ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಓಡಿ ಓಡಿ ಸುಸ್ತಾದರೂ ದಾರಿಕಾಣದ ಜಿಂಕೆಮರಿ ರೇಖಾ (Rekha | Chithra | Jolly boy | kannada Actress)
EVENT
'ಜಿಂಕೆ ಮರಿ ಓಡ್ತಾ ಐತೆ ನೋಡ್ಲಾ ಮಗಾ' ಎಂಬ ಹಾಡು ಬಂದು ಸುಮಾರು ಹತ್ತು ವರ್ಷಗಳಾಗಿವೆ. ಆದರೂ ಸಹ ಅದರ ಜನಪ್ರಿಯತೆ ಕಮ್ಮಿಯಾಗಿಲ್ಲ. ಈ ಹಾಡನ್ನು ಒಳಗೊಂಡಿರುವ ದಿನೇಶ್‌ಬಾಬು ನಿರ್ದೇಶನದ 'ಚಿತ್ರ' ಎಂಬ ಚಿತ್ರವು ಕನ್ನಡ ಚಿತ್ರರಂಗಕ್ಕೆ ಹಲವು ಪ್ರತಿಭೆಗಳನ್ನು ಪರಿಚಯಿಸಿತು. ಆದರೆ ಆ ಹಾಡು ಜನಮಾನಸದಲ್ಲಿ ತಳವೂರಿದಷ್ಟು ಭದ್ರವಾಗಿ ಆ ಚಿತ್ರದ ನಾಯಕಿ ರೇಖಾ ನೆಲೆಯನ್ನು ಕಂಡುಕೊಳ್ಳಲು ಸರ್ಕಸ್‌ ನಡೆಸಬೇಕಾಗಿ ಬಂದಿದೆ.

ಕ್ಷಣ ಕ್ಷಣದ ತಾಜಾ ಸುದ್ದಿ, ವಿಶೇಷ ವರದಿ-ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

'ಚಿತ್ರ' ಎಂಬ ಮೊದಲ ಚಿತ್ರ ಯಶಸ್ಸು ಕಾಣುತ್ತಿದ್ದಂತೆ ಸುದೀಪ್‌ ಜೊತೆಯಲ್ಲಿ 'ಹುಚ್ಚ' ಚಿತ್ರದಲ್ಲಿ ಹಾಗೂ ಇಂದ್ರಜಿತ್‌ ಲಂಕೇಶರ 'ತುಂಟಾಟ' ಚಿತ್ರದಲ್ಲಿ ರೇಖಾ ಮಿಂಚಿದರು. ಈ ಚಿತ್ರಗಳ ಯಶಸ್ಸು ಅವರಿಗೆ ಭದ್ರ ಬುನಾದಿಯನ್ನು ನೀಡುತ್ತದೆ ಎಂದೇ ಭಾವಿಸಲಾಗಿತ್ತು. ಆದರೆ ಮಧ್ಯೆ ಮಧ್ಯೆ ಹಿಂದಿ-ತಮಿಳು-ತೆಲುಗು ಚಿತ್ರರಂಗಗಳಿಗೂ ಅವರು ಕಾಲಿಟ್ಟಿದ್ದರಿಂದ ಕನ್ನಡದೆಡೆಗೆ ಗಮನಹರಿಸಲು ಅವರಿಗೆ ಸಾಧ್ಯವಾಗಲಿಲ್ಲವೆನಿಸುತ್ತದೆ.

ಇಷ್ಟಾಗಿಯೂ 'ಚೆಲ್ಲಾಟ', 'ಹುಡುಗಾಟ', 'ತಮಾಷೆಗಾಗಿ', 'ಹೆತ್ತರೆ ಹೆಣ್ಣನ್ನೇ ಹೆರಬೇಕು', 'ಆಕ್ಸಿಡೆಂಟ್‌', 'ಗುಣವಂತ', 'ಪರಿಚಯ', 'ಮಸ್ತ್‌ ಮಜಾ ಮಾಡಿ' ಚಿತ್ರಗಳಲ್ಲಿ ಅವರು ಕಾಣಿಸಿಕೊಂಡರು. ಇವ್ಯಾವುವೂ ಕಳಪೆ ಚಿತ್ರಗಳಾಗಿರಲಿಲ್ಲ; ಆದರೆ ಅವರಿಗೊಂದು ಸ್ಟಾರ್‌ಡಂ ಕಟ್ಟಿಕೊಡುವಲ್ಲಿ ವಿಫಲವಾದವು.

ಇಷ್ಟೆಲ್ಲಾ ಪೀಠಿಕೆ ನೀಡಿದ್ದಕ್ಕೆ ಕಾರಣವಿದೆ. ಕಳೆದ ವಾರವಷ್ಟೇ ಬಿಡುಗಡೆಯಾದ 'ಜಾಲಿಬಾಯ್‌' ಚಿತ್ರವು ರೇಖಾಗೆ ಒಂದು ಇಮೇಜನ್ನು ನೀಡಲಿದೆ ಎಂದು ಭಾವಿಸಲಾಗಿತ್ತು. ದೂಧ್‌ಪೇಡಾ ಖ್ಯಾತಿಯ ದಿಗಂತ್ ಈ ಚಿತ್ರದಲ್ಲಿ ಅವರಿಗೆ ನಾಯಕ. ಆದರೆ ಹೇಳಿಕೊಳ್ಳುವಂಥ ಉತ್ತಮ ಸಾಧನೆಯನ್ನು ಈ ಚಿತ್ರ ಮಾಡಿಲ್ಲವಾದ್ದರಿಂದ ಲಭ್ಯವಿದ್ದ ಒಂದು ಅವಕಾಶವೂ ಅವರಿಗೆ ತಪ್ಪಿಹೋದಂತಾಗಿದೆ ಎನ್ನಬಹುದೇನೋ?

ಸೋಲು-ಗೆಲುವುಗಳು ಎಲ್ಲಾ ರಂಗದಲ್ಲೂ ಇದ್ದದ್ದೇ. ಮಹತ್ವಾಕಾಂಕ್ಷೆ ಈಡೇರಲಿಲ್ಲವೆಂದು ರೇಖಾ ಧೃತಿಗೆಡುವುದು ಬೇಡ. ಉತ್ತಮ ಕಥೆ-ಚಿತ್ರಕಥೆಯುಳ್ಳ ಚಿತ್ರಗಳನ್ನು ಆರಿಸಿಕೊಂಡು ತಮ್ಮ ಪ್ರತಿಭೆಯನ್ನು ಬೆಳಗುವಂತಾಗಲಿ ಎಂಬುದೇ ನಮ್ಮ ಹಾರೈಕೆ.

ವೆಬ್‌ದುನಿಯಾ ಓದುಗರೇ! ಕಾಮೆಂಟ್ ಮಾಡೋ ಮುನ್ನ ಇಲ್ಲೊಮ್ಮೆ ಓದಿ ನೋಡಿ!
ಇವನ್ನೂ ಓದಿ