ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ನಿರೀಕ್ಷೆಯನ್ನು ಹೆಚ್ಚಿಸಿರುವ ಕಲಾವಿದ-ನಿರ್ದೇಶಕ ಜೋಡಿ (Shailu | Ko Ko | R. Chandru | Shrinagara Kitty)
EVENT
ಚಿತ್ರರಂಗದಲ್ಲಿ ಹಲವು ಸ್ವರೂಪದ ಕಾಂಬಿನೇಷನ್‌ಗಳು ವರ್ಕ್ ಔಟ್‌ ಆಗುವುದುಂಟು. ಒಮ್ಮೆ ಹಿಟ್‌ ಚಿತ್ರವನ್ನು ನೀಡಿ ಬೇರ್ಪಟ್ಟ ಜೋಡಿಗಳು ನಿರಂತರವಾಗಿ ವಿಫಲಗೊಂಡ ನಂತರ ಮತ್ತೊಮ್ಮೆ ಹಿಟ್‌ ಚಿತ್ರವನ್ನು ನೀಡುವುದಕ್ಕಾಗಿ ಮತ್ತೆ ಜೊತೆಯಾಗುವುದು ಇಂಥದ್ದೊಂದು ಬಗೆ. ಸರಣಿ ಸೋಲನ್ನು ದಾಖಲಿಸಿದ ಗೋಲ್ಡನ್‌ ಸ್ಟಾರ್ ಗಣೇಶ್ ಹಾಗೂ ತಮ್ಮ ನಿರ್ದೇಶನದ 'ದುಷ್ಟ' ಚಿತ್ರವು ವಿಫಲಗೊಂಡಿದ್ದಕ್ಕೆ ಸಾಕ್ಷಿಯಾಗಿರುವ ಎಸ್‌.ನಾರಾಯಣ್‌ ಮತ್ತೆ ಒಟ್ಟಿಗೆ ಸೇರಿ 'ಶೈಲೂ' ಎಂಬ ಚಿತ್ರದಲ್ಲಿ ತೊಡಗಿಸಿಕೊಂಡಿರುವುದು ಇದಕ್ಕೊಂದು ನಿದರ್ಶನ. ಇಂಥ ಸಂಯೋಜನೆಯು ಒಂದು ಮಟ್ಟಕ್ಕೆ ನಿರೀಕ್ಷೆಯನ್ನು ಹುಟ್ಟಿಸುತ್ತದೆ.

ಕ್ಷಣ ಕ್ಷಣದ ತಾಜಾ ಸುದ್ದಿ, ವಿಶೇಷ ವರದಿ-ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ಆದರೆ ತಮ್ಮದೇ ಆದ ನೆಲೆಗಟ್ಟಿನಲ್ಲಿ ಪ್ರತ್ಯೇಕವಾಗಿ ಯಶಸ್ಸನ್ನು ದಾಖಲಿಸಿದ ಇಬ್ಬರು ಒಟ್ಟಿಗೆ ಸೇರಿದಾಗ ಇಂಥ ನಿರೀಕ್ಷೆಯ ಪ್ರಮಾಣವು ಇಮ್ಮಡಿಯಾಗುತ್ತದೆ. ನಾಯಕನಟ ಶ್ರೀನಗರ ಕಿಟ್ಟಿ ಮತ್ತು ನಿರ್ದೇಶಕ ಆರ್‌.ಚಂದ್ರು ಒಟ್ಟಿಗೆ ಸೇರಿರುವ ಹಿನ್ನೆಲೆಯಲ್ಲಿ ಈ ಮಾತನ್ನು ಬರೆಯಬೇಕಾಗಿ ಬಂತು.

'ಹುಡುಗರು' ಮತ್ತು 'ಸಂಜು ವೆಡ್ಸ್‌ ಗೀತಾ' ಚಿತ್ರಗಳು ಯಶಸ್ಸು ಕಂಡಿರುವುದರಿಂದ ಶ್ರೀನಗರ ಕಿಟ್ಟಿಯ ಕುರಿತಾಗಿ ಚಿತ್ರರಂಗದಲ್ಲಿ ಯಾವ ರೀತಿಯ ಹವಾ ಸೃಷ್ಟಿಯಾಗಿದೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯ. ಈ ಕಡೆಯಲ್ಲಿ 'ಮೈಲಾರಿ' ಚಿತ್ರದ ಯಶಸ್ಸಿನಿಂದ ಬೀಗುತ್ತಿರುವ ನಿರ್ದೇಶಕ ಆರ್‌.ಚಂದ್ರು ದಿನಕ್ಕೊಂದು ವೈವಿಧ್ಯಮಯ ಸುದ್ದಿಗಳಿಂದ 'ಕಲರ್‌ಫುಲ್‌' ನಿರ್ದೇಶಕ ಎಂಬ ಮೆಚ್ಚುಗೆಗೆ ಪಾತ್ರರಾಗಿರುವುದು ನಿಮಗೆ ಗೊತ್ತಿರುವುದೇ. ಈ ಇಬ್ಬರೂ 'ಕೋ ಕೋ' ಚಿತ್ರದಲ್ಲಿ ಒಟ್ಟಾಗಿ ಸೇರಿರುವುದರಿಂದ ಮತ್ತಿನ್ಯಾವ ಜಾದೂ ಸೃಷ್ಟಿಯಾಗುವುದೋ ಎಂದು ಕಾದುನೋಡುವಂತಾಗಿದೆ.

ಅದಕ್ಕೆ ಕಾರಣವೂ ಇಲ್ಲದಿಲ್ಲ. ಈ ಚಿತ್ರದ ತಾರಾಗಣದಲ್ಲಿ ಯಶಸ್ವೀ ನಟ ಶ್ರೀನಗರ ಕಿಟ್ಟಿಯ ಜೊತೆಜೊತೆಗೆ ಬೇರೆ ಬೇರೆ ಭಾಷೆಗಳ ಹಲವು ಪ್ರತಿಭಾವಂತರನ್ನು ಕಲೆಹಾಕುವಲ್ಲಿ ಚಂದ್ರು ಯಶಸ್ವಿಯಾಗಿದ್ದಾರೆ. ತೆಲುಗಿನ 'ನು ವಸ್ತಾನಂಟೆ ನೇನು ಒದ್ದಂಟಾನ' ಮತ್ತು 'ಮಗಧೀರ' ಚಿತ್ರಗಳಲ್ಲಿ ಜನಪ್ರಿಯತೆಯನ್ನು ಗಳಿಸಿದ ನಟ ಶ್ರೀಹರಿ ಮತ್ತು ತಮಿಳು-ತೆಲುಗು-ಹಿಂದಿ-ಕನ್ನಡ ಚಿತ್ರಗಳಲ್ಲಿ ಜನಪ್ರಿಯತೆಯನ್ನು ಸಂಪಾದಿಸಿರುವ ರವಿಕಾಳೆ ಸೇರ್ಪಡೆಯಾಗಿರುವುದು ಸದ್ಯದ ವಿಶೇಷ.

ಈಗಾಗಲೇ ಈ ಚಿತ್ರದ ಕಥೆ ಅದ್ಭುತವಾಗಿದೆ ಎಂಬ ಮಾತುಗಳು ಕೇಳಿಬರುತ್ತಿದ್ದು, ಎಲ್ಲವೂ ಅಂದುಕೊಂಡಂತೆಯೇ ಆದಲ್ಲಿ ಚಂದ್ರು ಮತ್ತು ಶ್ರೀನಗರ ಕಿಟ್ಟಿ ಜೋಡಿಯು ಕನ್ನಡದ ಗಡಿದಾಟಿ ಜನಪ್ರಿಯತೆಯನ್ನು ದಾಖಲಿಸುವ ಸಾಧ್ಯತೆಯಿದೆ. ಏಕೆಂದರೆ ಒಂದಕ್ಕಿಂತ ಹೆಚ್ಚು ಭಾಷೆಗಳಲ್ಲಿ ಜನಪ್ರಿಯರಾದವರನ್ನು ತಾರಾಗಣದಲ್ಲಿ ಸೇರಿಸಿಕೊಂಡಾಗ ಚಿತ್ರವನ್ನು ಡಬ್‌ ಮಾಡುವುದು ಸುಲಭ. ಇದೂ ಸಹ ನಿರ್ದೇಶಕ ಚಂದ್ರುರವರ ಯೋಜನೆಯಾಗಿರಬಹುದು. ಹಾಗೇನಾದರೂ ಆದಲ್ಲಿ ಅದು ಹೆಮ್ಮೆಯ ವಿಷಯವಲ್ಲವೇ?

ವೆಬ್‌ದುನಿಯಾ ಓದುಗರೇ! ಕಾಮೆಂಟ್ ಮಾಡೋ ಮುನ್ನ ಇಲ್ಲೊಮ್ಮೆ ಓದಿ ನೋಡಿ!
ಇವನ್ನೂ ಓದಿ