ಗೋಲ್ಡನ್ ಸ್ಟಾರ್ ಗಣೇಶ್ ಹುಟ್ಟುಹಬ್ಬ; ಕೂಲಾಗಿ ಶುಭ ಹಾರೈಸಿ
PR
ಮುಂಗಾರು ಮಳೆಯಿಂದ ಗೋಲ್ಡನ್ ಸ್ಟಾರ್ ಆದ ಗಣೇಶ್‌ಗಿಂದು ಜನುಮದಿನ. ಜುಲೈ 2 ಶನಿವಾರಕ್ಕವರು 32ನೇ ವಸಂತಕ್ಕೆ ಕಾಲಿಡುತ್ತಿದ್ದಾರೆ.
ಅಂಗವಿಕಲರು, ಅನಾಥ ಮಕ್ಕಳೊಂದಿಗೆ ತನ್ನ ಹುಟ್ಟು ಹಬ್ಬವನ್ನು ವಿಶಿಷ್ಟವಾಗಿ ಆಚರಿಸಿ, ಸಂಭ್ರಮಾಚರಣೆಯೊಂದಿಗೆ ಅಭಿಮಾನಿಗಳಿಗೆ ಮಾನವೀಯತೆಯ ಸಂದೇಶವನ್ನೂ ನೀಡಲು ಯತ್ನಿಸುತ್ತಿರುವ ಅವರ ಪ್ರಯತ್ನವನ್ನು ಮೆಚ್ಚಲೇಬೇಕು.
ನಟನಾಗಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿ ನಿರ್ದೇಶನ, ನಿರ್ಮಾಣದ ಮಟ್ಟಕ್ಕೆ ಬೆಳೆದಿದ್ದಾರೆ. ಇನ್ನೂ ಎತ್ತರಕ್ಕೆ ಬೆಳೆಯಲು ನೀವೂ ಹಾರೈಸಿ. ನಿಮ್ಮ ಹಾರೈಕೆಯಿಂದ ಅಂಗವಿಕಲ, ಅನಾಥ ಮಕ್ಕಳಿಗೂ ಒಳಿತಾದೀತು....