ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » 'ರಾಜಧಾನಿ'ಗೆ ಹಿರಿಯ ಕಲಾವಿದರ ಮೆಚ್ಚುಗೆ (Rajadhani | K.V. Raju | Yash | Dwarakeesh)
PR
'ರಾಜಧಾನಿ' ಚಿತ್ರ ಯಶಸ್ವಿಯಾಗುತ್ತಿರುವ ಬೆನ್ನಲ್ಲೇ ಕನ್ನಡ ಚಿತ್ರರಂಗದ ಹಿರಿಯ ಕಲಾವಿದರು 'ರಾಜಧಾನಿ' ಚಿತ್ರವನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

'ರಾಜಧಾನಿ'ಯನ್ನು ಅತ್ಯುತ್ತಮ ಚಿತ್ರವನ್ನಾಗಿಸಿದ ನಿರ್ದೇಶಕ ಕೆ.ವಿ. ರಾಜು ಅವರನ್ನು ಹಿರಿಯ ಕಲಾವಿದರು ಕೊಂಡಾಡಿದ್ದಾರೆ. ಹಿರಿಯ ನಟ, ನಿರ್ಮಾಪಕ ದ್ವಾರಕೀಶ್ ಅವರು 'ರಾಜಧಾನಿ' ಚಿತ್ರವನ್ನು ವೀಕ್ಷಿಸಿ ಕನ್ನಡ ಚಿತ್ರರಂಗ ಯಾವ ಚಿತ್ರರಂಗಕ್ಕಿಂತಲೂ ಕಡಿಮೆ ಇಲ್ಲ ಎನ್ನುವುದನ್ನು 'ರಾಜಧಾನಿ' ಚಿತ್ರ ತೋರಿಸಿದೆ ಎಂದು ಹೊಗಳಿದ್ದಾರೆ.

ಪ್ರತಿ ಮನೆಯಲ್ಲೂ 'ರಾಜಧಾನಿ' ಚಿತ್ರದಲ್ಲಿ ಬರುವ ಪಾತ್ರಗಳು ಕಂಡು ಬರುತ್ತವೆ. ಈ ಚಿತ್ರವನ್ನು ಮೊದಲು ಹೆತ್ತವರು ನೋಡಬೇಕು ಎಂದಿರುವ ದ್ವಾರಕೀಶ್, ಚಿತ್ರದಲ್ಲಿ ಅಭಿನಯಿಸಿರುವ ಎಲ್ಲ ಹುಡುಗರು ತಮ್ಮ ಸಾಮರ್ಥ್ಯವನ್ನು ಸಾಬೀತು ಪಡಿಸಿದ್ದಾರೆ ಮಾತ್ರವಲ್ಲದೆ ಚಿತ್ರದ ತಾಂತ್ರಿಕ ಗುಣಮಟ್ಟ ಕೂಡಾ ಚೆನ್ನಾಗಿದೆ ಎಂದಿದ್ದಾರೆ.

'ಈಗಿನ ಕಾಲಕ್ಕೆ ತಕ್ಕ ಸಿನಿಮಾ ಇದಾಗಿದ್ದು, ಇಂತಹ ಒಳ್ಳೆ ಸಿನಿಮಾವನ್ನು ಮೊದಲು ತಂದೆ ತಾಯಿಗಳು ನೋಡಬೇಕಾಗಿದೆ' ಎಂದಿದ್ದಾರೆ ಹಿರಿಯ ನಟಿ ಭಾರತಿ ವಿಷ್ಣುವರ್ಧನ್.

'ಛಾಯಾಗ್ರಹಣ ಕೂಡಾ ಉತ್ತಮವಾಗಿದ್ದು, ಚಿತ್ರ ಉತ್ತಮ ಸಂದೇಶವನ್ನು ಬೀರಿದೆ' ಎಂದು ಭಾರತಿ ವಿಷ್ಣುವರ್ಧನ್ ಹೊಗಳಿದರು.

'ಕೋಟೆ' ಚಿತ್ರ ನಿರ್ಮಿಸಿದ ರಾಮು ಕೂಡಾ 'ಬಹಳ ದಿನಗಳ ನಂತರ ರಾಜಧಾನಿಯಂತಹ ಒಳ್ಳೆ ಸಿನಿಮಾ ನೋಡಿದೆ. ಗಳಿಕೆಯಲ್ಲೂ ಈ ಚಿತ್ರ ಉತ್ತಮ ಸಾಧನೆ ಮಾಡಿದೆ' ಎಂದು ಬಣ್ಣಿಸಿದರು.

ಹಿರಿಯ ನಟರಾದ ಶ್ರೀನಿವಾಸಮೂರ್ತಿ, ಸುಂದರರಾಜ್, ಪ್ರಮಿಳಾ ಜೋಷಾಯ್, ತಾರಾ, ಅನಿರುದ್ಧ ಮತ್ತಿತರ ಕಲಾವಿದರು 'ರಾಜಧಾನಿ' ಚಿತ್ರವನ್ನು ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇವನ್ನೂ ಓದಿ