ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಎತ್ತಂಗಡಿ ಭೀತಿಯಿಂದ ನಿಟ್ಟುಸಿರು ಬಿಟ್ಟ 'ಮಲ್ಲಿಕಾರ್ಜುನ' (Mallikarjuna | Ravichandran | KFCC | Dinesh Gandhi)
PR
ಚಿತ್ರರಂಗದಲ್ಲಿ ಒಮ್ಮೊಮ್ಮೆ ಹೀಗೂ ಆಗುತ್ತದೆ. ಚಿತ್ರ ಬಿಡುಗಡೆಯಾದ ಒಂದೇ ವಾರಕ್ಕೆ ಸುಮಾರು ಇಪ್ಪತ್ತಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಅದನ್ನು ಎತ್ತಂಗಡಿ ಮಾಡುವುದು ಅನಿವಾರ್ಯವಾಗುತ್ತದೆ. ಸದ್ಯಕ್ಕೆ ಇಂಥ ದುಸ್ಥಿತಿ ಒದಗಿರುವುದು ಕ್ರೇಜಿ ಸ್ಟಾರ್ ರವಿಚಂದ್ರನ್ ಅಭಿನಯದ 'ಮಲ್ಲಿಕಾರ್ಜುನ' ಚಿತ್ರಕ್ಕೆ.

ಇಷ್ಟು ದಿನ ಐಪಿಎಲ್ ಪಂದ್ಯಗಳು ನಡೆಯುತ್ತಿದ್ದ ಕಾರಣ ಸ್ಟಾರ್ ಚಿತ್ರಗಳು ಸಾಲುಗಟ್ಟಿ ಕಾದು ನಿಂತಿದ್ದವು. ಐಪಿಎಲ್ ಟೂರ್ನಿ ಮುಗಿದಿರುವುದರಿಂದ ಕಳೆದ ವಾರದಿಂದ ಚಿತ್ರಗಳ ಸ್ಟಾಕ್ ಕ್ಲಿಯರೆನ್ಸ್ ಆರಂಭಗೊಂಡಿದೆ.

ಅದರ ಪರಿಣಾಮವಾಗಿ ಈ ವಾರ ಒಟ್ಟಿಗೆ ಮೂರು ಚಿತ್ರಗಳು ಥಿಯೇಟರ್‌ಗಳಿಗೆ ದಾಂಗುಡಿ ಇಡುತ್ತಿವೆ. 'ರಾಜಧಾನಿ', 'ದುಷ್ಟ' ಮತ್ತು ವಿಜಿ ಅಭಿನಯದ 'ಜಾನಿ ಮೇರಾ ನಾಮ್...'. ಮೂರೂ ಚಿತ್ರಗಳು ಒಂದೊಂದು ಕಾರಣಕ್ಕೆ ನೀರೀಕ್ಷೆ ಹುಟ್ಟಿಸಿವೆ.

ಈಗಾಗಲೇ ಈ ಮೂರೂ ಚಿತ್ರಗಳು ಡೇಟ್ ಅನೌನ್ಸ್ ಮಾಡಿರುವುದರಿಂದ ಬಿಡುಗಡೆ ಮುಂದೂಡುವ ಯಾವ ಸೂಚನೆಯೂ ಇಲ್ಲ. ಇವುಗಳ ಮಧ್ಯೆ 'ಮಲ್ಲಿಕಾರ್ಜುನ'ನ ಸ್ಥಿತಿ ಸಂಕಷ್ಟಕ್ಕೆ ಸಿಲುಕಿದೆ. ಬಿಡುಗಡೆಯಾದ ಒಂದೇ ವಾರಕ್ಕೆ ಚಿತ್ರಮಂದಿರಗಳಿಂದ ಎತ್ತಂಗಡಿ ಮಾಡುತ್ತಿರುವುದು ನಿರ್ಮಾಪಕ ದಿನೇಶ್ ಗಾಂಧಿಗೆ ನೋವುಂಟಾಗಿಗೆ. ಅಷ್ಟೊಂದು ಹಣ ಖರ್ಚು ಮಾಡಿ ಕುಟುಂಬ ಸಮೇತ ನೋಡಬಹುದಾದಂತ ತಮಿಳಿನ 'ತವಸಿ' ಚಿತ್ರವನ್ನು ಕನ್ನಡದಲ್ಲಿ ರಿಮೇಕ್ ಮಾಡಿದ್ದ ದಿನೇಶ್ ಗಾಂಧಿಗೆ ಚಿತ್ರ ಎಲ್ಲೆಡೆ ಯಶಸ್ಸು ಗಳಿಸುವ ವಿಶ್ವಾಸ ಇರುವಾಗಲೇ ಈ ರೀತಿಯ ಬೆಳವಣಿಗೆಯಿಂದ ದಿಕ್ಕುತೋಚದಂತಾಗಿ ಕೆಎಫ್‌ಸಿಸಿ ಕಛೇರಿ ಎದುರು ಪ್ರತಿಭಟನೆಗೆ ಮುಂದಾಗಿದ್ದಾರೆ.

ಈ ಕುರಿತು ಪರಿಸ್ಥಿತಿ ಅರಿತ ಕೆಎಫ್‌ಸಿಸಿ, ಚಿತ್ರಮಂದಿರಗಳ ಮಾಲೀಕರೊಂದಿಗೆ ಮಂಗಳವಾರ ಸಭೆ ನಡೆಸಿ ಕಡಿಮೆ ಕಲೆಕ್ಷನ್ ಇರುವಲ್ಲಿ ಒಂದು ವಾರದ ನಂತರ ಬದಲಾವಣೆ ಮಾಡಬಹುದು ಎಂಬ ತೀರ್ಮಾನಕ್ಕೆ ಬಂದಿದೆ. ಕೆಎಫ್‌ಸಿಸಿಯ ಈ ನಿರ್ಧಾರದಿಂದ ಸಮಾಧಾನಗೊಂಡ ನಿರ್ಮಾಪಕ ದಿನೇಶ್ ಗಾಂಧಿ, ಚಿತ್ರಮಂದಿರಗಳ ಮೇಲೆ ಹೆಚ್ಚು ಪ್ರಭಾವ ಇರುವವರು ಉದ್ದೇಶಪೂರ್ವಕವಾಗಿ ಯಾವುದೇ ಚಿತ್ರವನ್ನೂ ಎತ್ತಂಗಡಿ ಮಾಡಲು ಒತ್ತಾಯಿಸುತ್ತಾರೆ.

ಇಂತಹ ಸಂದರ್ಭದಲ್ಲಿ ಪರಭಾಷಾ ಚಿತ್ರಗಳೇ ಪೈಪೋಟಿ ನಡೆಸುತ್ತಿರುವ ಬೆಂಗಳೂರಿನಂತ ನಗರಗಳಲ್ಲಿ ಕನ್ನಡ ಚಿತ್ರಗಳು ಯಶಸ್ವಿಯಾಗುವುದು ಕಷ್ಟವಾಗುತ್ತದೆ. ಆದರೆ ಈಗ 'ಮಲ್ಲಿಕಾರ್ಜುನ' ಚಿತ್ರಕ್ಕೆ ಪೈಪೋಟಿ ನೀಡುತ್ತಿರುವುದು ಕನ್ನಡ ಚಿತ್ರಗಳೇ ಆದರೂ ನಾವೂ ಕೂಡ ಬಂಡವಾಳ ತೊಡಗಿಸಿರುವುದರಿಂದ ಅದನ್ನರಿತು ಯಾವುದೇ ಚಿತ್ರವಾಗಲಿ ಒಂದೆರಡು ವಾರ ಪ್ರದರ್ಶನಕ್ಕೆ ಅವಕಾಶ ಕಲ್ಪಿಸಬೇಕು. ಆಗ ಮಾತ್ರ ಆ ಚಿತ್ರ ಜನರಿಂದ ಪ್ರಚಾರವಾಗಿ ಯಶಸ್ವಿಯಾಗಲು ಸಾಧ್ಯ ಎಂದರು.
ಇವನ್ನೂ ಓದಿ