ವೇಶ್ಯಾವಾಟಿಕೆಯಲ್ಲಿ ತೊಡಗಿದ್ದ ಇಬ್ಬರು ನಟಿಯರು ಸೇರಿದಂತೆ ನಾಲ್ವರನ್ನು ಬೆಂಗಳೂರಿನ ನಗರ ಅಪರಾಧ ಪತ್ತೆದಳದ (ಸಿಸಿಬಿ) ಪೊಲೀಸರು ಬುಧವಾರ ಬಂಧಿಸಿದ್ದಾರೆ. ಇವರನ್ನು ಸಂಜೆ ವೇಳೆಗೆ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದಿರುವ ಪೊಲೀಸರು, ಬಂಧಿತ ನಟಿಯರನ್ನು ಸುಮಾ ಮತ್ತು ಲಕ್ಷ್ಮಿ ಎಂದು ಗುರುತಿಸಲಾಗಿದೆ ಎಂದಿದ್ದಾರೆ.
ಇವರೊಂದಿಗಿದ್ದ ಶ್ರೀನಿವಾಸ್ ಮತ್ತು ಪುರುಷೋತ್ತಮ್ ಎಂಬ ಇಬ್ಬರು ಪುರುಷರನ್ನೂ ಪೊಲೀಸರು ಬಂಧಿಸಿದ್ದಾರೆ. ಬೆಂಗಳೂರಿನ ವೆಸ್ಟ್ ಆಫ್ ಕಾರ್ಡ್ ರೋಡ್ನ ಮಧು ಲಾಡ್ಜ್ನಲ್ಲಿ ವೇಶ್ಯಾವಾಟಿಕೆಗೆಗೆ ಸಜ್ಜಾಗುತ್ತಿದ್ದ ಇವರ ಮಾಹಿತಿ ಅರಿತ ಪೊಲೀಸರು ಸ್ಥಳದಲ್ಲೇ ನಾಲ್ವರನ್ನು ಬಂಧಿಸಿದ್ದಾರೆ.
ಇಪ್ಪತ್ತೊಂಬತ್ತು ವರ್ಷದ ನಟಿ ಸುಮಾ ಒಂದೆರಡು ಚಲನ ಚಿತ್ರಗಳೂ ಸೇರಿದಂತೆ ಬದುಕು, ರಂಗೋಳಿ ಇನ್ನಿತರ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಇವರೊಂದಿಗಿದ್ದ ನಲ್ವತ್ತು ವರ್ಷದ ಮತ್ತೊಬ್ಬರು ನಟಿ ಲಕ್ಷ್ಮಿ ವೇಶ್ಯಾವಾಟಿಕೆಗೆ ಸಹಕಾರ ನೀಡುತ್ತಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.