ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » 'ಮಿಸ್ಟರ್ ಡೂಪ್ಲಿಕೇಟ್‌' ಯಶಸ್ಸಿನ ನಿರೀಕ್ಷೆಯಲ್ಲಿರುವ ಕೋಡ್ಲು ರಾಮಕೃಷ್ಣ (Mr. Duplicate | Kodlu Ramakrishna | Dighanth | Prajwal Devaraj)
Event
EVENT
ಒಂದು ಚಿತ್ರದ ಫಲಿತಾಂಶದ ಹಿಂದೆ ಯಾರದೆಲ್ಲಾ ಭವಿಷ್ಯ ಅಡಗಿರುತ್ತದೆ ಎಂಬುದನ್ನು ಒಮ್ಮೆ ಕಲ್ಪಿಸಿಕೊಂಡರೆ ಅಚ್ಚರಿಯಾಗುತ್ತದೆ. ಚಿತ್ರ ನಿರ್ಮಾಪಕನಾದವನು ತಾನು ಸುರಕ್ಷಿತವಾಗಿರಬೇಕು ಎಂಬ ದೃಷ್ಟಿಯಿಂದ ಚಿತ್ರದ ಗಳಿಕೆ ಚೆನ್ನಾಗಿರಲಿ, ಚಿತ್ರವು ಸೂಪರ್ ಹಿಟ್‌ ಆಗಲಿ ಎಂದು ಆಶಿಸುವುದು ಸಹಜವೇ.

ಕ್ಷಣ ಕ್ಷಣದ ತಾಜಾ ಸುದ್ದಿ, ವಿಶೇಷ ವರದಿ-ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ಆದರೆ 'ಮಿಸ್ಟರ್ ಡೂಪ್ಲಿಕೇಟ್‌' ಚಿತ್ರಕ್ಕೆ ಸಂಬಂಧಿಸಿ ಹೇಳುವುದಾದರೆ ಈ ಚಿತ್ರದಲ್ಲಿ ನಟಿಸಿರುವ ದಿಗಂತ್‌ ಹಾಗೂ ಪ್ರಜ್ವಲ್‌ ದೇವರಾಜ್‌ರವರೂ ಸಹ ಯಶಸ್ಸಿಗಾಗಿ ಚಾತಕಪಕ್ಷಿಗಳ ಹಾಗೆ ಕಾಯುತ್ತಿರುತ್ತಾರೆಂಬುದು, ಮತ್ತು ಈ ಪಟ್ಟಿಗೆ ಚಿತ್ರ ನಿರ್ದೇಶಕ ಕೋಡ್ಲು ರಾಮಕೃಷ್ಣ ಕೂಡಾ ಸೇರುತ್ತಾರೆಂಬುದು ಸತ್ಯ.

ಲಾಯರ್‌ಗಿರಿ ಮಾಡಬೇಕೆಂದು ದೂರದ ತೀರ್ಥಹಳ್ಳಿಯಿಂದ ಈ ಮಾಯಾನಗರಿಗೆ ಬಂದ ಕೋಡ್ಲು ರಾಮಕೃಷ್ಣ ಅದ್ಹೇಗೆ ಚಿತ್ರರಂಗದೆಡೆಗೆ ಆಕರ್ಷಿತರಾದರೋ ಗೊತ್ತಿಲ್ಲ. ಇವರ ನಿರ್ದೇಶನದ ಮೊದಲ ಚಿತ್ರವಾದ 'ಬಿಸಿಲು ಬೆಳದಿಂಗಳು' ಸೂಪರ್‌ಹಿಟ್‌ ಚಿತ್ರವಲ್ಲದಿದ್ದರೂ ಇವರ ಮೇಲೆ ಗಾಂಧಿನಗರವು ಕಣ್ಣುಹಾಯಿಸುವುದಕ್ಕೆ ಕಾರಣವಾಯಿತು.

ನಂತರದಲ್ಲಿ ಇವರು 'ಮುರಳೀಗಾನ ಅಮೃತಪಾನ', 'ಉದ್ಭವ', 'ಯಾರಿಗೂ ಹೇಳ್ಬೇಡಿ', 'ತಮಾಷೆಗಾಗಿ' ಸೇರಿದಂತೆ ಇನ್ನೂ ಹಲವು ಚಿತ್ರಗಳನ್ನು ನಿರ್ದೇಶಿಸಿದರು. ಇವುಗಳ ಪೈಕಿ ಬಿ.ವಿ.ವೈಕುಂಠರಾಜುರವರ ಕೃತಿಯನ್ನು ಆಧರಿಸಿದ್ದ 'ಉದ್ಭವ' ಚಿತ್ರವು ಕೋಡ್ಲು ರಾಮಕೃಷ್ಣರಿಗೆ ಕೀರ್ತಿಯನ್ನು ತಂದುಕೊಟ್ಟಿತು. ಆದರೆ ಕಾಲಾನಂತರದಲ್ಲಿ ರಾಮಕೃಷ್ಣ ಅದೇಕೋ ಏನೋ ಮಸುಕಾಗತೊಡಗಿದರು. ಈಗ ಉದ್ಯಮದಲ್ಲಿನ ಅವರ ಸ್ಥಾನವು ಭದ್ರವಾಗಬೇಕೆಂದರೆ ಸದರಿ 'ಮಿಸ್ಟರ್ ಡೂಪ್ಲಿಕೇಟ್‌' ಚಿತ್ರವು ಉತ್ತಮ ಫಲಿತಾಂಶವನ್ನು ದಾಖಲಿಸಬೇಕಿದೆ ಎಂಬುದು ಸತ್ಯ.

ಕಶ್ಯಪ್‌ ದಾಕೋಜು ನಿರ್ಮಿಸಿರುವ ಈ ಚಿತ್ರದ ಕಥೆ ಮತ್ತು ಸಂಭಾಷಣೆ ರಾಘವ ಅವರದ್ದು. ಮನೋಮ‌ೂರ್ತಿ ಸಂಗೀತವನ್ನು ನೀಡಿದ್ದಾರೆ. ನವೀನ್‌ ಸುವರ್ಣ ಛಾಯಾಗ್ರಹಣ, ಬಸವರಾಜ ಅರಸ್‌ ಸಂಕಲನ ಚಿತ್ರಕ್ಕಿದೆ. ಚಿತ್ರವು ಯಶಸ್ಸನ್ನು ದಾಖಲಿಸಿ ಎಲ್ಲರ ಭವಿತವ್ಯವನ್ನು ಬೆಳಗಲಿ ಎಂದು ಹಾರೈಸುವ.

ವೆಬ್‌ದುನಿಯಾ ಓದುಗರೇ! ಕಾಮೆಂಟ್ ಮಾಡೋ ಮುನ್ನ ಇಲ್ಲೊಮ್ಮೆ ಓದಿ ನೋಡಿ!
ಇವನ್ನೂ ಓದಿ