ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಗೋಲ್ಡನ್‌ ಸ್ಟಾರ್‌ ಅದೃಷ್ಟ ‘ಮದುವೆ ಮನೆ’ಯಲ್ಲಿ ? (Ganesh | Maduve Mane | S. Narayan | Shyloo)
Event
EVENT
ಗೋಲ್ಡನ್‌ ಸ್ಟಾರ್‌ ಗಣೇಶ್‌ಗೆ ಮದುವೆಯಾಗಿ ಒಂದು ಮಗುವೂ ಇದೆಯಲ್ಲಾ? ಮತ್ತಿನ್ಯಾವ ಮದುವೆ ಎಂದು ಗೊಂದಲಕ್ಕೆ ಜಾರದಿರಿ. ಈ ಬಾರಿಯದು ಅಪ್ಪಟ ಫಿಲ್ಮೀ ಮದುವೆ. ಹೌದು, ‘ಯಜಮಾನ’ದಂಥ ಸೂಪರ್‌ಹಿಟ್‌ ಚಿತ್ರವನ್ನು ನೀಡಿದ ಎಚ್‌.ಎ.ರೆಹಮಾನ್‌ ಅರ್ಪಿಸುತ್ತಿರುವ ‘ಮದುವೆ ಮನೆ’ ಎಂಬ ಚಿತ್ರದಲ್ಲಿ ಗಣೇಶ್‌ ಮಿಂಚಲಿದ್ದಾರೆ.

ಕ್ಷಣ ಕ್ಷಣದ ತಾಜಾ ಸುದ್ದಿ, ವಿಶೇಷ ವರದಿ-ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ಸತತ ಸೋಲಿನಿಂದ ಬಳಲುತ್ತಿರುವ ಗಣೇಶ್‌ಗೆ ತಕ್ಷಣಕ್ಕೆ ಒಂದು ಹಿಟ್‌ ಚಿತ್ರ ಬೇಕಾಗಿದೆ. ‘ಚೆಲ್ಲಾಟ’, ‘ಮುಂಗಾರು ಮಳೆ’, ‘ಹುಡುಗಾಟ’, ‘ಗಾಳಿಪಟ’, ‘ಕೃಷ್ಣ’ ಹೀಗೆ ಸರಣಿಯಲ್ಲಿ ಹಿಟ್‌ ಚಿತ್ರಗಳನ್ನು ನೀಡಿದ ಗಣೇಶ್‌ ನಂತರ ಸರಣಿ ಸೋಲಿಗೆ ಸಾಕ್ಷಿಯಾಗಬೇಕಾಯಿತು. ‘ಸರ್ಕಸ್‌’, ‘ಸಂಗಮ’, ‘ಮಳೆಯಲಿ ಜೊತೆಯಲಿ’, ‘ಉಲ್ಲಾಸ ಉತ್ಸಾಹ’, ‘ಏನೋ ಒಂಥರಾ’, ‘ಕೂಲ್‌’ ಹೀಗೆ ಯಾವ ಚಿತ್ರಗಳೂ ಗಣೇಶರ ಕೈಹಿಡಿಯಲಿಲ್ಲ. ಅದರಲ್ಲೂ ‘ಕೂಲ್‌’ ಚಿತ್ರವು ವಿವಾದಕ್ಕೀಡಾದಾಗ ಕೊನೇ ಕ್ಷಣದಲ್ಲಿ ಅದರ ನಿರ್ದೇಶನದ ಜವಾಬ್ದಾರಿಯನ್ನೂ ಹೊತ್ತುಕೊಂಡ ಗಣೇಶ್‌ ಅದನ್ನು ಯಶಸ್ಸಿನ ದಡ ಮುಟ್ಟಿಸುವಲ್ಲಿ ವಿಫಲರಾದರು.

ಈಗ ‘ಚೆಲುವಿನ ಚಿತ್ತಾರ’ದ ಜೋಡಿಯಾದ ಎಸ್‌.ನಾರಾಯಣ್‌ ಮತ್ತು ಗಣೇಶ್‌ ಒಂದುಗೂಡಿ ‘ಶೈಲೂ’ ಎಂಬ ಚಿತ್ರದಲ್ಲಿ ತೊಡಗಿಸಿಕೊಂಡಿರುವುದರ ಬೆನ್ನಲ್ಲೇ ‘ಮದುವೆ ಮನೆ’ ಚಿತ್ರದ ಪ್ರಕಟಣೆಯು ಹೊರಬಿದ್ದಿದೆ. ರುಬೀನಾ ರೆಹಮಾನ್‌ ನಿರ್ಮಿಸುತ್ತಿರುವ ಈ ಚಿತ್ರದ ನಿರ್ದೇಶಕರು ಸುನಿಲ್‌ ಕುಮಾರ್‌ ಸಿಂಗ್‌. ಶೇಖರ್‌ ಚಂದ್ರ ಛಾಯಾಗ್ರಹಣ, ಮಣಿಕಾಂತ್‌ ಕದ್ರಿ ಸಂಗೀತವಿರುವ ಈ ಚಿತ್ರ ಗಣೇಶ್‌ಗೆ ಮತ್ತೊಮ್ಮೆ ತಾರಾಮೌಲ್ಯವನ್ನು ತಂದುಕೊಡುವುದೇ ಎಂಬುದನ್ನು ಕಾದುನೋಡಬೇಕಿದೆ.

ಸೋಲೆಂಬುದು ಯಾವ ಕಲಾವಿದ-ನಿರ್ದೇಶಕರನ್ನೂ ಬಿಟ್ಟಿಲ್ಲ. ಕ್ರಿಕೆಟಿಗ ಸಚಿನ್‌ ತೆಂಡೂಲ್ಕರ್‌ ಸಹ ಬ್ಯಾಟಿಂಗ್‌ನಲ್ಲಿ ವಿಫಲಗೊಂಡಿರುವ ನಿದರ್ಶನಗಳಿವೆ. ಆದ್ದರಿಂದ ಗಣೇಶ್‌ ನಿರಾಶರಾಗದೆ, ಆತ್ಮಾವಲೋಕನ ಮಾಡಿಕೊಳ್ಳುವ ಮೂಲಕ ಕಣಕ್ಕಿಳಿದರೆ ಅವರ ಅಭಿಮಾನಿಗಳಿಗೆ ಸಂತೋಷವಾದೀತು. ಈ ನಿಟ್ಟಿನಲ್ಲಿ ‘ಮದುವೆ ಮನೆ’ ಚಿತ್ರ ಅವರಿಗೊಂದು ಚಿಮ್ಮುಹಲಗೆಯಾಗಿ ಪರಿಣಮಿಸಲಿ.

ವೆಬ್‌ದುನಿಯಾ ಓದುಗರೇ! ಕಾಮೆಂಟ್ ಮಾಡೋ ಮುನ್ನ ಇಲ್ಲೊಮ್ಮೆ ಓದಿ ನೋಡಿ!
ಇವನ್ನೂ ಓದಿ