ಕನ್ನಡದಲ್ಲಿ ಬಿಡುವಿಲ್ಲದೆ ನಟಿಸುತ್ತಿರುವ ಚಾಕೋಲೆಟ್ ಹೀರೋ ದಿಗಂತ್, ಬಾಲಿವುಡ್ ಚಿತ್ರದಲ್ಲಿ ನಟಿಸಲಿದ್ದಾರೆ. ನಾಕ್ ಔಟ್, 16 ಡಿಸೆಂಬರ್, ರುದ್ರೇಶ್, ಟಾಂಗೋ ಚಾರ್ಲಿ ಮುಂತಾದ ಚಿತ್ರಗಳನ್ನು ನಿರ್ದೇಶಿಸಿದ್ದ ಮಣಿ ಶಂಕರ್ ಅವರು ನಿರ್ದೇಶಿಸುತ್ತಿರುವ ಚಿತ್ರವೊಂದರಲ್ಲಿ ನಟಿಸುತ್ತಿರುವುದಾಗಿ ದಿಗಂತ್ ಸ್ವತಃ ಹೇಳಿಕೊಂಡಿದ್ದಾರೆ.
ಚಿತ್ರಕ್ಕೆ ಸಂಬಂಧಿಸಿದ ಹೆಚ್ಚಿನ ವಿಷಯಗಳ ಬಗ್ಗೆ ಇನ್ನಷ್ಟೆ ಚರ್ಚಿಸಬೇಕಿದೆ ಎಂದಿರುವ ದಿಗಂತ್, ನಿರ್ದೇಶಕರೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ನನ್ನ ಪಾತ್ರದ ಕುರಿತು ಕೆಲವೇ ದಿನಗಳಲ್ಲಿ ತಿಳಿಸುವುದಾಗಿ ಹೇಳಿದರು.
ಇತ್ತೀಚೆಗೆ ಬ್ಯುಸಿಯಾಗಿರುವ ದಿಗಂತ್ ಹಿಂದಿಯ ತ್ರಿ ಈಡಿಯಟ್ಸ್‌ನ ಕನ್ನಡ ರಿಮೇಕ್‌ಗೂ ಆಯ್ಕೆಯಾಗಿದ್ದಾರೆ.
ಇತ್ತೀಚೆಗೆ ಸಾಧು ಕೋಕಿಲ ನಿರ್ದೇಶನದ 'ಅನಾರ್ಕಲಿ' ಚಿತ್ರದಿಂದ ಹೊರಬಿದ್ದಿದ್ದರು. ಅವರ ಜಾಗಕ್ಕೆ ಶ್ರೀನಗರ ಕಿಟ್ಟಿಯನ್ನು ಸಾಧು ಆಯ್ಕೆ ಮಾಡಿಕೊಂಡಿದ್ದರು.