ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ತ್ವರಿತ ಗತಿಯಲ್ಲಿ ಚಿತ್ರೀಕರಣದಲ್ಲಿ ತೊಡಗಿಸಿಕೊಂಡ 'ಶೈಲೂ' (Shailu | S.Narayan | Ganesh | Sanusha)
PR
ಎಸ್.ನಾರಾಯಣ್‌ರವರ ಕೆಲಸದ ಶೈಲಿಯೇ ವಿಶಿಷ್ಟ. ಗುಣಮಟ್ಟದೊಂದಿಗೆ ಅವರೆಂದಿಗೂ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ. ಮುಂಜಾನೆ 6 ಗಂಟೆಗೆ ಮೊದಲ ಷಾಟ್ ತೆಗೆಯುವ ವಿಶಿಷ್ಟತೆಯನ್ನು ರೂಢಿಸಿಕೊಂಡಿರುವ ನಾರಾಯಣ್ ತಮ್ಮ ಸಮಯನಿಷ್ಠತೆಗೆ ಹೆಸರಾಗಿದ್ದಾರೆ.

ಈ ವಿಷಯವನ್ನು ಇಲ್ಲಿ ಪ್ರಸ್ತಾವಿಸಲು ಕಾರಣವಿದೆ. ಗೋಲ್ಡನ್ ಸ್ಟಾರ್ ಗಣೇಶ್ ಮತ್ತು ಎಸ್.ನಾರಾಯಣ್ ಕಾಂಬಿನೇಷನ್‌ನಲ್ಲಿ ಇತ್ತೀಚೆಗಷ್ಟೇ 'ಶೈಲೂ' ಚಿತ್ರದ ಮುಹೂರ್ತವಾಯಿತಲ್ಲಾ? ಮುಹೂರ್ತವಾದ ನಂತರ ಸಮಯವನ್ನು ಹಾಳುಮಾಡದೇ ಲಘು ಉಪಾಹಾರದ ನಂತರ ಚಿತ್ರತಂಡವು ಚಿತ್ರೀಕರಣಕ್ಕೆ ತೊಡಗಿಕೊಳ್ಳುವಂತೆ ಅವರು ಮಾಡಿದ್ದೇ ಇದಕ್ಕೆ ನಿದರ್ಶನ. ಬಸವೇಶ್ವರ ನಗರದ ರಸ್ತೆಗಳು ಹಾಗೂ ಇತರ ಸ್ಥಳಗಳಲ್ಲಿ ಗಣೇಶ್ ಮತ್ತು ಸನುಷಾ ಸಂತೋಷ್ ಅಭಿನಯದ ಕೆಲವೊಂದು ಸನ್ನಿವೇಶಗಳನ್ನು ಈ ಸಂದರ್ಭದಲ್ಲಿ ಚಿತ್ರೀಕರಿಸಲಾಯಿತು.

ಇನ್ನೊಂದು ಕುತೂಹಲಕರ ಸಂಗತಿ ಗೊತ್ತಾ? ಗಣೇಶ್ ಅಭಿನಯದ 'ಮುಂಗಾರು ಮಳೆ' ಹಾಗೂ 'ಅರಮನೆ' ಚಿತ್ರಗಳಿಗೆ ಮುಹೂರ್ತ ನಡೆಸಲಾದ ಮೋದಿ ಆಸ್ಪತ್ರೆಯ ರಸ್ತೆಯ ಸಮೀಪವಿರುವ ವಿನಾಯಕನ ದೇವಾಲಯದಲ್ಲೇ 'ಶೈಲೂ' ಚಿತ್ರದ ಮುಹೂರ್ತ ಮತ್ತು ಪೂಜೆಯನ್ನು ನಿರ್ಮಾಪಕ ಕೆ. ಮಂಜು ವ್ಯವಸ್ಥೆಗೊಳಿಸಿದ್ದರು.

ಈ ಚಿತ್ರದ ಮತ್ತೊಂದು ವಿಶೇಷತೆಯೆಂದರೆ ಗೀತಸಾಹಿತಿಗಳಾದ ಡಾ. ನಾಗೇಂದ್ರ ಪ್ರಸಾದ್ ಹಾಗೂ ಕವಿರಾಜ್ ರವರುಗಳಿಗೆ ಎಸ್.ನಾರಾಯಣ್ ಇದೇ ಮೊದಲ ಬಾರಿಗೆ ತಮ್ಮ ಚಿತ್ರದಲ್ಲಿ ಗೀತರಚನೆಯ ಅವಕಾಶವಿತ್ತಿದ್ದಾರೆ.

ಈ ಇಬ್ಬರು ಕ್ರಮವಾಗಿ ತಲಾ ಎರಡು ಮತ್ತು ಮೂರು ಹಾಡುಗಳನ್ನು ಬರೆದುಕೊಟ್ಟಿರುವುದು ಸ್ವಾಗತಾರ್ಹ ಸಂಗತಿ. ಜಗದೀಶ್ ವಾಲಿ ಈ ಚಿತ್ರದ ಛಾಯಾಗ್ರಾಹಕರಾಗಿದ್ದಾರೆ.
ಇವನ್ನೂ ಓದಿ