ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಪತ್ರಿಕಾಗೋಷ್ಠಿಯಲ್ಲೇ ವಿಷಸೇವಿಸಿದ ಹಿರಿಯ ನಿರ್ದೇಶಕ (Hiriyooru Raghavendra | Suicide | TV | karthika Deepa)
PR
ಕಲಾವಿದರಿಂದ ಕಿರುಕುಳ ತಾಳಲಾರದ ಕಿರುತೆರೆಯ ಹಿರಿಯ ನಿರ್ದೇಶಕ, ಬರಹಗಾರ, ಕನ್ನಡ ಹೋರಾಟಗಾರ ಹಿರಿಯೂರು ರಾಘವೇಂದ್ರ ಅವರು ಪತ್ರಿಕಾಗೋಷ್ಠಿಯಲ್ಲೇ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಶನಿವಾರ ಬೆಂಗಳೂರಿನಲ್ಲಿ ನಡೆದಿದೆ.

ಪದೇ ಪದೇ ಕಲಾವಿದರ ಕಿರುಕುಳದಿಂದ ನೊಂದಿದ್ದ ಅವರು ತಮ್ಮ ಅಳಲನ್ನು ಪತ್ರಕರ್ತರ ಮುಂದೆ ತೋಡಿಕೊಳ್ಳಲು ಪತ್ರಿಕಾಗೋಷ್ಠಿಯನ್ನು ಕರೆದಿದ್ದರು.

ತಾನು ಎದುರಿಸುತ್ತಿರುವ ಕಿರುಕುಳ, ಆರ್ಥಿಕ ಸಂಕಷ್ಟ, ಹಾಗೂ ಕಿರುತೆರೆಯ ಹಿಂದೆ ನಡೆಯುತ್ತಿರುವ ಸತ್ಯಘಟನೆಗಳನ್ನು ವಿವರಿಸಲು ಆರಂಭಿಸಿದ ಅವರು ಪತ್ರಕರ್ತರ ಎದುರೇ ವಿಷಸೇವಿಸಿ ಆತ್ಮಹತ್ಯೆಗೆ ಯತ್ನಿಸಿದರು.

ಈ ಸಂದರ್ಭ ಎಚ್ಚೆತ್ತ ಪತ್ರಕರ್ತರು ಅವರನ್ನು ಕೂಡಲೆ ಆಸ್ಪತ್ರೆಯೊಂದಕ್ಕೆ ಸಾಗಿಸಿದ್ದಾರೆ. ನಿರ್ದೇಶಕ ಹಿರಿಯೂರು ರಾಘವೇಂದ್ರ ಅವರು ನಿಧಾನವಾಗಿ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.

1980 ರ ದಶಕದಲ್ಲಿ ಕನ್ನಡ ಪರ ಹೋರಾಟಗಳಲ್ಲಿ ಭಾಗವಹಿಸಿದ ಇವರು ದೂರದರ್ಶನದಲ್ಲಿ ಕನ್ನಡ ಕಾರ್ಯಕ್ರಮಗಳು ಹೆಚ್ಚು ಸಮಯ ಪ್ರಸಾರವಾಗಬೇಕೆಂದು ಆಗ್ರಹಿಸಿ ಸೆರೆಮನೆ ವಾಸವನ್ನೂ ಅನುಭವಿಸಿದ್ದರು.

1990 ರಲ್ಲಿ 'ಜೀವ ಜಗತ್ತು' ಎಂಬ ದಾರವಾಹಿಯನ್ನು ಮೊದಲಿಗೆ ನಿರ್ದೇಶಿಸಿದ್ದ ಇವರು, ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಕಾರ್ತಿಕ ದೀಪ' ಸೇರಿದಂತೆ ನೂರಾರು ದಾರವಾಹಿಗಳನ್ನು ನಿರ್ದೇಶಿಸಿದ್ದಾರೆ. ಅಲ್ಲದೆ ಕನ್ನಡ ಕಿರುತೆರೆಗೆ ಅಪಾರ ಕಲಾವಿದರನ್ನೂ ಪರಿಚಯಿಸಿದ್ದಾರೆ.
ಇವನ್ನೂ ಓದಿ