ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ದಿಗಂತ್ ಕೈಕೊಟ್ಟ 'ಅನಾರ್ಕಲಿ'ಗೆ ಶ್ರೀನಗರ ಕಿಟ್ಟಿ ಸಾಥ್! (Diganth | Anarkali | Shrinagara Kitty | Saadhu kokila)
PR
ಗುಳಿ ಕೆನ್ನೆ ಹುಡುಗ ದಿಗಂತ್ ಸಾಧು ಕೋಕಿಲ ಅವರ 'ಅನಾರ್ಕಲಿ'ಯನ್ನು ಕೈಬಿಟ್ಟು ಹೊರ ನಡೆದಿದ್ದಾರೆ. ಇದು ಗಾಂಧಿನಗರದ ಲೇಟೆಸ್ಟ್ ಸುದ್ದಿ. ಆದರೆ 'ಅನಾರ್ಕಲಿ' ಅನಾಥಳಾಗಿಲ್ಲ ಎಂಬುದು ಸದ್ಯಕ್ಕೆ ಸಮಾಧಾನಕರ ಸಂಗತಿ. ದಿಗಂತ್ ಸ್ಥಾನಕ್ಕೆ ಶ್ರೀನಗರ ಕಿಟ್ಟಿ ಬಂದಿದ್ದಾರೆ.

ನಡೆದಿದ್ದೇನು? ಸಾಧು ಕೋಕಿಲ ನಿರ್ದೇಶನದ 'ಅನಾರ್ಕಲಿ' ಚಿತ್ರಕ್ಕೆ ದಿಗಂತ್ ನಾಯಕ, ಪ್ರಜ್ಞಾ ನಾಯಕಿ ಎಂದು ಈ ಹಿಂದೆ ಪ್ರಕಟಿಸಿ ಇತ್ತೇಚೆ ಗೋಧೂಳಿ ಮುಹೂರ್ತದಲ್ಲಿ ಚಿತ್ರ ಸೆಟ್ಟೇರಿತ್ತು. ದಿಗಂತ್, ಪ್ರಜ್ಞಾ ಇಬ್ಬರೂ ಸಲೀಂ-ಅನಾರ್ಕಲಿಯಾಗಿ ಹೆಜ್ಜೆ ಹಾಕುವ ಮೂಲಕ ಚಿತ್ರದ ಮೊದಲ ದೃಶ್ಯಕ್ಕೆ ಚಾಲನೆ ನೀಡಿದ್ದರು.

ಆದರೆ ಇದ್ದಕ್ಕಿದ್ದಂತೆ ಚಿತ್ರದಿಂದ ದಿಗಂತ್ ಹೊರ ನಡೆದಿದ್ದಾರೆ. ಇದಕ್ಕೆ ಕಾರಣ ಮಾತ್ರ ಇನ್ನೂ ಅಸ್ಪಷ್ಟ. ಕೇಳೋಣವೆಂದರೆ ದಿಗಂತ್ ಮೊಬೈಲ್ ನಾಟ್ ರೀಚೆಬಲ್.

ಇನ್ನು ನಿರ್ದೇಶಕ ಸಾಧು ಕೋಕಿಲ ಅವರನ್ನು ಕೇಳಿದರೆ 'ಅಂಥದ್ದೇನೂ ಆಗಿಲ್ಲ. ದಿಗಂತ್ ಡೇಟ್ ಸಮಸ್ಯೆ ಆಗಿತ್ತು. ಹಾಗಾಗಿ ಅವರು ಚಿತ್ರದಿಂದ ಹೊರಗುಳಿದಿದ್ದಾರೆ. ಅವರ ಜಾಗಕ್ಕೆ ಕಿಟ್ಟಿ ಬಂದಿದ್ದಾರೆ. ಇದಿಷ್ಟೇ ಹೊರತು ಬೇರೇನೂ ಇಲ್ಲ' ಎಂದು ಹೇಳಿ ನುಣುಚಿಕೊಂಡರು.

ಇನ್ನು ಶ್ರೀನಗರ ಕಿಟ್ಟಿ ಅವರನ್ನು ಈ ಬಗ್ಗೆ ಕೇಳಿದರೆ, 'ದಿಗಂತ್ ಹೊರ ನಡೆದದ್ದು ಯಾಕೆ ಎಂಬುದು ನನಗೆ ತಿಳಿಯದು. ಆದರೆ ನಾನು ಆ ಚಿತ್ರದಲ್ಲಿ ನಟಿಸುತ್ತಿರುವುದು ಮಾತ್ರ ನಿಜ' ಎಂದಷ್ಟೇ ಹೇಳಿ ಕಿಟ್ಟಿ ಸುಮ್ಮನಾಗುತ್ತಾರೆ.

ಒಂದು ಮೂಲದ ಪ್ರಕಾರ 'ಅನಾರ್ಕಲಿ'ಯಿಂದ ದಿಗಂತ್ ಹೊರ ನಡೆದಿರುವುದಕ್ಕೆ ನಾಯಕಿ ನಟಿಯೊಬ್ಬರು ಕಾರಣವಂತೆ. ಆ ನಾಯಕಿಯ ಹೆಸರು ರಮ್ಯಾ ಬಾರ್ನಾ ಎನ್ನಲಾಗುತ್ತಿದೆ.

ಚಿತ್ರಕ್ಕೆ ಪ್ರಜ್ಞಾ ಓಕೆ. ರಮ್ಯಾ ಬಾರ್ನಾ ಯಾಕೆ? ಇದು ದಿಗಂತ್ ಒಡ್ಡಿದ ಪ್ರಶ್ನೆ. ಈ ಪ್ರಶ್ನೆಗೆ ಉತ್ತರ ಸಿಗದ ಕಾರಣ ಅವರು ಹೊರ ನಡೆದಿದ್ದಾರೆನ್ನಲಾಗುತ್ತಿದೆ. ಆದರೆ ಇದು ಎಷ್ಟರ ಮಟ್ಟಿಗೆ ಸತ್ಯ ಎಂಬುದು ಗೊತ್ತಾಗಿಲ್ಲ.

ಸ್ಯಾಂಡಲ್ ವುಡ್‌ನಲ್ಲಿ ಇಂಥ ಬೆಳವಣಿಗೆಗಳು ಹೊಸತೇನಲ್ಲ. ಆದರೂ ಆರಂಭದ ಕೆಲವು ದೃಶ್ಯಗಳ ಚಿತ್ರೀಕರಣದ ವರೆಗೆ ಇದ್ದಂತಹ ದಿಗಂತ್ ಹೀಗೆ ದಿಢೀರ್ ಹೊರ ನಡೆದದ್ದು ಮಾತ್ರ ಇನ್ನೂ ನಿಗೂಢ.
ಇವನ್ನೂ ಓದಿ