ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಶೂಟಿಂಗ್‌ನಲ್ಲಿ ಬ್ಯುಸಿಯಾಗಿರುವ 'ಟಿಪ್ಪು'ಗೆ ಸಿಮ್ರಾನ್ ಸ್ಟೆಪ್ (Tippu | Adithya | Ragini | Simran)
PR
ಸರಸ್ವತಿ ಎಂಟರ್ಟೈನರ್ ಲಾಂಛನದಲ್ಲಿ ಯೋಗೀಶ್ ಹುಣಸೂರು ನಿರ್ಮಿಸುತ್ತಿರುವ 'ಟಿಪ್ಪು' ಚಿತ್ರಕ್ಕೆ ಮೈಸೂರಿನಲ್ಲಿ ಬಿರುಸಿನ ಚಿತ್ರೀಕರಣ ಸಾಗಿದೆ. ಆದಿತ್ಯ ನಾಯಕನಾಗಿ ಅಭಿನಯಿಸುತ್ತಿರುವ ಈ ಚಿತ್ರದ ನಾಯಕಿ ರಾಗಿಣಿ.

ಚಿತ್ರದ ಹಾಡೊಂದಕ್ಕೆ ಬಾಲಿವುಡ್‌ನ ಸಿಮ್ರಾನ್ ಹೆಜ್ಜೆ ಹಾಕಲಿದ್ದಾರೆ. ರಂಗಾಯಣ ರಘು, ಶೋಭರಾಜ್, ಮಾಲತಿ ಸರದೇಶ್ಪಾಂಡೆ, ಅವಿನಾಶ್ ಮುಂತಾದವರು ಚಿತ್ರದ ತಾರಾ ಬಳಗದಲ್ಲಿದ್ದಾರೆ.

ಎಂ.ಎಸ್. ರಮೇಶ್ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದು ನಿರ್ದೇಶಿಸುತ್ತಿರುವ ಈ ಚಿತ್ರಕ್ಕೆ ಗುರುಕಿರಣ್ ಸಂಗೀತ ನೀಡಿದ್ದಾರೆ.

ದಾಸರಿ ಸೀನು ಛಾಯಾಗ್ರಹಣ, ಎಸ್. ಮನೋಹರ್ ಸಂಕಲನ, ರಾಮ್ ಶೆಟ್ಟಿ ಸಾಹಸ ನಿರ್ದೇಶನ ಹಾಗೂ ಸೋಮಶೇಖರ್ ಮತ್ತು ಗಗನ ಮೂರ್ತಿ ಅವರ ನಿರ್ಮಾಣ ನಿರ್ವಹಣೆ 'ಟಿಪ್ಪು' ಚಿತ್ರಕ್ಕಿದೆ.
ಇವನ್ನೂ ಓದಿ