ಎಂ.ಆರ್.ಕೆ. ಫಿಲಂಸ್ ಲಾಂಛನದಲ್ಲಿ ಡಿ.ಕೆ. ರಾಮಕೃಷ್ಣ ನಿರ್ಮಿಸುತ್ತಿರುವ 'ಒನಕೆ ಓಬವ್ವ' ಚಿತ್ರಕ್ಕೆ ಬೆಂಗಳೂರಿನಲ್ಲಿ ಭರದ ಚಿತ್ರೀಕರಣ ನಡೆಯುತ್ತಿದೆ. ನಾಯಕಿ ಆಯೇಷಾ ಹಾಗೂ ಪೆಟ್ರೋಲ್ ಪ್ರಸನ್ನ ಅಭಿನಯಿಸಿದ ಸಾಹಸ ಸನ್ನಿವೇಶದ ಚಿತ್ರೀಕರಣ ಖಾಸಗಿ ರೆಸಾರ್ಟ್ ಒಂದರಲ್ಲಿ ನಡೆಯಿತು.
ಕೆ.ಡಿ. ವೆಂಕಟೇಶ್ ಈ ಸನ್ನಿವೇಶಕ್ಕೆ ಸಾಹಸ ನಿರ್ದೇಶನ ಮಾಡಿದರು. ಆಯೇಷಾ ಮತ್ತು ಶೋಭರಾಜ್ ನಟಿಸಿದ ಮತ್ತೊಂದು ಸಾಹಸ ಸನ್ನಿವೇಶದ ಚಿತ್ರೀಕರಣ ಸಾಹಸ ನಿರ್ದೇಶಕ ಕೌರವ ವೆಂಕಟೇಶ್ ಸಾರಥ್ಯದಲ್ಲಿ ನಡೆಯಿತು.
ಟಿ. ಆರ್. ಮಿಲ್ ರುದ್ರಭೂಮಿಯಲ್ಲಿ ನಿರ್ದೇಶಕ ಆನಂದ್ ಪಿ. ರಾಜು ಈ ಸನ್ನಿವೇಶಗಳನ್ನು ಚಿತ್ರಿಸಿಕೊಂಡರು.
ದೀಪಕ್ ಈ ಚಿತ್ರದ ನಾಯಕ. ಆಯೇಷಾ ಓಬವ್ವನ ಪಾತ್ರಧಾರಿ. ರವಿಶಂಕರ್, ರಾಜು ಭಯ್ಯಾ, ಶೋಭರಾಜ್, ಸ್ವಸ್ತಿಕ್ ಶಂಕರ್, ಪೆಟ್ರೋಲ್ ಪ್ರಸನ್ನ, ಬುಲೆಟ್ ಪ್ರಕಾಶ್, ತಿಲಕ್ ಮುಂತಾದವರು ಚಿತ್ರದ ತಾರಾಬಳಗದಲ್ಲಿದ್ದಾರೆ.
ರಾಜೇಶ್ ರಾಮನಾಥ್ ಅವರ ಸಂಗೀತವಿರುವ 'ಒನಕೆ ಓಬವ್ವ' ಚಿತ್ರಕ್ಕೆ ಗೌರಿ ವೆಂಕಟೇಶ್ ಅವರ ಛಾಯಾಗ್ರಹಣವಿದೆ. ಬಿ.ಎ. ಮಧು ಸಂಭಾಷಣೆ ಬರೆದಿದ್ದಾರೆ. ಚಿತ್ರಕ್ಕೆ ಥ್ರಿಲ್ಲರ್ ಮಂಜು, ರವಿ ವರ್ಮ ಹಾಗೂ ಕೌರವ ವೇಂಕಟೇಶ್ ಅವರ ಸಾಹಸ ನಿರ್ದೇಶನವಿದೆ.