ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಖಾಕಿ ಪಾತ್ರಗಳಲ್ಲೇ ಮಿಂಚುತ್ತಿರುವ ರವಿಕಾಳೆ (Ravikaale | Cyanide | Jackie | Kannada Movies)
Event
EVENT
ರವಿಕಾಳೆ ಓರ್ವ ಪ್ರತಿಭಾವಂತ ಕಲಾವಿದ ಎಂಬುದರಲ್ಲಿ ಸಂದೇಹವಿಲ್ಲ. ಹಿಂದಿ, ತಮಿಳು, ತೆಲುಗು ಚಿತ್ರರಂಗಗಳಲ್ಲಿ ಇವರದ್ದು ದೊಡ್ಡ ಹೆಸರು. ಈಚೀಚೆಗೆ ಕನ್ನಡ ಚಿತ್ರಗಳಲ್ಲೂ ಹೆಚ್ಚೆಚ್ಚು ಕಾಣಿಸಿಕೊಳ್ಳುತ್ತಿರುವ ರವಿಕಾಳೆಯವರಿಗೆ ಪೊಲೀಸ್‌ ಅಧಿಕಾರಿಯ ಪಾತ್ರವನ್ನೇ ನೀಡಲಾಗುತ್ತಿದೆ ಎಂಬುದು ಕುತೂಹಲಕರ ಸಂಗತಿ.

ಕ್ಷಣ ಕ್ಷಣದ ತಾಜಾ ಸುದ್ದಿ, ವಿಶೇಷ ವರದಿ-ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ಎ.ಎಂ.ಆರ್‌.ರಮೇಶ್‌ ನಿರ್ದೇಶನದ 'ಸೈನೈಡ್‌' ಚಿತ್ರದಲ್ಲಿ ಶಿವರಾಸನ್‌ ಪಾತ್ರದಲ್ಲಿ ರವಿಕಾಳೆ ಅಭಿನಯಿಸಿದ್ದು ಈಗಲೂ ಕಣ್ಣಿಗೆ ಕಟ್ಟಿದಂತಿದೆ. ಅದಾದ ನಂತರ ದುಷ್ಟ ಪೊಲೀಸ್‌ ಅಧಿಕಾರಿಯ ಪಾತ್ರ ಇಲ್ಲವೇ ರೌಡಿ ಪಾತ್ರಗಳಲ್ಲೇ ಅವರು ಕಾಣಿಸಿಕೊಳ್ಳಬೇಕಾಗಿ ಬಂತು. ಹೀಗೆ ನೆಗೆಟಿವ್‌ ಛಾಯೆಯ ಪಾತ್ರಗಳಲ್ಲೇ ಕಾಣಿಸಿಕೊಳ್ಳಬೇಕಾಗಿ ಬಂದಿರುವುದಕ್ಕೆ ಅವರ ಚಹರೆಯೇ ಕಾರಣವೇ ಎಂಬುದನ್ನು ಅವರೇ ಹೇಳಬೇಕು.

ಹೀಗೆ ಕನ್ನಡದಲ್ಲಿ 'ಸೈನೈಡ್‌', 'ಜಾಕಿ', 'ಡೆಡ್ಲಿ-2', 'ಮೈಲಾರಿ' ಮೊದಲಾದ ಚಿತ್ರಗಳಲ್ಲಿ ನಟಿಸಿರುವ ರವಿಕಾಳೆಗೆ ಇವುಗಳ ಪೈಕಿ ನಿಮ್ಮ ಅಚ್ಚುಮೆಚ್ಚಿನ ಪಾತ್ರ ಯಾವುದು ಎಂದು ಕೇಳಿದರೆ 'ಸೈನೈಡ್‌' ಚಿತ್ರದಲ್ಲಿನ ಶಿವರಾಸನ್‌ ಪಾತ್ರ ಎಂದು ಥಟ್ಟನೇ ಹೇಳುತ್ತಾರೆ. ಸದ್ಯಕ್ಕೆ ಅವರು ಆರ್‌.ಚಂದ್ರು ನಿರ್ದೇಶನದ 'ಕೋ ಕೋ' ಚಿತ್ರದಲ್ಲಿ ನಟಿಸುತ್ತಿದ್ದಾರೆ. ಆದರೆ ಇದರಲ್ಲೂ ಅವರು ದುಷ್ಟ ಪೊಲೀಸ್‌ ಅಧಿಕಾರಿಯಾಗಿಯೇ ಕಾಣಿಸಿಕೊಳ್ಳಲಿದ್ದಾರಂತೆ.

ಬಾಹ್ಯ ಚಹರೆಯ ಕುರಿತು ತಲೆಕೆಡಿಸಿಕೊಳ್ಳದೇ ಅಭಿನಯದ ಕಡೆಗೆ ಗಮನ ನೆಟ್ಟು ಯಶಸ್ಸು ದಾಖಲಿಸಿದ ಹಲವು ಕಲಾವಿದರ ನಿದರ್ಶನಗಳನ್ನು ನಾವು ಕಾಣಬಹುದು. ರಜನೀಕಾಂತ್‌, ವಡಿವೇಲು, ಸೆಂದಿಲ್‌, ಗೌಂಡಮಣಿ, ಚತುರ್ಭಾಷಾ ನಟಿ ಸರಿತಾ, ಹಿಂದಿಯ ಓಂಪುರಿ, ಕನ್ನಡದ ಕರಿಬಸವಯ್ಯ, ಸಾಧುಕೋಕಿಲಾ, ಬುಲೆಟ್‌ ಪ್ರಕಾಶ್‌ ಹೀಗೆ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಇವರ ಪಟ್ಟಿಗೆ ರವಿಕಾಳೆ ಸೇರ್ಪಡೆಯಾಗಿದ್ದಾರೆ. ಇವರ ಪ್ರತಿಭೆ ಇವರನ್ನು ಕೀರ್ತಿಯ ಉತ್ತುಂಗಕ್ಕೆ ಒಯ್ಯಲಿ ಎಂದು ಹಾರೈಸೋಣ.

ವೆಬ್‌ದುನಿಯಾ ಓದುಗರೇ! ಕಾಮೆಂಟ್ ಮಾಡೋ ಮುನ್ನ ಇಲ್ಲೊಮ್ಮೆ ಓದಿ ನೋಡಿ!
ಇವನ್ನೂ ಓದಿ