ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ದುಷ್ಟ ಹುಡುಗನಿಗಾಗಿ ಮುಗಿಬಿದ್ದ ನಿರ್ಮಾಪಕರು (Dushta | Pankaj | S. Narayan | Mareyalare)
PR
ಪಂಕಜ ಎಂದರೆ ತಾವರೆ ಹೂವು. ಅದು ಹುಡುಗಿಯ ಹೆಸರೂ ಆಗುತ್ತದೆ. ಪಂಕಜ್‌ ಎಂದರೆ ಹುಡುಗನ ಹೆಸರು. ಆತ ಬರೀ ಹುಡುಗನಲ್ಲ. 'ದುಷ್ಟ' ಹುಡುಗ. ನಿರ್ದೇಶಕ ಎಸ್‌.ನಾರಾಯಣ್‌ರವರ 'ದುಷ್ಟ' ಮಗ. ಹೀಗಾಗಿ ಆತ 'ದುಷ್ಟ' ಪಂಕಜ್‌.....

ಹೀಗೆಲ್ಲಾ ಬರೆದರೆ ಯಾರಿಗೆ ತಾನೇ ಗಾಬರಿಯಾಗೋಲ್ಲ ಹೇಳಿ?! ಆದರೆ ನಾವು ಬರೆದಿರುವುದು ಅಪ್ಪಟ ಹದಿನಾರಾಣೆ ಸತ್ಯ. 'ದುಷ್ಟ' ಸಿನಿಮಾದ ಫಲಿತಾಂಶಗಳೇನೇ ಇರಲಿ, ಅದರ ನಾಯಕ ಪಾತ್ರವನ್ನು ಗಮನಾರ್ಹವಾಗಿ ನಿರ್ವಹಿಸಿರುವ ಪಂಕಜ್‌ ಉದ್ಯಮದವರಿಗೆ ಮೆಚ್ಚುಗೆಯಾಗಿದ್ದಾನೆ. ಹೀಗಾಗಿ ನಿರ್ಮಾಪಕರು ಅವನ ಕಾಲ್‌ಶೀಟ್‌ಗೆ ಮುಗಿಬೀಳುವುದು ಸಹಜವಲ್ಲವೇ?

ಕ್ಷಣ ಕ್ಷಣದ ತಾಜಾ ಸುದ್ದಿ, ವಿಶೇಷ ವರದಿ-ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ವಿಷಯ ಏನಪ್ಪಾ ಅಂದ್ರೆ, ಕೇವಲ 12 ಗಂಟೆಯಲ್ಲಿ 'ಪೊಲೀಸ್‌ ಸ್ಟೋರಿ-3' ಎಂಬ ಚಿತ್ರವನ್ನು ನಿರ್ಮಿಸಿದ ನಿರ್ಮಾಪಕ ಶಿವಾನಂದ್‌ರವರ 'ಮರೆಯಲಾರೆ' ಎಂಬ ಹೊಸ ಚಿತ್ರಕ್ಕೆ ಪಂಕಜ್‌ ನಾಯಕನಾಗಿ ಆಯ್ಕೆಯಾಗಿದ್ದಾನೆ. ಈ ಚಿತ್ರದ ಮೂಲಕ ಪಂಕಜ್‌ ಮೊದಲ ಬಾರಿಗೆ ಹೊರಗಿನ ನಿರ್ಮಾಪಕರ ಚಿತ್ರಕ್ಕೆ ಸಹಿ ಹಾಕಿದ್ದಾನೆ ಎಂಬುದು ಗಮನಾರ್ಹ ಸಂಗತಿ.

ಪಂಕಜ್‌ ಜೊತೆಯಲ್ಲಿ ಶರಣ್ಯ ಮೋಹನ್‌ ನಾಯಕಿಯಾಗಿ ನಟಿಸಲಿದ್ದಾರೆ. ಈಕೆ ಈಗಾಗಲೇ ತಮಿಳು-ತೆಲುಗಿನಲ್ಲಿ ಜನಪ್ರಿಯ ತಾರೆಯಂತೆ. ಛಾಯಾಗ್ರಾಹಕ ಸೆಲ್ವಮ್‌ ಈ ಚಿತ್ರದಿಂದ ನಿರ್ದೇಶಕನ ಪಟ್ಟವನ್ನೂ ಏರಲಿದ್ದಾರಂತೆ. ಆಗಸ್ಟ್‌ ತಿಂಗಳಲ್ಲಿ ಚಿತ್ರವು ಸೆಟ್ಟೇರಲಿದ್ದು ಬೆಂಗಳೂರು, ಚನ್ನರಾಯಪಟ್ಟಣ ಹಾಗೂ ಮಂಡ್ಯ ಮೊದಲಾದ ಕಡೆಗಳಲ್ಲಿ ಚಿತ್ರೀಕರಣವನ್ನು ನಡೆಸಲಾಗುವುದು ಎಂದು 'ಪ್ರಥಮ ಮಾಹಿತಿ ವರದಿ'ಯು (ಎಫ್‌.ಐ.ಆರ್.?!!) ತಿಳಿಸಿದೆ.

ಹೋಮ್‌ ಪ್ರೊಡಕ್ಷನ್‌ ಚಿತ್ರಗಳಲ್ಲಿ ಚಿಗುರಿದ್ದ ಪಂಕಜ್‌ ಈ ಚಿತ್ರದ ಮ‌ೂಲಕ ಅರಳಲಿ ಎಂದು ಹಾರೈಸೋಣವೇ?

ವೆಬ್‌ದುನಿಯಾ ಓದುಗರೇ! ಕಾಮೆಂಟ್ ಮಾಡೋ ಮುನ್ನ ಇಲ್ಲೊಮ್ಮೆ ಓದಿ ನೋಡಿ!
ಇವನ್ನೂ ಓದಿ