ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ವಸಂತಪುರದಲ್ಲಿ ಒರಟನ 'ಚಿರಾಯು' ಸಾಹಸ (Chirayu | Orata Prashanth | Nanjundi nagaraj | Mamatha)
PR
ಮಗಳ ಅಪಹರಣದಿಂದಾಗಿ ತಂದೆಗೆ ಆತಂಕ. ಈ ವೃತ್ತಾಂತದ ಬಗ್ಗೆ ಅಪಹೃತಳ ತಂದೆಯಿಂದ ಚಿತ್ರದ ನಾಯಕನಿಗೆ ವಿವರಣೆ. ವಿಷಯ ತಿಳಿದ ನಾಯಕ ಅಪಹರಣಕಾರರನ್ನು ಪತ್ತೆಹಚ್ಚುವಲ್ಲಿ ಯಶಸ್ವಿ. ಹುಡುಗಿಯನ್ನು ಕರೆ ತರುವ ವಿಷಯದಲ್ಲಿ ನಾಯಕ ಹಾಗೂ ಎದುರಾಳಿಗೆ ಮಾರಾಮಾರಿ.

ಈ ಸನ್ನಿವೇಶಗಳನ್ನು ವಿ.ವಿ. ಕ್ರಿಯೇಶನ್ಸ್ ಲಾಂಛನದಲ್ಲಿ ತಯಾರಾಗುತ್ತಿರುವ 'ಚಿರಾಯು' ಚಿತ್ರಕ್ಕಾಗಿ ನಿರ್ದೇಶಕ ಒರಟ ಪ್ರಶಾಂತ್ ವಸಂತಪುರದ ಶ್ರೀ ವಲ್ಲಭ ರಾಯ ದೇವಸ್ಥಾನದ ಸಮೀಪ ಚಿತ್ರೀಕರಿಸಿಕೊಂಡರು.

ನಂಜುಂಡಿ ನಾಗರಾಜ್ ಸಾಹಸ ನಿರ್ದೇಶನ ಮಾಡಿದ ಈ ಸನ್ನಿವೇಶಗಳಲ್ಲಿ ನಿರ್ದೇಶಕ ಒರಟ ಪ್ರಶಾಂತ್, ಮೋಹನ್ ಜುನೇಜ, ಮುನಿ, ಮಮತಾ, ಶ್ರೀಕಾಂತ್, ಹೊನ್ನವಳ್ಳಿ ಕೆಂಪೇಗೌಡ, ಮುಂತಾದವರು ನಟಿಸಿದ್ದರು.

ಒರಟ ಪ್ರಶಾಂತ್ ಎಂದೇ ಖ್ಯಾತರಾಗಿರುವ ನಟ ಪ್ರಶಾಂತ್ ಈಗ ತೆರೆಯ ಮೇಲೆ ನಾಯಕನಾಗಿ ಅಭಿನಯಿಸುವುದರ ಜೊತೆಗೆ ತೆರೆಯ ಹಿಂದೆಯೂ ಕೈಚಳಕ ತೋರಿಸ ಹೊರಟಿದ್ದಾರೆ. ಈ ಚಿತ್ರದ ನಿರ್ಮಾಪಕರೂ ಅವರೇ ಆಗಿದ್ದಾರೆ.

ಜಯಂತ್ ಕಾಯ್ಕಿಣಿ, ಕೆ. ಕಲ್ಯಾಣ್ ಹಾಗೂ ಹೇಮಂತ್ ಸಾಹಿತ್ಯ ರಚಿಸಿದ್ದು ಚಿತ್ರದಲ್ಲಿ ಒಟ್ಟು ಆರು ಹಾಡುಗಳಿವೆ. ಹಾಡುಗಳ ಧ್ವನಿಮುದ್ರಣವೂ ಆರಂಭಗೊಂಡಿದೆ.

ಮುಂದಿನ ಐವತ್ತು ದಿನಗಳ ಕಾಲ ಬೆಂಗಳೂರು, ಮಂಡ್ಯ ಹಾಗೂ ಕುಂದಾಪುರದ ಸುತ್ತಮುತ್ತ ಒಂದೇ ಹಂತದಲ್ಲಿ ಚಿತ್ರೀಕರಣ ನಡೆಸುವ ಯೋಜನೆ ಪ್ರಶಾಂತ್ ಅವರದು.

ಜಿ.ಆರ್. ಶಂಕರ್ ಸಂಗೀತ ಸಂಯೋಜನೆ, ಸಿನಿಟೆಕ್ ಸೂರಿ ಛಾಯಾಗ್ರಹಣ, ನಾಗೇಂದ್ರ ಅರಸ್ ಸಂಕಲನ ಹಾಗೂ ಆನಂದ್, ಮಹೇಶ್, ಅರವಿಂದ್ ಹೈಟ್ ಮಂಜು ಅವರ ನೃತ್ಯ ನಿರ್ದೇಶನ 'ಚಿರಾಯು' ಚಿತ್ರಕ್ಕಿದೆ.

ಹಿರಿಯ ನಟ ರಾಮಕೃಷ್ಣ, ಕೋಟೆ ರವಿಶಂಕರ್, ನೀನಾಸಂ ಅಶ್ವತ್ಥ್ ಅವರೂ ತಾರಾ ಬಳಗದಲ್ಲಿದ್ದಾರೆ.
ಇವನ್ನೂ ಓದಿ