ಎಲ್ದ್ರೆ ಹೋಗ್ಬಿಡ್ತಿಯಾ.... ಇದೆಲ್ಲಾ ಬೇಕಾ ನಿಂಗೆ ಎಂದು ಲೂಸ್ ಮಾದ ಅರೆ ಮತ್ತಿನಿಂದ ಹೇಳೋ ಡೈಲಾಗ್ ಇಂದಿಗೂ ಅವರ ಅಭಿಮಾನಿಗಳಿಗೆ ಇಷ್ಟ. ಕನ್ನಡ ಚಿತ್ರರಂಗದಲ್ಲಿ ಭೂಗತ ಲೋಕದ ಭಯಂಕರ ಸನ್ನಿವೇಶಗಳನ್ನು ಮಹಾನ್ ಎಂಬಂತೆ ಚಿತ್ರಿಸಿದ್ದರೂ, ಅವೆಲ್ಲಾ ಒಂದಲ್ಲಾ ಒಂದು ಕಾರಣಕ್ಕೆ ತೋಪೆದ್ದು ಮೂಲೆಗುಂಪಾಗಿತ್ತು.
ಆದರೆ, ಅದೇಕೋ ವಾಸ್ತವತೆಯನ್ನು ಸೂಕ್ಷ್ಮವಾಗಿ ಮನಗಂಡ ನಿರ್ದೇಶಕ ಸೂರಿ, 'ದುನಿಯಾ' ಚಿತ್ರದಲ್ಲಿ ಪುಡಿ ರೌಡಿ, ಬೀದಿ ಪೋಕರಿಯ ಪಾತ್ರಕ್ಕೆ ಲೂಸ್ ಮಾದ ಯೋಗೇಶ್‌ನನ್ನು ಆಯ್ಕೆ ಮಾಡಿಕೊಂಡಿದ್ದರು. ಅವರ ಆಯ್ಕೆಗೆ ಅಭಿಮಾನಿಗಳು ಉತ್ತಮ ರೀತಿಯಲ್ಲೇ ಸ್ಪಂದಿಸಿದರು.
ನಾಯಕನ ಪಾತ್ರಕ್ಕೆ ವಿಜಯ್, ಪೊಲೀಸ್ ಪಾತ್ರಕ್ಕೆ ಕಿಶೋರ್, ಅನುಭವಿ ಗೆಳೆಯನ ಪಾತ್ರಕ್ಕೆ ರಂಗಾಯಣ ರಘು, ಸಾಥ್ ನೀಡೋ ನಾಯಕಿಯ ಪಾತ್ರಕ್ಕೆ ರಶ್ಮಿ ಇವರೇ ಚಿತ್ರಕ್ಕೆ ಜೀವಾಳ. 'ದುನಿಯಾ' ಯಶಸ್ಸಿನಿಂದ ಎಲ್ಲರಿಗೂ ಅವಕಾಶದ ಬಾಗಿಲು ತೆರೆದು ಕೊಂಡಿತು.
ಏನೇ ಇರಲಿ, ಯೋಗೇಶ್ ಅವರೇ ಹೇಳುವಂತೆ ನಾಯಕನಿಗೆ ಸೌಂದರ್ಯವೇ ಮುಖ್ಯವಲ್ಲ. ಕಥೆಗೆ ಒಪ್ಪುವಂತ ಮೈಕಟ್ಟು, ಪ್ರತಿಭೆ ಇದ್ದರೆ ಸಾಕು ಎಂಬ ಸತ್ಯದ ಮಾತು ಬರುವಷ್ಟರ ಮಟ್ಟಿಗೆ ಚಿತ್ರೋದ್ಯಮದಲ್ಲಿ ಪಳಗಿದ್ದಾರೆ.
ಯೋಗೇಶ್ ಅದ್ಭುತ ಪ್ರತಿಭೆಗೆ ಸಾಕ್ಷಿ ಎಂಬಂತೆ ಈಗಾಗಲೇ ಸಾಕಷ್ಟು ಪ್ರಶಸ್ತಿಗಳೂ ಬಂದಿವೆ. ಆದರೂ ನನಗಿಂತ ಮತ್ತೊಬ್ಬರೇ ಮೇಲು ಎಂಬಂತೆ ದೊಡ್ಡ ಗುಣವನ್ನು ತೋರ್ಪಡಿಸುತ್ತಿದ್ದಾರೆ. ಇನ್ನೂ ಅಹಂ ಮೈಗೇರಿಸಿಕೊಳ್ಳದ ನಟ ಸದಾ ಉತ್ತುಂಗದಲ್ಲೇ ಇರಲು ನೀವೂ ಹಾರೈಸಿ.. ಅಂದಹಾಗೆ ಇವತ್ತು ಜುಲೈ 6, ಲೋಸ್‌ಮಾದನಿಗಿಂದು ಜನುಮ ದಿನ....