ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ರೆಬಲ್ ಸ್ಟಾರ್ ಅಂಬಿ ಮುಖ್ಯಮುಂತ್ರಿ ಆದ್ರೆ 'ಸ್ವಯಂಕೃಷಿ' ಫಲ ಕೊಡುತ್ತಾ? (Rebal Star | Ambarish | Swayam Krishi | Kannada Movies)
EVENT
ಅರೆ! ಅಂಬರೀಷ್‌ ಮಂಡ್ಯದ ಕಡೆಯವರು ಎಂಬುದೇನೋ ಗೊತ್ತು. ಸಿನಿಮಾದಲ್ಲಿ ಒಂದು ಸುತ್ತು ಅಭಿಮಾನಿಗಳನ್ನು ರಂಜಿಸಿದ ನಂತರ ರಾಜಕೀಯದಲ್ಲೂ ಮಿಂಚಿದರು ಎಂಬುದೂ ಗೊತ್ತು. ಆದರೆ ಯಾರಿಗೂ ಹೇಳದೆ ಅವರು 'ಸ್ವಯಂಕೃಷಿ'ಯಲ್ಲಿ ತೊಡಗಿಸಿಕೊಂಡಿದ್ದು ಯಾವಾಗ? ಎಂದು ಗೊಂದಲಗೊಳ್ಳದಿರಿ. ನಾವೀಗ ಹೇಳುತ್ತಿರುವುದು 'ಸ್ವಯಂಕೃಷಿ' ಚಿತ್ರದ ವಿಷಯವನ್ನು.

ಕ್ಷಣ ಕ್ಷಣದ ತಾಜಾ ಸುದ್ದಿ, ವಿಶೇಷ ವರದಿ-ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ಎಸ್‌.ಕೆ. ಇಂಡಿಯ ಎಂಟರ್‌ಟೈನ್‌ಮೆಂಟ್ಸ್‌ ಪ್ರೈವೇಟ್‌ ಲಿಮಿಟೆಡ್‌ ಸಂಸ್ಥೆಯಿಂದ ಅರ್ಪಣೆಯಾಗುತ್ತಿರುವ 'ಸ್ವಯಂಕೃಷಿ' ಚಿತ್ರದಲ್ಲಿ ರೆಬೆಲ್‌ಸ್ಟಾರ್ ಅಂಬರೀಷ್‌ರವರ ಪಾತ್ರ ಸೇರ್ಪಡೆಯಾಗಿದ್ದು, ಇದರಲ್ಲಿ ಅವರು ಮುಖ್ಯಮಂತ್ರಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ವೀರೇಂದ್ರಬಾಬು ನಟಿಸಿ ನಿರ್ದೇಶಿಸುತ್ತಿರುವ ಈ ಚಿತ್ರದ ಪ್ರಮೋಗಳು ಈಗಾಗಲೇ ಸಂಚಲನೆಯನ್ನು ಸೃಷ್ಟಿಸಿದ್ದು ಚಿತ್ರದ ನಿರೀಕ್ಷೆಯು ಹೆಚ್ಚಳವಾಗುವುದಕ್ಕೆ ಅಂಬಿ ಸೇರ್ಪಡೆ ಕಾರಣವಾಗಿದೆ.

ಜನಾರ್ಧನ್‌ ಛಾಯಾಗ್ರಹಣ, ಅಭಿಮನ್‌ ರಾಯ್‌ ಸಂಗೀತವಿರುವ ಈ ಚಿತ್ರದ ಇತರ ತಂತ್ರಜ್ಞರಲ್ಲಿ ಎಸ್‌.ಆರ್‌.ಸುಧಾಕರ್‌, ಶಿವರಾಜ್‌ ಮೇಹೂ, ವಿಜಯ್‌ ಚಂಡೂರ್‌, ಮಹಾಂತೇಶ್‌ ಸೇರಿದ್ದಾರೆ. ಬಾಕಿಯಿರುವ ಸಣ್ಣಪುಟ್ಟ ಕೆಲಸಗಳನ್ನು ಮುಗಿಸಿಕೊಂಡು ಚಿತ್ರವು ಸದ್ಯದಲ್ಲಿಯೇ ತೆರೆಕಾಣಲಿದೆ ಎನ್ನುತ್ತದೆ ಚಿತ್ರತಂಡ.

ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿರುವ ನವನಾಯಕರ ಮಧ್ಯೆ ವೀರೇಂದ್ರಬಾಬು ವಿಭಿನ್ನತೆಯನ್ನು ಕಾಯ್ದುಕೊಂಡಿದ್ದಾರೆ. ಏಕೆಂದರೆ ಎಂಟ್ರಿ ಕೊಡುವಾಗಲೇ ನಟನೆ ಮಾತ್ರವೇ ಅಲ್ಲದೇ ಚಿತ್ರದ ಕಥೆ ಮತ್ತು ನಿರ್ದೇಶನದ ಹೊಣೆಗಾರಿಕೆಯನ್ನೂ ಅವರು ಹೊತ್ತುಕೊಂಡಿರುವುದು ಅಚ್ಚರಿ ಮತ್ತು ನಿರೀಕ್ಷೆಗೆ ಕಾರಣವಾಗಿದೆ. ಅವರಿಗೆ ಶುಭವಾಗಲೆಂದು ಹಾರೈಸೋಣ.

ವೆಬ್‌ದುನಿಯಾ ಓದುಗರೇ! ಕಾಮೆಂಟ್ ಮಾಡೋ ಮುನ್ನ ಇಲ್ಲೊಮ್ಮೆ ಓದಿ ನೋಡಿ!
ಇವನ್ನೂ ಓದಿ