ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಮತ್ತೊಮ್ಮೆ ಅಖಾಡಕ್ಕಿಳಿದ ಅಶೋಕ್ ಕಶ್ಯಪ್ (Sihimutthu | Ashoke kashyap | Lift kodla | Prem)
PR
ಅಶೋಕ್ ಕಶ್ಯಪ್ ಯಾರಿಗೆ ತಾನೇ ಗೊತ್ತಿಲ್ಲ. ಮೂಲತಃ ಛಾಯಾಗ್ರಾಹಕರಾದರೂ ಈಚೀಚೆಗೆ ಚಿತ್ರ ನಿರ್ದೇಶಕರಾಗಿಯೂ ಅವರು ಹೆಸರು ಮಾಡುತ್ತಿದ್ದಾರೆ. 'ಕಲ್ಯಾಣೋತ್ಸವ', 'ಉಲ್ಟಾ ಪಲ್ಟಾ', 'ಹಾಲುಂಡ ತವರು' ಮೊದಲಾದ ಚಿತ್ರಗಳಿಗೆ ಛಾಯಾಗ್ರಹಣವನ್ನು ನೀಡಿರುವ ಅಶೋಕ್ ಕಶ್ಯಪ್ ನೆರಳು-ಬೆಳಕಿನ ಸಂಯೋಜನೆಯಲ್ಲಿ ತಮ್ಮದೇ ಆದ ವ್ಯಾಕರಣವನ್ನು ಬಳಸುತ್ತಾರೆ ಎಂಬುದು ಇವರ ಕುರಿತಾದ ಮೆಚ್ಚುಗೆಯ ಮಾತು.

ಇಂಥಾ ಕಶ್ಯಪ್ ತೀರಾ ಇತ್ತೀಚೆಗೆ 'ಲಿಫ್ಟ್ ಕೊಡ್ಲಾ' ಎಂಬ ಚಿತ್ರವನ್ನು ನಿರ್ದೇಶಿಸಿದ್ದರು. ತಮಿಳು ಚಿತ್ರವೊಂದರ ರಿಮೇಕ್ ಆಗಿದ್ದ ಇದು ಕಾರಣಾಂತರಗಳಿಂದ ಯಶಸ್ಸು ಕಾಣಲಿಲ್ಲ. ಹಾಸ್ಯಮಯ ಸನ್ನಿವೇಶಗಳಿದ್ದೂ ಹೀಗೇಕಾಯಿತು ಎಂಬ ಪ್ರಶ್ನೆಗೆ ಚಿತ್ರೋದ್ಯಮಿಗಳಿಗೆ ಈಗಲೂ ಉತ್ತರ ಸಿಕ್ಕಿಲ್ಲ. ಈ ಮಧ್ಯೆ ಸುವರ್ಣ ವಾಹಿನಿಗಾಗಿ 'ಪ್ರೀತಿಯಿಂದ' ಎಂಬ ಧಾರಾವಾಹಿಯನ್ನು ಅವರು ನಿರ್ದೇಶಿಸುತ್ತಿದ್ದಾರೆ.

ಕ್ಷಣ ಕ್ಷಣದ ತಾಜಾ ಸುದ್ದಿ, ವಿಶೇಷ ವರದಿ-ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ಇವೆಲ್ಲದರ ನಡುವೆ ಅವರ ನಿರ್ದೇಶನದ 'ಸಿಹಿಮುತ್ತು' ಚಿತ್ರದ ಧ್ವನಿಸುರುಳಿ ಬಿಡುಗಡೆಯ ಕುರಿತಾದ ಸುದ್ದಿಬಂದಿದೆ. ಸದ್ಯದ ಚಾಲ್ತಿಯಲ್ಲಿರುವ ಕುದುರೆಯಾದ ಹರಿಕೃಷ್ಣ ಈ ಗೀತೆಗಳಿಗೆ ಸಂಗೀತ ನೀಡಿದ್ದು ಅವುಗಳ ಕುರಿತು ಒಳ್ಳೆ ಅಭಿಪ್ರಾಯ ಹೊರಬಂದಿದೆ.

ಲವ್ಲಿ ಸ್ಟಾರ್ ಪ್ರೇಮ್, ಕೋಮಲ್ ಕುಮಾರ್, ಧ್ಯಾನ್ ಮೊದಲಾದವರು ಪ್ರಧಾನ ಪಾತ್ರಗಳಲ್ಲಿರುವ ಈ ಚಿತ್ರವು ಸಂಗೀತ-ಸೆಂಟಿಮೆಂಟ್-ಹಾಸ್ಯ ಹೀಗೆ ಬಗೆಬಗೆಯ ಹೂರಣಗಳಿಂದ ಕೂಡಿರಲಿದೆ ಎಂದು ಚಿತ್ರತಂಡವು ಅಭಿಪ್ರಾಯ ಪಡುತ್ತದೆ. ಪರ್ಸೋನಾ ಕಮ್ಯುನಿಕೇಷನ್ಸ್ ಪ್ರೈವೇಟ್ ಲಿಮಿಟೆಡ್ ಅಡಿಯಲ್ಲಿ ಇದು ಬೆಳ್ಳಿತೆರೆಗೆ ಅರ್ಪಣೆಯಾಗಲಿದ್ದು ನಿರೀಕ್ಷೆಯನ್ನು ಅದು ನಿಜಗೊಳಿಸುವುದೇ ಎಂದು ಕಾದುನೋಡಬೇಕಿದೆ.
ಇವನ್ನೂ ಓದಿ