ನಟಿ ಪೂಜಾ ಗಾಂಧಿ ಮತ್ತು ವಿತರಕ ಕಿರಣ್ ವಿವಾದ ಬಿಸಿ ಏರುತ್ತಿದೆ. ಗುರುವಾರ ಪತ್ರಿಕಾ ಗೋಷ್ಠಿ ನಡೆಸಿದ ಪೂಜಾ, ವಿತರಕ ಕಿರಣ್ ತನಗೆ ಅಸಭ್ಯ ಮೊಬೈಲ್ ಸಂದೇಶಗಳನ್ನು ಕಳಿಸುತ್ತಿದ್ದಾರೆ. ಆ ಮೂಲಕ ನನ್ನನ್ನು ಬೆದರಿಸುತ್ತಿದ್ದಾರೆ ಎಂದು ಆರೋಪಿಸಿದರು. ನಂತರ ಕಲಾವಿದರ ಸಂಘಕ್ಕೆ ದೂರು ನೀಡಿದರು.
ಕೇವಲ ಒಂದು ವಾರದ ಹಿಂದೆ ಆರಂಭಗೊಂಡ ವಿವಾದ ಈಗ ಬೀದಿ ರಂಪವಾಗಿದೆ. ಈ ಕುರಿತು ಜಂಟಿ ಪೊಲೀಸ್ ಅಧಿಕಾರಿ ಅಲೋಕ್ ಕುಮಾರ್ ಅವರಿಗೆ ಪೂಜಾಗಾಂಧಿ ಬುಧವಾರ ದೂರು ನೀಡಿದ್ದರು. ಈ ಸಂಬಂಧ ಈಗಾಗಲೇ ವಿತರಕ ಕಿರಣ್ ಅವರನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ನಟಿ ಪೂಜಾ ಗಾಂಧಿ ಹೊಂದಿರುವ ಕಾರು, ಮೊಬೈಲ್ ನನ್ನದು ಎಂದು ಮಾಧ್ಯಮದಲ್ಲಿ ಕಿರಣ್ ಆರೋಪಿಸಿದ್ದರು. ಆ ನಂತರ ಇದಕ್ಕೆ ಪ್ರತಿಕ್ರಿಯಿಸಿದ ನಟಿ ಪೂಜಾ, ಕಿರಣ್ ಅವರ ಆರೋಪ ಸುಳ್ಳು. ಅವರ ವಾದಕ್ಕೆ ಯಾವುದೇ ಆಧಾರ ಇಲ್ಲ ಎಂದು ನಕ್ಕಿದ್ದರು.
ನಟಿ ಪೂಜಾ ಗಾಂಧಿ ಮತ್ತು ವಿತರಕ ಡಾ. ಕಿರಣ್ ಅವರ ಬಾಂಧವ್ಯ ಈ ಹಿಂದಿನಿಂದಲೂ ಚೆನ್ನಾಗಿಯೇ ಇತ್ತು. ಇಬ್ಬರ ಮನೆಯವರೂ ಪರಸ್ಪರ ಪರಿಚಿತರಾಗಿದ್ದು ಸಣ್ಣದಾಗಿ ಮುಗಿಬೇಕಾಗಿದ್ದ ಮನಸ್ಥಾಪ ವಿವಾದವಾಗಿ ಬೀದಿಗೆ ಬಂದಿದೆ ಎನ್ನುತ್ತಿದೆ ಆಪ್ತ ಮೂಲಗಳು.