ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಬಹುಬೇಗ ಬರಲಿದೆ 'ಜೋಗಯ್ಯ'ನ ಜಮಾನ (Jogayya | Prem | Shivaraj Kumar | Rakshitha)
PR
'ಜೋಗಯ್ಯ' ಚಿತ್ರದ ನಿರ್ದೇಶಕ ಪ್ರೇಮ್ ಮೊದಲ ಸುತ್ತಿನಲ್ಲಿ ಜಯ ಸಾಧಿಸಿದ್ದಾರೆ. 'ಜೋಗಯ್ಯ'ನ ಹಾಡುಗಳು ಈಗಾಗಲೇ ಅತೀವ ಜನಪ್ರಿಯತೆ ಗಳಿಸಿವೆ. ಒಂದು ಕಡೆ ಪಡ್ಡೆ ಹುಡುಗರು ಮತ್ತೊಂದು ಕಡೆ ಚಿಕ್ಕ ಮಕ್ಕಳೂ 'ಜೋಗಯ್ಯ' ಚಿತ್ರದ ಹಾಡುಗಳನ್ನು ಗುನುಗುನಿಸುತ್ತಿದ್ದಾರೆ.

ಸಾಮಾನ್ಯವಾಗಿ ಚಿತ್ರದ ಹಾಡುಗಳ ಧ್ವನಿಮುದ್ರಿಕೆ ಬಿಡುಗಡೆಯಾದ ಕೂಡಲೇ ಆ ಚಿತ್ರದ ಭವಿಷ್ಯವನ್ನು ಚಿತ್ರರಂಗದ ಪಂಡಿತರು ನಿರ್ಧರಿಸುತ್ತಾರೆ. ಶಿವರಾಜ್ ಕುಮಾರ್ ಅವರ ನಟನೆಯ ನೂರನೇ ಚಿತ್ರವಾದ 'ಜೋಗಯ್ಯ'ದ ಬಗ್ಗೆ ಗಾಂಧಿನಗರದವರು ಭಾರೀ ಕುತೂಹಲ ತಾಳಿದ್ದು ಇದೀಗ ಚಿತ್ರದ ಹಾಡುಗಳು ಹಿಟ್ ಆಗಿರುವುದರಿಂದ ಹಂಚಿಕೆದಾರರೆಲ್ಲರೂ ಈ ಚಿತ್ರವನ್ನು ಖರೀದಿಸಲು ಮುಗಿಬೀಳುವುದು ಖಾತ್ರಿಯಾಗಿದೆ.

ಹಾಡುಗಳು ಹಿಟ್ ಆಗಿರುವುದರಿಂದ ಉತ್ಸಾಹಗೊಂಡಿರುವ ಪ್ರೇಮ್ ಈ ಚಿತ್ರದ ಬಿಕೆಟಿ ವಲಯದ ಪ್ರದರ್ಶನದ ಹಕ್ಕಿಗೆ ಆರು ಕೋಟಿ ರೂಪಾಯಿ ಕೇಳುತ್ತಿದ್ದಾರಂತೆ.

ಅಷ್ಟು ದೊಡ್ಡ ಮೊತ್ತಕ್ಕೆ ಚಿತ್ರ ಮಾರಾಟವಾದರೆ ಅದು ಕನ್ನಡ ಚಿತ್ರರಂಗದಲ್ಲಿ ನಿಜಕ್ಕೂ ಒಂದು ದಾಖಲೆಯಾಗಲಿದೆ.

'ಜೋಗಯ್ಯ' ಚಿತ್ರದ ಅಬ್ಬರಕ್ಕೆ ಹೆದರಿ ಅನೇಕ ನಿರ್ಮಾಪಕರು ತಮ್ಮ ಚಿತ್ರಗಳ ಬಿಡುಗಡೆ ದಿನಾಂಕವನ್ನು ಮುಂದಕ್ಕೆ ಹಾಕುತ್ತಿದ್ದಾರೆ. ಒಟ್ಟಿನಲ್ಲಿ ಮುಂಬರುವ ದಿನಗಳು 'ಜೋಗಯ್ಯ'ನದೇ ಜಮಾನವೆನಿಸುವುದು ಖಾತ್ರಿಯಾದಂತಾಗಿದೆ.
ಇವನ್ನೂ ಓದಿ