ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಅಪವಾದಕ್ಕೆ ಅಂಜಿ ಅಧ್ಯಕ್ಷ ಸ್ಥಾನ ಬೇಡವೆಂದರೇ ಭಾರತಿ? (Bharathi Vishnuvardhan | Vishnuvardhan | Aaptha rakshaka | Kannada Movies)
PR
ಕರ್ನಾಟಕ ಸರಕಾರ ಕೊಡಮಾಡುವ 2009-10ನೇ ಸಾಲಿನ ರಾಜ್ಯ ಪ್ರಶಸ್ತಿಗಳಿಗೆ ಅರ್ಹವಾದ ಕನ್ನಡ ಚಿತ್ರಗಳನ್ನು ಆಯ್ಕೆ ಮಾಡಲೆಂದು ರಚಿಸುವ ಆಯ್ಕೆ ಸಮಿತಿಯ ಅಧ್ಯಕ್ಷ ಸ್ಥಾನಕ್ಕೆ ಭಾರತಿ ವಿಷ್ಣುವರ್ಧನ್ ಅವರ ಹೆಸರೇ ಕೇಳಿ ಬರುತ್ತಿದೆಯಾದರೂ ಭಾರತಿ ಅವರು ಈ ಹೊಣೆಯನ್ನು ನಿರ್ವಹಿಸಲು ಒಲ್ಲೆ ಎಂದಿದ್ದಾರೆ.

ದಿವಂಗತ ವಿಷ್ಣುವರ್ಧನ್ ಅಭಿನಯದ ಚಿತ್ರಗಳು ಆಯ್ಕೆ ಸಮಿತಿ ಮುಂದೆ ಬರುವ ಸಂಭವ ಇದೆಯಾದ್ದರಿಂದ ಭಾರತಿ ಅವರು ಅಧ್ಯಕ್ಷ ಸ್ಥಾನ ತಿರಸ್ಕರಿಸಿದ್ದಾರೆ.

ಸರ್ಕಾರದ ಕಡೆಯಿಂದ ಭಾರತಿ ಅವರಿಗೆ ಅಧಿಕೃತ ಪತ್ರವೇನೂ ಬಂದಿಲ್ಲ. ಕೆಲವು ಪತ್ರಿಕೆಗಳಲ್ಲಷ್ಟೇ ಭಾರತಿ ಆಯ್ಕೆಯಾಗಿದ್ದಾರೆಂದು ಪ್ರಕಟವಾಗಿತ್ತು. ಸರ್ಕಾರದವರು ಎಲ್ಲ ಅಂಶಗಳನ್ನು ಪರೀಶೀಲಿಸಿಯೇ ಆ ನಂತರ ಕ್ರಮ ತೆಗೆದುಕೊಳ್ಳುತ್ತಾರೆ.

ವಿಷ್ಣುವರ್ಧನ್ ನಟಿಸಿದ ಕೆಲ ಚಿತ್ರಗಳು 2009-10ನೇ ಸಾಲಿನ ಪ್ರಶಸ್ತಿಗೆ ಸ್ಪರ್ಧಿಸುವುದು ಖಚಿತ ಎಂದು ವಾರ್ತಾ ಇಲಾಖೆಯ ಅಧಿಕಾರಿಗಳಿಗೆ ತಿಳಿದಿದೆ. ಇದನ್ನೆಲ್ಲ ಅರಿತು ಭಾರತಿ ಅವರು ಈ ನಿರ್ಧಾರಕ್ಕೆ ಬಂದಿದ್ದಾರೆ.

ವಿಷ್ಣುವರ್ಧನ್ ಅಭಿನಯದ 'ಆಪ್ತ ರಕ್ಷಕ' ಚಿತ್ರವು ರಾಜ್ಯ ಪ್ರಶಸ್ತಿಗೆ ಪ್ರಬಲ ಸ್ಪರ್ಧಿಯಾಗಲಿದೆ. ಹೀಗಿರುವಾಗ ಆಯ್ಕೆ ಸಮಿತಿ ಅಧ್ಯಕ್ಷ ಸ್ಥಾನದಲ್ಲಿ ಭಾರತಿ ಅವರು ಕುಳಿತರೆ ಅವರು ಪಕ್ಷಪಾತ ಮಾಡಿದ್ದಾರೆ ಎಂಬ ಅಪವಾದ ಬರುವುದು ಖಚಿತ.

ದ್ವಾರಕೀಶ್ ಅವರು ತಮ್ಮ ನಿರ್ಮಾಣದ ಚಿತ್ರಕ್ಕೆ 'ವೀರ ವಿಷ್ಣುವರ್ಧನ' ಎಂದು ನಾಮಕರಣ ಮಾಡಲು ಹೊರಟಿರುವ ಬಗ್ಗೆ ಪ್ರತಿಕ್ರಿಯೆ ನೀಡಿರುವ ಭಾರತಿ 'ಇದಕ್ಕೆ ನನ್ನ ಅಭ್ಯಂತರವೇನೂ ಇಲ್ಲ' ಎಂದಿದ್ದಾರೆ.
ಇವನ್ನೂ ಓದಿ