ್ರಕ್ಕೆ ಕೊನೆಗೂ ಒಂದು ಹೆಸರು ಸಿಕ್ಕಿದೆ. ಅದುವೇ 'ಆರಕ್ಷಕ'.

ಈ ಮುನ್ನ ಚಿತ್ರಕ್ಕೆ 'ಆರಕ್ಷಕ' ಹಾಗೂ 'ಅವನು' ಎಂಬ ಎರಡು ಹೆಸರುಗಳನ್ನು ಯೋಚಿಸಿಟ್ಟುಕೊಳ್ಳಲಾಗಿತ್ತು. ನಿರ್ದೇಶಕ ವಾಸು ಮತ್ತು ನಿರ್ಮಾಪಕ ಕೃಷ್ಣ ಪ್ರಜ್ವಲ್ ಎರಡೂ ಹೆಸರುಗಳನ್ನು ಚೇಂಬರ್ ಟೈಟಲ್ ಕಮಿಟಿಯ ಅನುಮತಿಗಾಗಿ ಕಳುಹಿಸಿದ್ದರು. ಎರಡೂ ಹೆಸರುಗಳಿಗೆ ಕಮಿಟಿ ಹಸಿರು ನಿಶಾನೆ ತೋರಿಸಿದೆಯಂತೆ.

ಈ ಪೈಕಿ 'ಆರಕ್ಷಕ' ಚಿತ್ರಕ್ಕೆ ಹೆಚ್ಚು ಒಪ್ಪುವುದರಿಂದ ಅದೇ ಹೆಸರನ್ನು ಆಯ್ಕೆ ಮಾಡುವುದು ಬಹುತೇಕ ಖಚಿತವಾಗಿದೆ. ಒಟ್ಟಿನಲ್ಲಿ ಕನ್ನಡದಲ್ಲಿ ವಾಸು ಅವರ ಮೂರನೆ ಚಿತ್ರದ ಶೀರ್ಷಿಕೆ ಸತತವಾಗಿ 'ಆ' ಕಾರದಿಂದ ಆರಂಭವಾಗುತ್ತಿದೆ. ಮೊದಲು ವಾಸು ವಿಷ್ಣುವರ್ಧನ್‌ಗಾಗಿ 'ಆಪ್ತಮಿತ್ರ' ನಿರ್ದೇಶಿಸಿದ್ದರು. ಶೀರ್ಷಿಕೆ ಚಿತ್ರಕ್ಕೆ ಹೇಳಿಮಾಡಿಸಿದಂತಿದ್ದು ಚಿತ್ರವೂ ಸೂಪರ್ ಹಿಟ್ ಆಯಿತು. ಎರಡನೆಯ ಚಿತ್ರಕ್ಕೆ 'ಆಪ್ತ ರಕ್ಷಕ' ಎಂದು ಹೆಸರಿಡಲಾಯಿತು. ಅದೂ ಯಶಸ್ವಿಯಾಯಿತು. ಈಗ ಮೂರನೆ ಚಿತ್ರಕ್ಕೆ 'ಆರಕ್ಷಕ' ಎಂಬ ಹೆಸರಿಡುವ ಮೂಲಕ ಚಿತ್ರ ತಂಡ ಹ್ಯಾಟ್ರಿಕ್ ನಿರೀಕ್ಷೆಯಲ್ಲಿದೆ.
ಇವನ್ನೂ ಓದಿ