ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಶಿವಣ್ಣ, ಭಾರತಿ ವಿಷ್ಣುವರ್ಧನ್‌ಗೆ ಡಾ. ಎನ್‌ಟಿಆರ್ ಪ್ರಶಸ್ತಿ (NTR | Bharathi Vishnu vardhan | Shivaraj Kumar | KFCC)
PR
ಸುಪ್ರಸಿದ್ದ ತೆಲುಗು ತಾರೆ, ರಾಜಕಾರಣಿ ದಿವಂಗತ ಎನ್.ಟಿ. ರಾಮರಾವ್ ಅವರ ಹುಟ್ಟುಹಬ್ಬವನ್ನು ಇತ್ತೀಚೆಗೆ ಆಚರಿಸಿದ ಬೆಂಗಳೂರಿನ ಎನ್‌ಟಿಆರ್ ಅಕಾಡೆಮಿ, ಚಿತ್ರರಂಗದಲ್ಲಿ ಅಪಾರ ಸಾಧನೆ ಮಾಡಿರುವ ಭಾರತಿ ವಿಷ್ಣುವರ್ಧನ್ ಮತ್ತು ಶತಕ ವೀರ ಶಿವರಾಜ್ ಕುಮಾರ್ ಅವರಿಗೆ ಡಾ. ಎನ್.ಟಿ.ಆರ್ ಪ್ರಶಸ್ತಿ ಘೋಷಿಸಿದೆ.

ಜೂನ್ ಆರನೇ ತಾರೀಕು ಬೆಂಗಳೂರಿನ ರವೀಂದ್ರ ಕಲಾ ಕ್ಷೇತ್ರದಲ್ಲಿ ನಡೆಯಲಿರುವ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಇವರನ್ನು ಗೌರವಿಸಲಾಗುವುದು.

ಭಾರತೀಯ ಚಲನ ಚಿತ್ರ ಒಕ್ಕೂಟದ (ಐಎಫ್ಎಫ್) ಉಪಾಧ್ಯಕ್ಷ ಎ.ಆರ್. ರಾಜು, ಶಾಸಕ ಎಂ. ಕೃಷ್ಣಪ್ಪ, ಕೆಎಫ್‌ಸಿಸಿ ಅಧ್ಯಕ್ಷ ಬಸಂತ್ ಕುಮಾರ್ ಪಾಟೀಲ್ ಈ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ.

ಹಾಗೂ, ಅದೇ ದಿನ ಸಂಜೆ ಹಿರಿಯ ಗಾಯಕ ದಿವಂಗತ ಗಂಟಸಾಲ ಅವರ ಮಧುರ ಗೀತೆಗಳ 'ಗಂಟಸಾಲ ಗಾನ ಲಹರಿ' ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ ಎಂದಿದ್ದಾರೆ ಅಕಾಡೆಮಿಯ ಮುಖ್ಯ ಕಾರ್ಯದರ್ಶಿ ಸಿ.ವಿ. ಶ್ರೀನಿವಾಸಯ್ಯ.
ಇವನ್ನೂ ಓದಿ