ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಮಹಿಳೆಯರ ಶೋಷಣೆ ಕುರಿತಾದ 'ಬ್ರಿಡ್ಜ್' ಚಿತ್ರಕ್ಕೆ ತಾರಾ ಸಜ್ಜು (Bridge | thaara | haseena | kannada film)
PR
PR
ಕನ್ನಡ ಚಿತ್ರರಂಗದಲ್ಲಿ ಏಳುಬೀಳು ಕಾಣುತ್ತಲೇ ಅದ್ಬುತ ನಟಿಯಾಗಿ ಅರಳಿದವರು ತಾರಾ. ತಾರಾ ಈಗ ಪಡೆದುಕೊಂಡಿರುವ ಸ್ಥಾನ ಸುಲಭಕ್ಕೆ ಲಭಿಸಿದ್ದಂತೂ ಅಲ್ಲ. ತಾರಾ ಒಮ್ಮೆ ಚಿತ್ರ ನಿರ್ಮಾಣಕ್ಕೆ ತೊಡಗಿ ಕೈ ಸುಟ್ಟುಕೊಂಡಿದ್ದರೂ ಪುನಃ ಪೂರ್ಣ ಪ್ರಮಾಣದ ನಿರ್ಮಾಪಕಿಯಾಗುವ ನಿರ್ಧಾರ ಮಾಡಿದ್ದಾರೆ.

ತನ್ನದೇ ಮನೆ ಹೆಸರು 'ಚಿಗುರು' ಲಾಂಛನದಲ್ಲಿ ತಾರಾ 'ಹಸೀನಾ' ಚಿತ್ರ ನಿರ್ಮಾಣಕ್ಕೆ ಇಳಿದಿದ್ದರು. ಆದರೆ ಅವರೇ ಹೇಳುವಂತೆ ಚಿತ್ರದ ಬಜೆಟ್ ಕೈ ಮೀರಿ ಹೋಗಿ ಹಣ ಹೊಂದಿಸಲಾಗದೆ ಲಾಂಛನದ ಜೊತೆಯಲ್ಲೇ ಚಿತ್ರವನ್ನು ಐ. ಎಂ.ವಿಠ್ಠಲಮೂರ್ತಿ ಅವರಿಗೆ ಮಾರಾಟ ಮಾಡಿದ್ದರು. ಹಾಗಾಗಿ ತಾರಾಗೆ ನಿರ್ಮಾಪಕಿ ಅನ್ನಿಸಿಕೊಳ್ಳಲು ಸಾಧ್ಯವಾಗಿಲ್ಲ.

ಈಗ 'ಬ್ರಿಡ್ಜ್' ಹೆಸರಿನ ಚಿತ್ರ ನಿರ್ಮಿಸಲು ತಾರಾ ಮನಸ್ಸು ಮಾಡಿದ್ದಾರೆ. ಇದು ಗಂಭೀರ ಕಥಾ ವಸ್ತುವಿರುವ ಜನರು ನೋಡುವಂಥ ಚಿತ್ರವಂತೆ. ಹೆಣ್ಣಿನ ಕಥೆಯಾಗಿರುವುದರಿಂದ ತಾರಾ ಈ ಚಿತ್ರದಲ್ಲಿ ನಟಿಸುತ್ತಾರೆ. ನಿರ್ದೇಶಕರ ಜೊತೆ ಅಂತಿಮ ಸುತ್ತಿನ ಮಾತುಕತೆಯಾಗಿ ಒಪ್ಪಂದಗಳು ಅಂತಿಮವಾದರೆ ಜುಲೈನಲ್ಲಿ ಚಿತ್ರೀಕರಣ ಆರಂಭಗೊಳ್ಳಲಿದೆ.

ಚಿತ್ರ ನಿರ್ದೇಶನ ಮಾಡುವ ಆಶೆಯಿದ್ದರೂ, ವೃತ್ತಿಪರ ನಿರ್ಮಾಪಕರೇ ಕೇಳಿದ್ದರೂ ತಾರಾ ಇದುವರೆಗೆ ನಿರ್ದೇಶನಕ್ಕೆ ಮನಸ್ಸು ಮಾಡಿಲ್ಲ. ಆದರೆ ಸದ್ಯಕ್ಕೆ ನಟಿ, ನಿರ್ಮಾಪಕಿಯಾಗಲು ಹೊರಟಿದ್ದಾರೆ. ನಟಿಯಾಗಿ ತಾರಾ ಯಶಸ್ಸು ಕಾಣುವುದು ಖಾತ್ರಿ. ನಿರ್ಮಾಪಕಿಯಾಗಿಯೂ ತಾರಾಗೆ ಯಶಸ್ಸು ಸಿಗಲಿ ಎಂದು ಹಾರೈಸೋಣ.
ಇವನ್ನೂ ಓದಿ